ನಿರಂತರ ಮಳೆಯಿಂದಾಗಿ ಮನೆ ಗೋಡೆ ಕುಸಿತ, ತಪ್ಪಿದ ದುರಂತ..!

ಹುಬ್ಬಳ್ಳಿ: ನಿರಂತರ ಮಳೆಯಿಂದಾಗಿ ಮನೆಯ ಗೋಡೆ ಸಂಪೂರ್ಣವಾಗಿ ಕುಸಿದು ಬಾರಿ ದುರಂತ ತಪ್ಪಿದ ಘಟನೆ ಇಂದು ಮುಂಜಾನೆ ಹುಬ್ಬಳ್ಳಿ ನಗರದ ಉಣಕಲ್ ಗ್ರಾಮದ ಸಾಯಿನಗರದಲ್ಲಿ ನಡೆದಿದೆ. ಸಾಯಿನಗರ ನಿವಾಸಿ ಕಲ್ಲಪ್ಪ ಸೊಲಬಪ್ಪ ನವಲಗುಂದ ಅವರ ಮನೆಯು ನಿರಂತ ಮಳೆಯಿಂದಾಗಿ ಕುಸಿದಿದೆ ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ, ಮನೆಯ ಒಂದು ಭಾಗ ಸಂಪೂರ್ಣ ಕುಸಿದು ಬಿದ್ದಿದ್ದು ಸಣ್ಣ ವಯಸ್ಸಿನ 4 ಮಕ್ಕಳ ಹಾಗೂ ಕುಟುಂಬಸ್ಥರು ಸ್ವಲ್ಪದರಲ್ಲೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ ಪರಿಹಾರ ನೀಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment