ಟಿಎಪಿಸಿಎಂಎಸ್ ನಿರ್ದೇಶಕರ ಚುನಾವಣೆಯಲ್ಲಿ 04 ಜನರ ಅವಿರೋಧ ಆಯ್ಕೆ..!

ನಾಗಮಂಗಲ: ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆಗೆ ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾದ ಗುರುವಾರ ಒಟ್ಟು 12 ಸ್ಥಾನಗಳಿಗೆ ಪುರಸ್ಕøತವಾಗಿದ್ದ 21 ಅಭ್ಯರ್ಥಿಗಳ ಪೈಕಿ 06 ಜನರು ತಮ್ಮ ನಾಮಪತ್ರಗಳನ್ನು ಹಿಂದೆಗೆದುಕೊಂಡಿದ್ದು 16 ಅಭ್ಯರ್ಥಿಗಳು ಅಂತಿಮವಾಗಿ ಚುನಾವಣಾ ಕಣದಲ್ಲಿದ್ದು ನಾಲ್ವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ನಿರ್ದೇಶಕರಿಂದ ಚುನಾಯಿಸಲ್ಪಡುವ 04 ಸ್ಥಾನಗಳಿಗೆ ಸಲ್ಲಿಸಲಾಗಿದ್ದ 07 ನಾಮಪತ್ರಗಳ ಪೈಕಿ ಮೂವರು ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಂಡ ಹಿನ್ನಲೆಯಲ್ಲಿ ಕೆ.ವಿ.ದಿನೇಶ್, ಡಿ.ಕೃಷ್ಣೇಗೌಡ, ಬಿ.ರಾಜೇಗೌಡ ಹಾಗೂ ಹೆಚ್.ಎನ್.ಗಿರೀಶ್ ಅವಿರೋಧವಾಗಿ ಆಯ್ಕೆಯಾದರು.ಸಂಘದ ಸದಸ್ಯರಿಂದ ಚುನಾಯಿತ 08 ಸ್ಥಾನಗಳಿಗೆ ಸಾಮಾನ್ಯ ವರ್ಗದಿಂದ ಬಿಂಡೇನಹಳ್ಳಿ ಕೃಷ್ಣೇಗೌಡ, ಸಾಮಕಹಳ್ಳಿ ಚೇತನ್ಕುಂಮಾರ್, ನಾಗಮಂಗಲದ ತಿಮ್ಮಪ್ಪ ಮತ್ತು ಚೌಡೇನಹಳ್ಳಿ ಮಂಜೇಶ್. ಮಹಿಳಾ ವರ್ಗದಿಂದ ಕಲ್ಲುಕೊಂಬರಿ ಆರ್.ಎ.ಗಿತಾ, ನಾಗಮಂಗಲದ ಮಹಾಲಕ್ಷ್ಮೀ, ನರಗನಹಳ್ಳಿ ಕೆ.ಜೆ.ರೂಪ ಮತ್ತು ಕರಡಹಳ್ಳಿಯ ಎಂ.ಸವಿತಾ. ಪರಿಶಿಷ್ಟ ಜಾತಿ ವರ್ಗದಿಂದ ಟಿಬಿ ಬಡಾವಣೆಯ ರಾಚಯ್ಯ ಮತ್ತು ನಾಗಮಂಗಲದ ಹೆಚ್.ಎನ್.ರೂಪ. ಪರಿಶಿಷ್ಟ ಪಂಗಡ ವರ್ಗದಿಂದ ಸೋಲಿಗರಕೊಪ್ಪಲಿನ ಎನ್.ಮಂಜುನಾಥ್ ಮತ್ತು ನಾಗಮಂಗಲದ ಜೆ.ಆಶಾ. ಹಿಂದುಳಿದ ವರ್ಗ (ಎ) ಗಾಗಿ ತುಪ್ಪದಮಡು ಪೂಜಾರಿ ಚಿಕ್ಕಣ್ಣ, ಬಸವನಗುಡಿಕೊಪ್ಪಲು ಬಿ.ಎಂ.ಮಂಜುನಾಥ್, ಮುದ್ದೇಗೌಡನಕೊಪ್ಪಲು ಆರ್.ಯತೀಶ್ ಮತ್ತು ಚೋಳಸಂದ್ರ ರಮೇಶ್ ಸೇರಿದಂತೆ ಒಟ್ಟು 16 ಅಭ್ಯರ್ಥಿಗಳು ಕಣದಲ್ಲುಳಿದಿದ್ದಾರೆ. ಅವಿರೋಧವಾಗಿ ಆಯ್ಕೆಯಾದ ಬಗ್ಗೆ ಅಧಿಕೃತ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೆಲುವಿನ ಹರ್ಷ ಮನೆಮಾಡಿತ್ತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ. ಪ್ರಸನ್ನ ನೇತೃತ್ವದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸಿಹಿ ಹಂಚಿ ಸಂಭ್ರಮಿಸಿ ಮಾತನಾಡಿದ ಎಂ.ಪ್ರಸನ್ನ, ಚುನಾವಣೆ ನಡೆಯುವ 08 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.

ವರದಿ- ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment