ಸಂವಿಧಾನ ಶಿಲ್ಪಿ ಡಾ.ಬಿಆರ್ ಅಂಬೇಟ್ಕರ್ ರವರ ಮಹಾನಾಯಕ ಧಾರಾವಾಹಿ ಬ್ಯಾನರ್ ಗೆ ಪುಷ್ಪಾರ್ಚನೆ..!

ಹಾಸನ: ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ರವರ ಜೀವನಾಧರಿತ ಮಹಾನಾಯಕ ಧಾರವಾಹಿಗೆ ಎಲ್ಲೇಡೆ ಉತ್ತಮವಾದ ಪ್ರತಿಕ್ರಿಯೆ ವ್ಯಕ್ತವಾಗುತ್ತಲಿದೆ. ಸಕಲೇಶಪುರ ತಾಲೂಕಿನ ಮಳಲಿ ಗ್ರಾಮದಲ್ಲಿ ಊರಿನ ಮುಖಂಡರೆಲ್ಲಾರೂ ಒಗ್ಗೂಡಿ ಮಹಾನಾಯಕ ಧಾರಾವಾಹಿಯ ಬ್ಯಾನರ್ ಗೆ ಪುಷ್ಪಾರ್ಚನೆ ಮಾಡಿ ದೀಪ ಹಚ್ಚಿ ಗೌರವವನ್ನು ಸಲ್ಲಿಸಿದ್ದರು. ಇನ್ನು ಅಧ್ಯಕ್ಷರಾದ ಯೋಗೇಶ್ ಮಾತನಾಡಿ ಜೀ ಕನ್ನಡಲ್ಲಿ ಮೂಡಿಬರುತ್ತಿರುವ ಮಹಾನಾಯಕ ಧಾರಾವಾಹಿ ಅಂಬೇಡ್ಕರ್ ರವರ ಜೀವನಾಧಾರಿತದ್ದಾಗಿದೆ. ಎಲ್ಲಾರೂ ಕೂಡ ರಾಘವೇಂದ್ರ ಹುಣಸೂರ್ ರವರಿಗೆ ಪ್ರೋತ್ಸಾಹಿಸಬೇಕೆ ಹೊರತು ಜೀವ ಬೇದರಿಕೆ ಹಾಕುವುದಲ್ಲಾ. ಮೇಳು-ಕೀಳು ಎಂಬಾ ಭೇದ ಭಾವ ಮಾಡದೇ ಎಲ್ಲಾರೂ ಒಂದೇ ಎಂಬಾ ಮನೋಭಾವನೆಯನ್ನು ಜನರು ಬೆಳಸಿಕೊಳ್ಳಬೇಕು. ರಾಘವೇಂದ್ರ ಹುಣಸೂರ್ ರವರಿಗೆ ಈ ಧಾರಾವಾಹಿಯನ್ನು ನಿಲ್ಲಿಸುವಂತೆ ಸಾಕಷ್ಟು ಬೇದರಿಕೆಗಳು ಬಂದಿದೆ. ಆದರೂ ಯಾವುದಕ್ಕೂ ಅಂಜದೇ ಧಾರಾವಾಹಿಯನ್ನು ನಿಲ್ಲಿಸದೇ ಮುಂದುವರೆಸುತ್ತಿದ್ದು ಅವರ ಈ ಧೈರ್ಯಕ್ಕೆ ನಮ್ಮ ದಲಿತ ವರ್ಗದವರಿಂದ ಪ್ರೋತ್ಸಾಹ ಯಾವಾಗಲೂ ಇರುತ್ತದೆ ಎಂದರೂ. ಇನ್ನೂ ಈ…

Read More

ಅಂಬೇಡ್ಕರ್ ತತ್ವಾದರ್ಶಗಳು ಎಲ್ಲರೂ ಅಳವಡಿಸಿಕೊಳ್ಳಲಿ..!

ಶಹಾಪುರ : ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಾದರ್ಶಗಳು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ನಾಗಣ್ಣ ಬಡಿಗೇರ ಹೇಳಿದರು. ತಾಲ್ಲೂಕಿನ ತಡಿಬಿಡಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಡಾ ಬಿಆರ್ ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರಾವಾಹಿಯ ಬ್ಯಾನರ್ ಉದ್ಘಾಟಸಿ ಮಾತನಾಡಿದರು.ಮಹಾನಾಯಕ ಧಾರಾವಾಹಿ ಬಹಳ ಅತ್ಯದ್ಭುತವಾಗಿ ಮೂಡಿ ಬರುತ್ತಿದ್ದು ಎಲ್ಲರೂ ನೋಡಲೇಬೇಕಾದ ಮಹಾನಾಯಕ ಚಿತ್ರ ಇದಾಗಿದೆ ಎಂದು ಹೇಳಿದರು. ತುಳಿತಕ್ಕೊಳಗಾದ ಬಡವರ ದೀನ ದಲಿತರ ಶೋಷಿತರ ಅಂದಿನ ಬದುಕಿನ ಕುರಿತು ಎಳೆ ಎಳೆಯಾಗಿ ಬಿಚ್ಚಿಡುವುದರ ಜೊತೆಗೆ ನಾಡಿಗೆ ಉತ್ತಮ ಸಂದೇಶ ಸಾರುವ ಈ ಧಾರಾವಾಹಿ ಪ್ರಸಾರ ವಾಗುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ ಆದ್ದರಿಂದ ಜೀ ಟಿವಿ ಕನ್ನಡ ಬಳಗದವರಿಗೆ ಕೃತಜ್ಞತೆಗಳು ಹೇಳಬೇಕಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶಿವಕುಮಾರ ತಳವಾರ,ಶಿವಪುತ್ರ ಜವಳಿ, ನಿಜಗುಣ…

Read More

ದೆವ್ವ ಬಿಡಿಸುವ ನೆಪದಲ್ಲಿ ಮಗುವನ್ನೇ ಹೊಡೆದು ಕೊಂದೇ ಬಿಟ್ಟ..!

ಚಿತ್ರದುರ್ಗ : ದೆವ್ವ ಬಿಡಿಸುವ ನೆಪದಲ್ಲಿ ಮಗುವನ್ನ ಹೊಡೆದು ಕೊಂದಿರುವ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಕ್ಯಾತನಹಳ್ಳಿ ಗ್ರಾಮದಲ್ಲಿ ನಡೆದಿದ್ದು, ಎರಡು ವರ್ಷದ ಪೂರ್ಣಿಕಾ ಮೃತಪಟ್ಟ ದುರ್ದೈವಿಯಾಗಿದ್ದಾಳೆ. ಪದೇ ಪದೇ ಬೆಚ್ಚಿ ಬೀಳುತ್ತಿದ್ದ ಮಗುವನ್ನ ಮಾಟಗಾರ ರಾಕೇಶ್ ಬಳಿ ಕರೆದುಕೊಂಡು ಹೋಗಿದ್ದರು. ತಾನು ಯಲ್ಲಮ್ಮನ ಆರಾಧಕ ಎಂದು ಹೇಳಿಕೊಂಡಿದ್ದ ರಾಕೇಶ್, ಮಗುವಿಗೆ ದೆವ್ವ ಹಿಡಿದಿದೆ ಎಂದು ಪೋಷಕರಿಗೆ ತಿಳಿಸಿದ್ದಾನೆ.ದೆವ್ವ ಬಿಡಿಸುವ ನೆಪದಲ್ಲಿ ಮಗುವಿನ ಮೇಲೆ ಬೆತ್ತದಿಂದ ಹೊಡೆದಿದ್ದು, ತೀವ್ರವಾಗಿ ಅಸ್ವಸ್ಥಳಾಗಿ ಮಗು ಸ್ಥಳದಲ್ಲೇ ಕುಸಿದು ಬಿದ್ದು ಮೃತಪಟ್ಟಿದೆ. ಸದ್ಯ ಮಾಟಗಾರ ರಾಕೇಶ್ ವಿರುದ್ಧ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ವಾಣಿಜ್ಯ ಬೆಳೆ ತಂಬಾಕು ಬೆಳೆ ಹರಾಜು ಪ್ರಕ್ರಿಯೆ ಸೆ.30 ರಿಂದ ಪ್ರಾರಂಭ..!

ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕನ್ನು ಕಳೆದ ಐವತ್ತು ವರ್ಷಗಳಿಂದ ರೈತರು ಬೆಳೆಯುತ್ತಿದ್ದಾರೆ . ಈ ಬಾರಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ತಂಬಾಕು ಬೆಳೆಗಾರರು ಇದ್ದು 20-21 ನೇ ಸಾಲಿನ ತಂಬಾಕು ಮಾರುಕಟ್ಟೆಯ ತಂಬಾಕು ಹರಾಜು ಪ್ರಕ್ರಿಯೆ ಇದೇ ತಿಂಗಳು 30ರಂದು ಪ್ರಾರಂಭವಾಗಲಿದ್ದು ಮೊದಲು ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿಯ ಮಾರುಕಟ್ಟೆ ಸಂಖ್ಯೆ 5ರಲ್ಲಿ ಆರಂಭವಾಗಲಿದ್ದು ನಂತರ ಮಾರುಕಟ್ಟೆ ಸಂಖ್ಯೆ 4 ಮತ್ತು 6 ರಲ್ಲಿ ಅಕ್ಟೋಬರ್ 7 ನೇ ತಾರೀಕಿನಂದು ಪ್ರಾರಂಭವಾಗಲಿದೆ ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ ತಿಳಿಸಿದ್ದಾರೆ. ಈ ವರ್ಷದಲ್ಲಿ ಕೊವೀಡ್-19ಇರುವುದರಿಂದ ಕೆಲವೊಂದು ಸುರಕ್ಷತಾ ಕ್ರಮಗಳೊಂದಿಗೆ ಹರಾಜು ಪ್ರಕ್ರಿಯೆಯನ್ನು ನಡೆಸಲು ತಂಬಾಕು ಮಂಡಳಿ ನಿರ್ಧರಿಸಿದೆ ಆದ್ದರಿಂದ ರೈತರು ಪೂರಕವಾಗಿ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾರುಕಟ್ಟೆಯ ತಂಬಾಕು ಹರಾಜು ಪ್ರಕ್ರಿಯೆಯನ್ನು ಸುರಕ್ಷಿತವಾಗಿ ನಡೆಸಲು ರೈತರು ಸಹಕಾರ…

Read More

ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗದ ಕತ್ತು ಕುಕ್ಕಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ..!

ಸಿಂಧನೂರು : ನಗರದ ತಹಸೀಲ್ದಾರ್ ಕಚೇರಿ ಮುಂದೆ ಸಿಂಧನೂರು ಗೆಳೆಯರ ಬಳಗದ ವತಿಯಿಂದ ಮಾಧ್ಯಮದ ಮೇಲೆ ದಬ್ಬಾಳಿಕೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಭಟನೆ ಮಾಡಿದರು. ಸಿಂಧನೂರು ಗೆಳೆಯರ ಬಳಗದ ಕಾರ್ಯದರ್ಶಿ ಸೈಯದ್ ಬಂದೇನವಾಜ್ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಪತ್ರಕರ್ತರ ಮನೆಗೆ ನ್ಯಾಯಾಂಗದಿಂದ ಸರ್ಚ್ ವಾರೆಂಟ್ ಪಡೆಯದೆ ಪೊಲೀಸರು ಮನೆಗೆ ನುಗ್ಗಿ ಪತ್ರಕರ್ತನ ಪತ್ನಿಯ ಮೊಬೈಲ್ ಕಸಿದು ದಬ್ಬಾಳಿಕೆ ಎಸೆದಿದ್ದಾರೆ .ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗದ ಕತ್ತು ಕುಕ್ಕಲು ಹೊರಟಿರುವ ರಾಜ್ಯ ಸರ್ಕಾರದ ನಡೆ ತೀವ್ರ ಖಂಡನೀಯ. ಪತ್ರಕರ್ತ ತಪ್ಪು ಮಾಡಿದರೆ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲು ನಿರ್ದಿಷ್ಟ ಅವಕಾಶಗಳಿರುತ್ತವೆ ಆದರೆ ರಾಜ್ಯ ಸರ್ಕಾರವು ಪವರ್ ಟಿವಿ ನ್ಯೂಸ್ ಲೈವ್ ಬಂದು ಮಾಡಿರುವುದು ತೀವ್ರವಾಗಿ ಖಂಡಿಸುತ್ತೇನೆ.ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.ನಂತರ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮೂಲಕ…

Read More

ಕೆಜಿಎಫ್ ಬಿಜಿಎಂಎಲ್ ಪ್ರದೇಶದಲ್ಲಿ ಖನಿಜ ನಿಕ್ಷೇಪಗಳು ಪರಿಶೋಧನೆ ಕಾರ್ಯಪ್ರಾರಂಭ..!

ಕೋಲಾರ: ಜಗತ್ತಿಗೆ ಟನ್ ಗಟ್ಟಲೆ ಚಿನ್ನವನ್ನು ಕೊಡುಗೆ ನೀಡಿದ್ದ ಇತಿಹಾಸ ಹೊಂದಿರುವ ಕೆಜಿಎಫ್ ನಗರದ ಗೋಲ್ಡ್ ಮೈನ್ಸ್ ಸಂಸ್ಥೆಗೆ ಬೀಗ ಹಾಕಿದ ನಂತರ 20 ವರ್ಷಗಳಲ್ಲಿ ಕೆಜಿಎಫ್ ನಗರದ ಜನ್ರು ಅನುಭವಿಸಿದ ವನವಾಸ ಅಂತ್ಯವಾಗುವ ಕಾಲ ಬಂದಿದೆ. ಕೇಂದ್ರದ ಕಲ್ಲಿದ್ದಲು ಮತ್ತು ಗಣಿಗಾರಿಕೆ ಸಚಿವ ಪ್ರಹ್ಲಾದ ಜೋಶಿ ಸೂಚನೆ ಮೇರೆಗೆ ಕೆಜಿಎಫ್ ಬಿಜಿಎಂಎಲ್ ಪ್ರದೇಶದಲ್ಲಿ ಖನಿಜ ನಿಕ್ಷೇಪಗಳು ಇರುವಿಕೆಯನ್ನು ಪತ್ತೆ ಹಚ್ಚಲು ಇಂದಿನಿಂದ ಗಣಿ ಇಲಾಖೆ ಆಧಿಕಾರಿಗಳು ಪರಿಶೋಧನೆ ಕಾರ್ಯ ಪ್ರಾರಂಭಿಸಿದ್ದಾರೆ. ಈ ಕುರಿತು ಕೇಂದ್ರ ಸಚಿವರೇ ಟ್ವೀಟ್ ಮಾಡುವ ಮೂಲಕ ಕೋಲಾರ ಜಿಲ್ಲೆಯ ಜನತೆಗೆ ಸಿಹಿ ಸುದ್ದಿ ನೀಡಿದ್ದಾರೆ. ಇನ್ನೂ ಬಿಜಿಎಂಎಲ್ ಗಣಿಗಾರಿಕೆಗೆ ಉಪಯೋಗಿಸದೇ ಇರುವ 3200 ಎಕರೆ ಭೂಮಿಯಲ್ಲಿ ಖನಿಜ ನಿಕ್ಷೇಪ ಸಿಗುವ ಕುರಿತು ತಜ್ಞರ ತಂಡ ಅದ್ಯಯನ ಮಾಡಿ 6 ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಲಿದೆ, ವರದಿ ನೋಡಿ ಕೇಂದ್ರ ಸರ್ಕಾರ…

Read More

ಜೆಡಿಎಸ್ ನಗರಸಭೆ ಸದಸ್ಯನ ಕೊಚ್ಚಿ ಕೊಲೆ..!

ರಾಯಚೂರು : ನಗರಸಭೆ ಸದಸ್ಯನೊಬ್ಬನನ್ನ ನಡು ರಸ್ತೆಯಲ್ಕೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಜಾಕೀರ್ ಹುಸೇನ್ ವೃತ್ತದ ಬಳಿ ಘಟನೆ ನಡೆದಿದ್ದು,ಮಕ್ಬೂಲ್ ಕೊಲೆಯಾದ ಜೆಡಿಎಸ್ ನಗರಸಭೆ ಸದಸ್ಯ. ನಿನ್ನೆ ರಾತ್ರಿ ಐದು ಜನ ದುಷ್ಕರ್ಮಿಗಳು ಮಕ್ಬೂಲ್, ಅವರ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ತೀವ್ರವಾಗಿ ಅಸ್ವಸ್ಥಗೊಂಡ ನಗರಸಭೆ ಸದಸ್ಯನನ್ನ ಸ್ಥಳೀಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮಕ್ಬೂಲ್ ಮೃತಪಟ್ಟಿದ್ದಾರೆ. ಅಲ್ಲದೇ ಈ ಹಿಂದೆ ಮಕ್ಬೂಲ್ ಸಹೋದರ ಕೂಡ ಕೊಲೆಯಾಗಿದ್ದು,ಹಳೇ ವೈಣಮ್ಯದ ಹಿನ್ನೆಲೆ ಕೊಲೆಯಾಗುರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ರಾಯಚೂರು ಎಸ್ಪಿ ಪ್ರಕಾಶ್ ನಿಕ್ಕಂ ಭೇಡಿ ನೀಡಿ,ಪರಿಶೀಲನೆ ನಡೆಸಲಾಗಿದೆ. ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Read More

ಅ.1 ರಿಂದ ಅನ್ಲಾಕ್ 5.0 : ಯಾವುದೆಲ್ಲಾ ಓಪನ್ ಆಗುತ್ತೆ ಗೊತ್ತಾ?

ದೆಹಲಿ : ಮಹಾಮಾರಿ ಕೊರೊನಾ ವೈರಸ್ ಸೋಂಕು ಭೀತಿ ಹಿನ್ನೆಲೆ ಲಾಕ್ಡೌನ್ ಮಾಡಲಾಗಿತ್ತು. ಇದೀಗ ಸಂಕಷ್ಟದಲ್ಲಿ ಸಿಲುಕಿದ್ದ ದೇಶ ಕೊಂಚ ಕೊಂಚವಾಗಿ ಚೇತರಿಸಿಕೊಳ್ಳುತ್ತಿದೆ. ಸದ್ಯ ಅಕ್ಟೋಬರ್ 1 ರಿಂದ ಅನ್ಲಾಕ್ 5.0 ಜಾರಿಯಾಗಲಿದ್ದು, ಹಲವು ನಿಯಮಗಳನ್ನ ಸಡಿಲಗೊಳಿಸಲಾಗಿದೆ. ಈಗಾಗಲೇ ರೈಲ್ವೆ ಸಂಚಾರ, ಚಿತ್ರಮಂದಿರ, ಶಾಲಾ ಕಾಲೇಜುಗಳನ್ನ ಹೊರತುಪಡಿಸಿ,ಎಲ್ಲಾ ನಿಯಮಗಳನ್ನ ತೆರೆಯಲಾಗಿದೆ. ಇದೀಗ ಅಕ್ಟೋಬರ್ 1 ರಿಂದ ಜಾರಿಯಾಗುವ ಅನ್ಲಾಕ್ 5.0 ಮಾರ್ಗಸೂಚಿಯಲ್ಲಿ ಚಿತ್ರಮಂದಿರ ತೆರೆಯಲು ಅವಕಾಶ ನೀಡಬಹುದು ಎನ್ನಲಾಗಿದೆ. ಚಿತ್ರಮಂದಿರಕ್ಕೆ ಮಾರ್ಗಸೂಚಿ ಏನಿರಬಹುದು? #ಸಿನಿಮಾ ಥಿಯೇಟರ್‌ಗೆ ಬರುವವರು ಕಡ್ಡಾಯವಾಗಿ ಮಾಸ್ಕ್,ಗ್ಲೌಸ್ ಧರಿಸಿರಬೇಕು #ಸಾಮಾಜಿಕ ಅಂತರ ಕಾಯ್ದುಕೊಂಡು ಸೆಟ್‌ನಲ್ಲಿ ಕೂರಬೇಕು #ಒಂದು ಶೋ ಸಮಯದಲ್ಲಿ ಕೇವಲ 100 ಮಂದಿಗೆ ಮಾತ್ರ ಅವಕಾಶ #ಥಿಯೇಟರ್‌ನಲ್ಲಿ ಎಸಿ ಬಳಸುಚಂತೆ ಇರುವುದಿಲ್ಲ #ಥಿಯೇಟರ್ ಒಳಗೆ ಬರುವವರ ಪ್ರತಿಯೊಬ್ಬರಿಗೆ ಥರ್ಮಲ್ ಚಕಪ್ ಇನ್ನು ಚಿತ್ರಮಂದಿರಗಳಷ್ಟೇ ಅಲ್ಲದೇ ಪ್ರವಾಸೋದ್ಯಮದ ಮೇಲಿರುವ ಕೆಲ ನಿಯಮಗಳನ್ನೂ ತೆಗೆಯಲಾಗುತ್ತದೆ ಎನ್ನಲಾಗಿದೆ.…

Read More

ಅಕ್ಟೋಬರ್ ನಲ್ಲಿ ಸಂಪುಟ ವಿಸ್ತರಣೆ? ಬಿಜೆಪಿಯಿಂದ ಸಿದ್ಧವಾಯ್ತು ಮಾಸ್ಟರ್ ಪ್ಲಾನ್ !

ಬೆಂಗಳೂರು:ರಾಜ್ಯ ರಾಜಕೀಯದಲ್ಲಿ ಸಚಿವಾಕಾಂಕ್ಷಿಗಳು ಹೆಚ್ಚಾಗುತ್ತಿದ್ದು, ಇದೀಗ ಸಂಪುಟ ವಿಸ್ತರಣೆಯೋ..? ಅಥವಾ ಪುನಾರಚನೆಯೋ ಎಂಬ ಪ್ರಶ್ನೆ ಇದೀಗ ಪ್ರಶ್ನೆ ಎದುರಾಗಿದೆ. ಸಂಪುಟ ಪುನಾರಚನೆ ಬದಲು ಸಂಪುಟ ವಿಸ್ತರಣೆ ಮಾಡಲು ರಾಜ್ಯ ಬಿಜೆಪಿ ಚಿಂತನೆ ನಡೆಸಿದೆ. ಈ ಬಗ್ಗೆ ಚರ್ಚೆ ನಡೆಸಲು ಸಿಎಂ ಬಿ.ಎಸ್ ಯಡಿಯೂರಪ್ಪ ಅವರನ್ನ ಹೈಕಮಾಂಡ್ ಬುಲಾವ್ ನೀಡಿದೆ ಎನ್ನಲಾಗಿದೆ. ಇನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗೆ ಸಿ.ಟಿ ರವಿ ನೇಮಕ ಮಾಡಲಾಗಿದ್ದು,ಹೀಗಾಗಿ ಸಚಿವ ಸ್ಥಾನ ತೊರೆಯಲು ಸಿಟಿ ರವಿ ಸಿದ್ಧರಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಜೀನಾಮೆ ಕೊಡಲು ಸಿದ್ಧ ಎಂದು ಹೇಳಿರುವ ರವಿ, ಮೂರ್ನಾಲು ದಿನಗಳಲ್ಲಿ ತಮ್ಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗಿದೆ. ಇನ್ನು ಈ ಬಾರಿ ನಡೆಯುವ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಮಾಸ್ಟರ್ ಪ್ಲಾನ್ ಮಾಡಿದ್ದಾರೆ ಎನ್ನಲಾಗಿದೆ. ಹಲವು ಬಾರಿ ಸಚಿವ ಸ್ಥಾನ ನೀಡದಿದ್ದ ಕಾರಣ ತಮ್ಮ ನಾಯಕರ ವಿರುದ್ಧ ಅಸಮಾಧಾನ ಹೊರ ಹಾಕುತ್ತಿದ್ದ ಬಿಜೆಪಿ ಶಾಸಕರಿಗೆ ಈ…

