ಸೋಲು ಅನುಭವಿಸಿದ್ದ ವಿರಾಟ್ಗೆ 12 ಲಕ್ಷ ದಂಡ- ಯಾಕೆ ಗೊತ್ತಾ?

ದುಬೈ: ಕಿಂಗ್ಸ್ ಇಲೆವನ್ ಪಂಜಾಬ್ ವಿರುದ್ಧ ಹೀನಾಯ ಸೋಲು ಕಂಡಿದ್ದ ಆರ್ಸಿಬಿ ನಾಯಕ ವಿರಾಟ್ ಕೊಹ್ಲಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ನಿನ್ನೆ ನಡೆದ ಪಂದ್ಯದಲ್ಲಿ ನಿಧಾನಗತಿ ಬೌಲಿಂಗ್ ರೇಟ್ ಕಾರಣದಿಂದ ವಿರಾಟ್ಗೆ 12 ಲಕ್ಷ ರೂ ದಂಡ ವಿಧಿಸಿದ್ದು, ಐಪಿಎಲ್ ಟೂರ್ನಿಯ ನಿಯಮವಾಳಿಗಳನ್ನು ಉಲ್ಲಂಘಿಸಿರುವ ಕಾರಣ ದಂಡ ವಿಧಿಸಲಾಗಿದೆ ಎನ್ನಲಾಗಿದೆ. ಐಪಿಎಲ್ ಟೂರ್ನಿಯಲ್ಲಿ ಬ್ರೇಕ್ ಸೇರಿಸಿ 75 ನಿಮಿಷ ಮಾತ್ರ ನೀಡಲಾಗಿತ್ತು. ಆದರೆ ಪಂದ್ಯವನ್ನ ನಿಗಧಿತ ಅವಧಿಯಲ್ಲಿ ಮುಕ್ತಾಯಗೊಳಿಸ ಬೇಕಿರುತ್ತೆ, ತಪ್ಪಿದ್ದಲ್ಲಿ ಪಂದ್ಯದ ರೆಫ್ರಿ ದಂಡ ವಿಧಿಸುತ್ತಾರೆ. ತಂಡದ ಬೌಲರ್ ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ನಾವು ಮಾಡಿದ ತಪ್ಪಿನಿಂದ ದುಬಾರಿ ಬೆಲೆ ಕಟ್ಟಿದ್ದೇವೆ. ಪಂಜಾಬ್ ತಂಡವನ್ನು 180 ರನ್ ಗಳಿಗೆ ಕಟ್ಟಿ ಹಾಕುವ ಅವಕಾಶವಿತ್ತು. ಆದರೆ ಕ್ಯಾಚ್ ಬಿಟ್ಟಿದ್ದು ತಂಡಕ್ಕೆ ಮಾರಕವಾಯಿತು ಅಂತ ವಿರಾಟ್ ತಿಳಿಸಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment