ಅ.1 ರಿಂದ ಅನ್ಲಾಕ್ 5.0 : ಯಾವುದೆಲ್ಲಾ ಓಪನ್ ಆಗುತ್ತೆ ಗೊತ್ತಾ?

ದೆಹಲಿ : ಮಹಾಮಾರಿ ಕೊರೊನಾ ವೈರಸ್ ಸೋಂಕು ಭೀತಿ ಹಿನ್ನೆಲೆ ಲಾಕ್ಡೌನ್ ಮಾಡಲಾಗಿತ್ತು. ಇದೀಗ ಸಂಕಷ್ಟದಲ್ಲಿ ಸಿಲುಕಿದ್ದ ದೇಶ ಕೊಂಚ ಕೊಂಚವಾಗಿ ಚೇತರಿಸಿಕೊಳ್ಳುತ್ತಿದೆ. ಸದ್ಯ ಅಕ್ಟೋಬರ್ 1 ರಿಂದ ಅನ್ಲಾಕ್ 5.0 ಜಾರಿಯಾಗಲಿದ್ದು, ಹಲವು ನಿಯಮಗಳನ್ನ ಸಡಿಲಗೊಳಿಸಲಾಗಿದೆ. ಈಗಾಗಲೇ ರೈಲ್ವೆ ಸಂಚಾರ, ಚಿತ್ರಮಂದಿರ, ಶಾಲಾ ಕಾಲೇಜುಗಳನ್ನ ಹೊರತುಪಡಿಸಿ,ಎಲ್ಲಾ ನಿಯಮಗಳನ್ನ ತೆರೆಯಲಾಗಿದೆ. ಇದೀಗ ಅಕ್ಟೋಬರ್ 1 ರಿಂದ ಜಾರಿಯಾಗುವ ಅನ್ಲಾಕ್ 5.0 ಮಾರ್ಗಸೂಚಿಯಲ್ಲಿ ಚಿತ್ರಮಂದಿರ ತೆರೆಯಲು ಅವಕಾಶ ನೀಡಬಹುದು ಎನ್ನಲಾಗಿದೆ.
ಚಿತ್ರಮಂದಿರಕ್ಕೆ ಮಾರ್ಗಸೂಚಿ ಏನಿರಬಹುದು?
#ಸಿನಿಮಾ ಥಿಯೇಟರ್‌ಗೆ ಬರುವವರು ಕಡ್ಡಾಯವಾಗಿ ಮಾಸ್ಕ್,ಗ್ಲೌಸ್ ಧರಿಸಿರಬೇಕು
#ಸಾಮಾಜಿಕ ಅಂತರ ಕಾಯ್ದುಕೊಂಡು ಸೆಟ್‌ನಲ್ಲಿ ಕೂರಬೇಕು
#ಒಂದು ಶೋ ಸಮಯದಲ್ಲಿ ಕೇವಲ 100 ಮಂದಿಗೆ ಮಾತ್ರ ಅವಕಾಶ
#ಥಿಯೇಟರ್‌ನಲ್ಲಿ ಎಸಿ ಬಳಸುಚಂತೆ ಇರುವುದಿಲ್ಲ
#ಥಿಯೇಟರ್ ಒಳಗೆ ಬರುವವರ ಪ್ರತಿಯೊಬ್ಬರಿಗೆ ಥರ್ಮಲ್ ಚಕಪ್
ಇನ್ನು ಚಿತ್ರಮಂದಿರಗಳಷ್ಟೇ ಅಲ್ಲದೇ ಪ್ರವಾಸೋದ್ಯಮದ ಮೇಲಿರುವ ಕೆಲ ನಿಯಮಗಳನ್ನೂ ತೆಗೆಯಲಾಗುತ್ತದೆ ಎನ್ನಲಾಗಿದೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment