ಜ್ಯೋತಿ ಬೆಳಗಿಸುವ ಮೂಲಕ ಮಹಾನಾಯಕ ಬ್ಯಾನರ್ಗೆ ಪುಷ್ಪಾರ್ಚನೆ-ಬಸವರಾಜ ರನ್ನರ..!

ರಾಯಚೂರು: ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದ ಅಮಿನಗಡ ಗ್ರಾಮದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಬಸವ ರಾಜ್ ರನ್ನರ್ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಈ ದೇಶದ ಸರ್ವರ ಆಸ್ತಿ ಮತ್ತು ಅವರು ಕೊಟ್ಟ ಸಮಾನತೆಯನ್ನು ಸಾರುವ ಸಂವಿಧಾನದ ಅಡಿಯಲ್ಲಿಯೇ ನಾವೆಲ್ಲರೂ ಇವತ್ತು ಒಂದಿಷ್ಟು ನೆಮ್ಮದಿಯಿಂದ ಬದುಕಲು ಹಾಗೂ ಉಸಿರಾಡಲು ಸಾಧ್ಯವಾಗಿದೆ, ಬಹುಶಃ ಅಂಬೇಡ್ಕರ್ ಅವರು ಸಂವಿಧಾನ ಬರೆಯದೆ ಹೋಗಿದ್ದರೆ ಇವತ್ತು ಈ ದೇಶದ ಬಹುಸಂಖ್ಯಾತ ಜನರು ಈ ಸ್ಥಿತಿಯಲ್ಲಿ ಇರುತ್ತಿದ್ದಿಲ್ಲ ಭಾರತ ದೇಶದ ಬದಲಾವಣೆಗೆ ಬಾಬಾ ಸಾಹೇಬರ ಸಂವಿಧಾನದವೇ ಕಾರಣ. ದುರಂತ ಅಂದರೆ ಅವರನ್ನು ಇವತ್ತು ಒಂದು ಜಾತಿಗೆ ಸೀಮಿತ ಮಾಡಿರುವುದು ,ವಿಶ್ವವೇ ಒಪ್ಪಿದ ಮಾಹಾನ್ ನಾಯಕ ನಮ್ಮ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಆಗಿದ್ದಾರೆ. ಇಂದಿಗೂ ಅವರ ಓದು, ವ್ಯಕ್ತಿತ್ವ ಮತ್ತು ಬುದ್ದಿಯನ್ನು ಮೀರಿಸುವ ಶಕ್ತಿ ಮತ್ತು ವ್ಯಕ್ತಿ ಮೊತ್ತೊಂದಿಲ್ಲ. ಇಂತಹ ಬಾಬಾ ಸಾಹೇಬರ ಆದರ್ಶ ಮತ್ತು ಮಾದರಿಯ ಜೀವನದ ಬಗ್ಗೆ ನಾವೆಲ್ಲರೂ ತಿಳಿದು ಕೊಳ್ಳಬೇಕಿದೆ. ಜಿ ಕನ್ನಡ ಟಿ.ವಿ ಮಾಧ್ಯಮದ ಇತಿಹಾಸದಲ್ಲಿ ಈಗ ಒಂದು ಮಹಾನ್ ಬದಲಾವಣೆ ಆಗುತ್ತಿದೆ ಅದೇನೆಂದರೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬರ ಜೀವನ ಆಧಾರಿತ ಮಹಾ ನಾಯಕ ಧಾರವಾಹಿ ಜೀ ಕನ್ನಡ ಖಾಸಗಿ ವಾಹಿನಿಯಲ್ಲಿ ಪ್ರಸಾರಗೊಂಡು ಇಡೀ ಆರು ಕೋಟಿ ಕನ್ನಡಿಗರ ಮನಸ್ಸನ್ನು ಗೆದ್ದಿದ್ದೆ ದುರಂತ ಅಂದರೆ ಅಂದು ಬಾಬಾ ಸಾಹೇಬರ ಕಾರ್ಯಗಳಿಗೆ ಅಡ್ಡಿಯಾಗಿದ್ದ ಈ ಜಾತಿವಾಧಿ ಮತ್ತು ಮನುವಾಧಿಗಳು ಆದರೆ ಇವತ್ತು ಅವರ ಧಾರವಾಹಿಗೂ ಅಡ್ಡಿಯಾಗುತ್ತಿದ್ದಾರೆ . ಪ್ರತಿಯೊಬ್ಬರು ಬಾಬಾ ಸಾಹೇಬರ ಜೀವನ ಚರಿತ್ರೆಯನ್ನು ಈ ಧಾರವಾಹಿ ನೋಡುವ ಮೂಲಕ ತಿಳಿದುಕೊಳ್ಳಲು ಪ್ರಯತ್ನ ಮಾಡಬೇಕು. ನಾವು ಧಾರವಾಹಿ ಯನ್ನು ನೋಡಿ ಅಂಬೇಡ್ಕರ್ ಅವರು ತೋರಿಸಿದ ನಿಜ ದಾರಿಯಲ್ಲಿ ಅವರ ಆಶಯ ಮತ್ತು ಕನಸಿನ ಈಡೇಕೆಗಾಗಿ ದುಡಿಯೋಣ.ಎಂದು ಹೇಳುತ್ತಾ ಜೀ ಕನ್ನಡ ಮುಖ್ಯಸ್ಥರು ಯಾರ ಬೆದರಿಕೆಗೂ ಅಂಜದೆ,ಬಗ್ಗದೆ ಮಹಾನಾಯಕ ಧಾರಾವಾಹಿಯ ಮೂಲಕ ಸತ್ಯವನ್ನು ಬಿತ್ತುವ ಕೆಲಸ ಮಾಡಲಿ ಅವರೊಂದಿಗೆ ಈ ದೇಶದ ಕೋಟಿಗಟ್ಟಲೆ ಇರುವ ಭೀಮ ಬಂಧುಗಳು ಜೊತೆಗಿದ್ದೇವೆ.ಬಾಬಾ ಸಾಹೇಬರ ಸಂವಿಧಾನ ಉಳಿದರೆ ಮಾತ್ರವೇ ದೇಶದ ಬಹುಸಂಖ್ಯಾತ ಜನತೆಯ ಬದುಕು ಉಳಿಯಲು ಸಾಧ್ಯವಿದೆ. ಆದ್ದರಿಂದ ನಾವೆಲ್ಲರೂ ಜಾತಿ, ಧರ್ಮ ಸೇರಿ ಎಲ್ಲಾ ರೀತಿಯ ಬೇಧ ಭಾವ ವನ್ನು ಮರೆತು ಸಂವಿಧಾನದ ಉಳಿವಿಗಾಗಿ ಐಕ್ಯತೆ ಯಿಂದ, ಗಟ್ಟಿಯಾಗಿ ಹೋರಾಡೋಣ ಎನ್ನುತ್ತಾ ತಮ್ಮ ಮಾತಿಗೆ ವಿರಾಮ ಹೇಳಿದ್ದಾರೆ.

ವರದಿ- ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿ ವಿ ಸಿರವಾರ

Please follow and like us:

Related posts

Leave a Comment