Read More

ಅಂಬಾನಿ ಪರ, ಶ್ರೀಮಂತರ ಪರ ಸರ್ಕಾರ ಕಾಯಿದೆಗಳನ್ನು ರಚನೆ ಮಾಡುತ್ತದೆ- ಬಿ.ಡಿ.ಪಾಟೀಲ್..!

ವಿಜಯಪುರ: ನಿಂಬೆ ನಾಡಿನಲ್ಲಿ ನಿನ್ನೆ ಕರ್ನಾಟಕ ಬಂದ ಹಿನ್ನೆಲೆ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಹೇಳುಕೊಳ್ಳವಂತಹ ಬಂದ ವ್ಯವಸ್ಥೆ ನಿರ್ಮಾಣವಾಗಿರಿಲಿಲ್ಲ. ಎಂದಿನಂತೆ ವಾಹನಗಳು ಸಂಚಾರಿಸುತ್ತಿದ್ದವು. ಅಂಗಡಿ ಮುಂಗಟ್ಟಗಳು, ಹೋಟೆಲ್ ಹಣ್ಣು ಹಂಪಲು,ಹೂವಿನ ಅಂಗಡಿಗಳು ಯತ್ತವತ್ತಾಗಿ ವ್ಯಾಪಾರ ವಹಿವಾಟಲ್ಲಿ ಮಗ್ನರಾಗಿದ್ದವು. ಆದರೆ ತಾಲೂಕಿನ ಕೆಲವು ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭೂಸುಧಾರಣೆ ಕಾಯ್ದೆ ಜಾರಿಗೆ ತರಲು ಹೊರಟಿರುವ ಕ್ರಮವನ್ನು ಖಂಡಿಸಿ ರಾಜ್ಯ ಬಂದ್ ಕರೆ ಹಿನ್ನಲೆಯಲ್ಲಿ ಜೆಡಿಎಸ್, ಸಿ.ಐ.ಟಿ.ಯು, ರೀಪಬ್ಲಿಕ್ ಪಾರ್ಟಿ, ಅಖಂಡ ಕರ್ನಾಟಕ ರೈತ ಸಂಘ,ಪ್ರಾಂತ ರೈತ ಸಂಘ, ಮುಂತಾದ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದವರೆಗೆ ಕಾಲ್ನಡಿಗೆ ಮುಖಾಂತರ ಆಗಮಿಸಿ ಪ್ರತಿಭಟನಾ ಸಭೆ ನಡೆಸಿದರು. ಈ ಸಂದರ್ಬದಲ್ಲಿ ತಾಲೂಕು ಜೆ.ಡಿ.ಎಸ್ ಪಕ್ಷದ ಅಧ್ಯಕ್ಷ ಬಿ.ಡಿಪಾಟೀಲ್ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಚಿದಂಬರ ಕುಲಕರ್ಣಿಯವರಿಗೆ ಮನವಿ ಪತ್ರ…

Read More