ಅಂಬಾನಿ ಪರ, ಶ್ರೀಮಂತರ ಪರ ಸರ್ಕಾರ ಕಾಯಿದೆಗಳನ್ನು ರಚನೆ ಮಾಡುತ್ತದೆ- ಬಿ.ಡಿ.ಪಾಟೀಲ್..!

ವಿಜಯಪುರ: ನಿಂಬೆ ನಾಡಿನಲ್ಲಿ ನಿನ್ನೆ ಕರ್ನಾಟಕ ಬಂದ ಹಿನ್ನೆಲೆ ನಿರಸ ಪ್ರತಿಕ್ರಿಯೆ ವ್ಯಕ್ತವಾಯಿತು. ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನಲ್ಲಿ ಹೇಳುಕೊಳ್ಳವಂತಹ ಬಂದ ವ್ಯವಸ್ಥೆ ನಿರ್ಮಾಣವಾಗಿರಿಲಿಲ್ಲ. ಎಂದಿನಂತೆ ವಾಹನಗಳು ಸಂಚಾರಿಸುತ್ತಿದ್ದವು. ಅಂಗಡಿ ಮುಂಗಟ್ಟಗಳು, ಹೋಟೆಲ್ ಹಣ್ಣು ಹಂಪಲು,ಹೂವಿನ ಅಂಗಡಿಗಳು ಯತ್ತವತ್ತಾಗಿ ವ್ಯಾಪಾರ ವಹಿವಾಟಲ್ಲಿ ಮಗ್ನರಾಗಿದ್ದವು. ಆದರೆ ತಾಲೂಕಿನ ಕೆಲವು ಸಂಘಟನೆಗಳು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಭೂಸುಧಾರಣೆ ಕಾಯ್ದೆ ಜಾರಿಗೆ ತರಲು ಹೊರಟಿರುವ ಕ್ರಮವನ್ನು ಖಂಡಿಸಿ ರಾಜ್ಯ ಬಂದ್ ಕರೆ ಹಿನ್ನಲೆಯಲ್ಲಿ ಜೆಡಿಎಸ್, ಸಿ.ಐ.ಟಿ.ಯು, ರೀಪಬ್ಲಿಕ್ ಪಾರ್ಟಿ, ಅಖಂಡ ಕರ್ನಾಟಕ ರೈತ ಸಂಘ,ಪ್ರಾಂತ ರೈತ ಸಂಘ, ಮುಂತಾದ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದರು. ಪಟ್ಟಣದ ಪ್ರವಾಸಿ ಮಂದಿರದಿಂದ ಬಸವೇಶ್ವರ ವೃತ್ತದವರೆಗೆ ಕಾಲ್ನಡಿಗೆ ಮುಖಾಂತರ ಆಗಮಿಸಿ ಪ್ರತಿಭಟನಾ ಸಭೆ ನಡೆಸಿದರು. ಈ ಸಂದರ್ಬದಲ್ಲಿ ತಾಲೂಕು ಜೆ.ಡಿ.ಎಸ್ ಪಕ್ಷದ ಅಧ್ಯಕ್ಷ ಬಿ.ಡಿಪಾಟೀಲ್ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಚಿದಂಬರ ಕುಲಕರ್ಣಿಯವರಿಗೆ ಮನವಿ ಪತ್ರ ಸಲ್ಲಿಸಿ ಕೇಂದ್ರ ಸರಕಾರದ ವಿರುದ್ಧ ಸಮರವೇ ಸಾರಿದರು. ಕೇಂದ್ರ ಸರಕಾರ ಅನಿಲ್ ಅಂಬಾನಿಯಂತಹ ಉದ್ಯಮಿಗಳಿಗೆ ಸಹಕಾರ ನೀಡುವ ಕಾಯಿದೆಯನ್ನು ರೂಪಿಸುತ್ತಿದ್ದಾರೆ. ಮಾತು ಮಾತ್ರ ಜನ ಪರ ಆದರೆ ಅತೀ ಹೆಚ್ಚಿನ ಕಾಯಿದೆಗಳು ದೇಶವನ್ನು ಖಾಸಗಿಕರಣಕ್ಕೆ ಮುಂದಾಗಿದ್ದಾರೆ. ಈ ರೈತ ವಿರೋದಿ ನೀತಿಗಳನ್ನು ರೂಪಿಸಿ ರೈತರ ಮರಣ ಶಾಸನಗಳನ್ನು ಕೇಂದ್ರ ಸರಕಾರ ಬರೆಯುತ್ತಿದೆ. ಕೂಡಲೇ ಸರಕಾರ ಇಂತಹ ದ್ವಂದ ನೀತಿಗಳು ಕೈ ಬಿಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ರೈತ ಮುಖಂಡ ಬುದ್ದಗೌಡ ಬಿರಾದಾರ ಮಾತನಾಡಿ, ಕಾಯ್ದೆ ಜಾರಿಗೆ ತರಲು ಹೂರಟಿರುವ ಸರ್ಕಾರ ಕೂಡಲೆ ತನ್ನ ನಿರ್ಧಾರವನ್ನು ಬದಲಿಸಿ ರೈತರ, ಕಾರ್ಮಿಕರ ಹಿತ ಕಾಪಾಡಬೇಕು. ಹಾಗೂ ಭೂ ಕಾಯ್ದೆಯನ್ನು ಬದಲಿಸಿ ರೈತರ ಶೋಷಣೆ ತಡೆಯಬೇಕು, ಇಲ್ಲವಾದರೆ ಕೇಂದ್ರ, ರಾಜ್ಯ ಸರ್ಕಾರಗಳು ತರುತ್ತೀರುವ ಕಾಯ್ದೆ ರೈತರ ಪಾಲಿಗೆ ಮರಣ ಶಾಸನವಾಗುತ್ತದೆ ಎಂದರು.ಪ್ರಾಂತ ರೈತ ಸಂಘದ ಭೀಮರಾಯ ಪೂಜಾರಿ, ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಬುದ್ಧುಗೌಡ ಬಿರಾದಾರ, ರೀಪಬ್ಲೀಕ ಪಾರ್ಟಿಯ ನಾಗೇಶ್ ತಳಕೇರಿ, ಸಿ.ಐ.ಟಿ.ಯು.ದಿಂದ ಭಾರತಿ ವಾಲಿ, ಅಶ್ವೀನಿ ತಳವಾರ, ಜೆಡಿಎಸ್ ದಿಂದ ಶ್ರೀಶೈಲಗೌಡ ಪಾಟೀಲ ಕಾಯ್ದೆ ವಿರುದ್ಧ ವಾಗ್ದಾಳಿ ನಡೆಸಿದರು.ಹೋರಾಟದಲ್ಲಿ ನಾನಾಗೌಡ ಪಾಟೀಲ್, ಸಿದ್ದು ಡಂಗಾ, ಮಹಿಬೂ ಬೇವನೂರ, ಶ್ರೀಶೈಲ ಪೂಜಾರಿ, ಸುದೀರ್ ಕರಕಟ್ಟಿ, ಮಾಜಿದ ಸೌದಾಗರ, ಶ್ರೀಶೈಲ ತೋನಶಾಳ, ಖಲೀಲ್ ತೋಳನೂರ, ಬಸವರಾಜ ಹಂಜಗಿ, ನೀಯಾಜ ಅಗರಖೇಡ, ಫಜಲು ಮುಲ್ಲಾ, ದುಂಡು ಬಿರಾದಾರ, ರಾಕೇಶ್ ಅಗಸರ, ಮಾಳು ಮ್ಯಾಕೇರಿ, ಮುತ್ತು ಹೂಸಮನಿ, ಬಾಬು ಮೇತ್ರಿ, ಮಾಹಾದೇವ ಕಂಟಿಕಾರ, ನಾರಾಯಣ ವಾಲಿಕಾರ,ಗೋಪಾಲ ಸುರಪೂರ, ಮುಂತಾದವರು ಹೋರಾಟದಲ್ಲಿ ಉಪಸ್ಥಿತರಿದ್ದರು.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ.

Please follow and like us:

Related posts

Leave a Comment