ನ್ಯಾ!! ಎ. ಜೆ ಸದಾಶಿವ ಆಯೋಗ ವರದಿ ಜಾರಿಗೆ ಒತ್ತಾಯ ವಿಭಾಗಿಯ ಕಾರ್ಯಕರ್ತರ ಸಭೆ..!

ಮುಧೋಳ: ಮಹಾಲಿಂಗಪುರ ಪಟ್ಟಣದ ಮಾದರ ಚನ್ನಯ್ಯ ಸಾಂಸ್ಕೃತಿಕ ಭವನದಲ್ಲಿ ನ್ಯಾ ಎ.ಜೆ.ಸದಾಶಿವ ಆಯೋಗ ಜಾರಿಗೆ ಒತ್ತಾಯಿಸುವುದಕ್ಕಾಗಿ ಜಮಖಂಡಿ ವಿಭಾಗಿ ಮಟ್ಟದ ಸಭೆ ನಡೆಸಲಾಯಿತು ಮುಖ್ಯ ಅತಿಥಿಯಾಗಿ ರಾಜ್ಯ ಸಮನ್ವಯ ಸಮಿತಿಯ ಅಧ್ಯಕ್ಷರಾದ ಮುತ್ತಣ್ಣ ಬೆನ್ನೂರ ಭಾಗಿ.ನಮ್ಮ ರಾಜ್ಯದಲ್ಲಿ ನ್ಯಾ. ಮೂರ್ತಿ ಎ ಜೆ ಸದಾಶಿವ ಆಯೋಗ ಜಾರಿಯಾಗಬೇಕು ಮತ್ತು ಬಾಗಲಕೋಟ ಜಿಲ್ಲೆಯ ಮಹಾಲಿಂಗಪುರ ಪಟ್ಟಣದಲ್ಲಿ ಜಮಖಂಡಿ ವಿಭಾಗ ಮಟ್ಟದ ಸಭೆ ನಡೆಸಲಾಯಿತು.ಇದೆ ಸಂದರ್ಭದಲ್ಲಿ ಸಮನ್ವಯ ಸಮಿತಿಯ ರಾಕ್ಯಾಧ್ಯಕ್ಷರಾದ ಮುತ್ತಣ್ಣ ಬೆನ್ನೂರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಎ. ಜೆ ಸದಾಶಿವ ಆಯೋಗವು ಒಳ ಮೀಸಲಾತಿಯ ಉದ್ದೇಶವಾಗಿದೆ ಅದಕ್ಕಾಗಿ ಹಲವಾರು ವರ್ಷಗಳಿಂದ ಹೋರಾಟ ನಡೆಯುತ್ತಿದ್ದರು ಆಯೋಗ ಜಾರಿ ಮಾಡಲು ಯಾವ ಸರ್ಕಾರಗಳು ಮುಂದಾಗುತ್ತಿಲ್ಲ ಆದರೆ ಇದೇ ಮೊದಲ ಬಾರಿಗೆ ಈಗಿನ ಸರ್ಕಾರವು ಆಯೋಗ ಜಾರಿ ಮಾಡುವುದಾಗಿ ಭರವಸೆ ನೀಡಿದೆ ಅದಕ್ಕಾಗಿ ನಮ್ಮ ಮಾದಿಗರ ಸಮುದಾಯವು ಸಂಘಟಿತರಾಗಿ ಸರ್ಕಾರಕ್ಕೆ ಒತ್ತಾಯ ಪಡಿಸುವುದಲ್ಲದೆ.ರಾಜ್ಯದ 224 ಶಾಸಕರನ್ನು ಭೇಟಿ ಮಾಡಿ ಅವರಿಗೆ ಸಮುದಾಯದಿಂದ ಮನವರಿಕೆ ಮಾಡುವ ಪ್ರಯತ್ನವು ಕೂಡಾ ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.ಈ ಸಭೆಯಲ್ಲಿ ಮುಖಂಡರಾದ ನಾಗೇಶ ಗಸ್ತಿ, ರಮೇಶ್ ಕೆಸರಗೋಪ್ಪ, ಅರ್ಜುನ ದೊಡಮನಿ, ಎಂ.ಡಿ.ಆನಂದ ಲಕ್ಷ್ಮಣ ,ಮಾಂಗ ಹಣಮಂತ ಮಾದರ, ಎಲ್ಲ ಮುಖಂಡರು ಮತ್ತು ಸುತ್ತ ಮುತ್ತಲಿನ ಗ್ರಾಮಗಳ ಕಾರ್ಯಕರ್ತರು ಭಾಗವಹಿಸಿದ್ದರು.

ವರದಿ :- ಶ್ಯಾಮ್ ತಳವಾರ ಎಕ್ಸ್ ಪ್ರೆಸ್ ಟಿವಿ ಮುಧೋಳ

Please follow and like us:

Related posts

Leave a Comment