ವಾಣಿಜ್ಯ ಬೆಳೆ ತಂಬಾಕು ಬೆಳೆ ಹರಾಜು ಪ್ರಕ್ರಿಯೆ ಸೆ.30 ರಿಂದ ಪ್ರಾರಂಭ..!

ಮೈಸೂರು: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಪ್ರಮುಖ ವಾಣಿಜ್ಯ ಬೆಳೆ ತಂಬಾಕನ್ನು ಕಳೆದ ಐವತ್ತು ವರ್ಷಗಳಿಂದ ರೈತರು ಬೆಳೆಯುತ್ತಿದ್ದಾರೆ . ಈ ಬಾರಿ ಉತ್ತಮ ಬೆಲೆಯ ನಿರೀಕ್ಷೆಯಲ್ಲಿ ತಂಬಾಕು ಬೆಳೆಗಾರರು ಇದ್ದು 20-21 ನೇ ಸಾಲಿನ ತಂಬಾಕು ಮಾರುಕಟ್ಟೆಯ ತಂಬಾಕು ಹರಾಜು ಪ್ರಕ್ರಿಯೆ ಇದೇ ತಿಂಗಳು 30ರಂದು ಪ್ರಾರಂಭವಾಗಲಿದ್ದು ಮೊದಲು ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿಯ ಮಾರುಕಟ್ಟೆ ಸಂಖ್ಯೆ 5ರಲ್ಲಿ ಆರಂಭವಾಗಲಿದ್ದು ನಂತರ ಮಾರುಕಟ್ಟೆ ಸಂಖ್ಯೆ 4 ಮತ್ತು 6 ರಲ್ಲಿ ಅಕ್ಟೋಬರ್ 7 ನೇ ತಾರೀಕಿನಂದು ಪ್ರಾರಂಭವಾಗಲಿದೆ ಎಂದು ತಂಬಾಕು ಮಂಡಳಿಯ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ ತಿಳಿಸಿದ್ದಾರೆ. ಈ ವರ್ಷದಲ್ಲಿ ಕೊವೀಡ್-19ಇರುವುದರಿಂದ ಕೆಲವೊಂದು ಸುರಕ್ಷತಾ ಕ್ರಮಗಳೊಂದಿಗೆ ಹರಾಜು ಪ್ರಕ್ರಿಯೆಯನ್ನು ನಡೆಸಲು ತಂಬಾಕು ಮಂಡಳಿ ನಿರ್ಧರಿಸಿದೆ ಆದ್ದರಿಂದ ರೈತರು ಪೂರಕವಾಗಿ ಮಾಸ್ಕ್ ಹಾಕಿಕೊಂಡು ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಾರುಕಟ್ಟೆಯ ತಂಬಾಕು ಹರಾಜು ಪ್ರಕ್ರಿಯೆಯನ್ನು ಸುರಕ್ಷಿತವಾಗಿ ನಡೆಸಲು ರೈತರು ಸಹಕಾರ ನೀಡಬೇಕು ಎಂದರು.

ವರದಿ- ಮಾಗಳಿ ರಾಮೇಗೌಡ ವರದಿಗಾರರು ಪಿರಿಯಾಪಟ್ಟಣ

Please follow and like us:

Related posts

Leave a Comment