ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗದ ಕತ್ತು ಕುಕ್ಕಲು ಹೊರಟಿರುವ ರಾಜ್ಯ ಸರ್ಕಾರದ ನಡೆ ಖಂಡಿಸಿ ಪ್ರತಿಭಟನೆ..!

ಸಿಂಧನೂರು : ನಗರದ ತಹಸೀಲ್ದಾರ್ ಕಚೇರಿ ಮುಂದೆ ಸಿಂಧನೂರು ಗೆಳೆಯರ ಬಳಗದ ವತಿಯಿಂದ ಮಾಧ್ಯಮದ ಮೇಲೆ ದಬ್ಬಾಳಿಕೆ ಮಾಡುತ್ತಿರುವ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ಪ್ರತಿಭಟನೆ ಮಾಡಿದರು. ಸಿಂಧನೂರು ಗೆಳೆಯರ ಬಳಗದ ಕಾರ್ಯದರ್ಶಿ ಸೈಯದ್ ಬಂದೇನವಾಜ್ ಮಾತನಾಡಿ ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರ ಆರೋಪ ಮಾಡಿದ ಪತ್ರಕರ್ತರ ಮನೆಗೆ ನ್ಯಾಯಾಂಗದಿಂದ ಸರ್ಚ್ ವಾರೆಂಟ್ ಪಡೆಯದೆ ಪೊಲೀಸರು ಮನೆಗೆ ನುಗ್ಗಿ ಪತ್ರಕರ್ತನ ಪತ್ನಿಯ ಮೊಬೈಲ್ ಕಸಿದು ದಬ್ಬಾಳಿಕೆ ಎಸೆದಿದ್ದಾರೆ .ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂವಿಧಾನದ ನಾಲ್ಕನೇ ಅಂಗವಾದ ಪತ್ರಿಕಾ ರಂಗದ ಕತ್ತು ಕುಕ್ಕಲು ಹೊರಟಿರುವ ರಾಜ್ಯ ಸರ್ಕಾರದ ನಡೆ ತೀವ್ರ ಖಂಡನೀಯ. ಪತ್ರಕರ್ತ ತಪ್ಪು ಮಾಡಿದರೆ ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲು ನಿರ್ದಿಷ್ಟ ಅವಕಾಶಗಳಿರುತ್ತವೆ ಆದರೆ ರಾಜ್ಯ ಸರ್ಕಾರವು ಪವರ್ ಟಿವಿ ನ್ಯೂಸ್ ಲೈವ್ ಬಂದು ಮಾಡಿರುವುದು ತೀವ್ರವಾಗಿ ಖಂಡಿಸುತ್ತೇನೆ.ಈ ಆದೇಶವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.ನಂತರ ತಹಸೀಲ್ದಾರ್ ಮಂಜುನಾಥ ಭೋಗಾವತಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಿಂಧನೂರು ಗೆಳೆಯರ ಬಳಗದ ಅಧ್ಯಕ್ಷರಾದ ಅಜ್ಮಿರ್ ಸಾಬ್ ನಾಗಲಾಪುರ್,ಉಪಾಧ್ಯಕ್ಷ ಸದ್ದಾಂ ಖಾನ್, ವಿಜಯ ಕುಮಾರ,ಮಂಜುನಾಥ ಉಪ್ಪಾರ್,ಮಂಜುನಾಥ ಸಯಕಾಲಪೇಟೆ,ಮೈಹಿಬುಬ್, ಇಮಾಮ್, ಹನುಮಂತ, ವೀರೇಂದ್ರ ಶೆಟ್ಟಿ , ಸೇರಿದಂತೆ ಇತರರು ಭಾಗವಹಿಸಿದ್ದರು.

ವರದಿ-ಸೈಯದ್ ಬಂದೇನವಾಜ್ ಎಕ್ಸ್‌ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment