ಕೃಷಿ ಸುಧಾರಣಾ ನೀತಿ ಜಾರಿ ವಿರೋಧಿಸಿ ಬೈಪಾಸ್ ತಡೆದು ರೈತರ ಆಕ್ರೋಶ..!

ಹುಬ್ಬಳ್ಳಿ: ಕೇಂದ್ರ ಸರಕಾರದ ಜಾರಿಗೆ ತಂದಿರುವ ನೂತನ ಎಪಿಎಂಸಿ, ಭೂ ಸುಧಾರಣಾ ತಿದ್ದುಪಡಿ ಕಾಯಿದೆ ವಿರೋಧಿಸಿ ವಿವಿಧ ರೈತ ಹಾಗೂ ರೈತ ಪರ ಸಂಘಟನೆಗಳು ನಗರದ ಹೊರವಲಯದ ಗಬ್ದೂರು ಪುಣೆ ಬೆಂಗಳೂರು ಬೈಪಾಸ್ ಬಳಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ರೈತಪರ ಸಂಘಟನೆ ಜತೆಗೆ ಪಕ್ಷಾತೀತವಾಗಿ ಬೆಂಬಲ ಸೂಚಿಸಿ ಕೇಂದ್ರ ಸರಕಾರ ಜಾರಿಗೆ ತಂದಿರುವ ನೂತನ ಕಾಯಿದೆಯನ್ನು ರದ್ದುಪಡಿಸುವಂತೆ ಆಗ್ರಹಿಸಿದ್ದು ಇಂತಹ ರೈತರಿಗೆ ಮಾರಕವಾದ ಕಾಯ್ದೆ ಜಾರಿಗೆ ಸರಿಯಲ್ಲ ಮೇಲಿಂದ ಮೇಲೆ ಕಾರ್ಮಿಕ ವಿರೋಧಿ ನೀತಿಯನ್ನು ಜಾರಿಗೆ ತರುವ ಮೂಲಕ ಕೇಂದ್ರ ಸರಕಾರ ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು ಕೂಡಲೇ ಈ ಅವೈಜ್ಞಾನಿಕ ಕಾಯಿದೆಗಳಾದ ಎಪಿಎಂಸಿ ಮತ್ತು ಭೂ ಸುಧಾರಣಾ ಕಾಯಿದೆಯನ್ನು ವಾಪಾಸ್ ಪಡೆಯಲು ಒತ್ತಾಯ ಮಾಡಿದರು. ರೈತರು ಹಾಗೂ ಕಾರ್ಮಿಕ ವರ್ಗವನ್ನು ಹತ್ತಿಕ್ಕುವ ನಿಟ್ಟಿನಲ್ಲಿಕೇಂದ್ರ ಸರಕಾರ ಈ ರೀತಿ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. ಮುಖಂಡರಾದ ಎನ್ ಎಚ್. ಕೋನರೆಡ್ಡಿ, ಬಾಬಾಜಾನ್ ಮುಧೋಳ, ಸಿದ್ದು ತೇಜಿ, ರಾಜಶೇಖರ ಸೇರಿದಂತೆ ನೂರಾರು ರೈತರು ಹಾಗೂ ಪ್ರತಿಭಟನಾಕಾರರು ಭಾಗವಹಿಸಿದ್ದರು.

ವರದಿ-ರಾಜುಮುದುಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment