ಕೇಂದ್ರ ಸಚಿವ ಸುರೇಶ್ ಅಂಗಡಿಯವರಿಗೆ ಭಾವಪೂರ್ಣ ಶ್ರದ್ದಾಂಜಲಿ…!

ಲಿಂಗಸೂಗೂರು:ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಮುದಗಲ್ ಪಟ್ಟಣದ ಶ್ರೀ ವಿಜಯ ಮಹಾಂತೇಶ ಮಠ ದಲ್ಲಿ ಬಿಜೆಪಿ ಪಕ್ಷದ ಮುದಗಲ್ ಮಂಡಲ್ ಅಧ್ಯಕ್ಷ ಸಣ್ಣಸಿದ್ದಯ್ಯ ಮೇಗಳಪೇಟೆ ರವರ ನೇತೃತ್ವದಲ್ಲಿ ಕೇಂದ್ರ ರೈಲ್ವೆ ಇಲಾಖೆ ಸಚಿವರಾದ ದಿ|| ಸನ್ಮಾನ್ಯ ಶ್ರೀ ಸುರೇಶ್ ಅಂಗಡಿ ಅವರ ಭಾವಚಿತ್ರಕ್ಕೆ ಹೂ ಪುಷ್ಪಾಚಾರಣೆ ಮಾಡಿ ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಸಮರ್ಪಿಸಿದರು. ಇದೇ ವೇಳೆ ಬಿಜೆಪಿ ಪಕ್ಷದ ಯುವ ಮೊರ್ಚ ಪ್ರಧಾನ ಕಾರ್ಯದರ್ಶಿ ಮಂಜುನಾಥ ನಂದವಾಡಿಗಿ, ಪುರಸಭೆ ಸದಸ್ಯರು, ಹಾಗೂ ಬಿಜೆಪಿ ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ವರದಿ- ವೀರೇಶ್ ಅರಮನಿ ಎಕ್ಸ್‌ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment