ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಪೋಷಣ್ ಮಾಸಾಚರಣೆ..!

ಮಳವಳ್ಳಿ. ಅಂಗನವಾಡಿ ಕಂದೇಗಾಲ ವೃತ್ತದ ವತಿಯಿಂದ ಪೌಷ್ಟಿಕ ಆಹಾರ ಸಪ್ತಾಹ ದಿನಾಚರಣೆ ಅಂಗವಾಗಿ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಅಂಚೆದೊಡ್ಡಿ ಗ್ರಾಮದ ಮುತ್ತರಾಯಸ್ವಾಮಿ ಸಮುದಾಯ ಭವನದಲ್ಲಿ ನಡೆಸಲಾಯಿತು.ಕಾರ್ಯಕ್ರಮವನ್ನು ಸಿಡಿಪಿಓ ಕುಮಾರ್ ಉದ್ಘಾಟಿಸಿ ಮಾತನಾಡಿ, ಮಹಿಳೆಯರಲ್ಲಿ ಪೌಷ್ಟಿಕ ಕೊರತೆ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ನಮ್ಮ ಇಲಾಖೆವತಿಯಿಂದ ಪೋಷಣ್ ಮಾಸಾಚರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಿಂದ ಮಹಿಳೆಯರ ಆರೋಗ್ಯ ವೃದ್ದಿಯಾಗುತ್ತದೆ. ಎಂದರು.ಇನ್ನೂ ಅಂಗನವಾಡಿ ಕೇಂದ್ರದಲ್ಲಿ ಕೈತೋಟ ನಿರ್ಮಾಣಮಾಡಬೇಕು. ಈ ಮೂಲಕ ತರಕಾರಿಗಳನ್ನು ಬೆಳೆದು ಮಕ್ಕಳಿಗೆ ನೀಡಬೇಕು ಎಂದರು.ಇನ್ನೂ ಕಾಳು ಹಾಗೂ ತರಕಾರಿಗಳಲ್ಲಿ ವಿವಿಧ ಬಗ್ಗೆ ತಿಂಡಿಗಳನ್ನು ಮಾಡಿ ಪ್ರದರ್ಶನಕ್ಕೆ ಇಡಲಾಯಿತು.ಕಾರ್ಯಕ್ರಮದಲ್ಲಿ ಎಸಿಡಿಪಿಓ ಮಹೇಶ್, ಮೇಲ್ವಿಚಾರಕಿ ಸರಳ,ಸಿಐಟಿಯು ಉಪಾಧ್ಯಕ್ಷೆ ನಾಗಮ್ಮ, ಜ್ಯೋತಿ, ಬಿ.ಪಿ.ಲತಾ. ಗ್ರಾ.ಪಂ ಮಾಜಿ ಅಧ್ಯಕ್ಷ ನಾಗೇಶ್ ಸೇರಿದಂತೆ ಮತ್ತಿತ್ತರರು ಇದ್ದರು

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment