ಅಂಬೇಡ್ಕರ್ ತತ್ವಾದರ್ಶಗಳು ಎಲ್ಲರೂ ಅಳವಡಿಸಿಕೊಳ್ಳಲಿ..!

ಶಹಾಪುರ : ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವಾದರ್ಶಗಳು ಜೀವನದಲ್ಲಿ ಎಲ್ಲರೂ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ನಾಗಣ್ಣ ಬಡಿಗೇರ ಹೇಳಿದರು. ತಾಲ್ಲೂಕಿನ ತಡಿಬಿಡಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾನಾಯಕ ಡಾ ಬಿಆರ್ ಅಂಬೇಡ್ಕರ್ ಅವರ ಜೀವನ ಆಧಾರಿತ ಧಾರಾವಾಹಿಯ ಬ್ಯಾನರ್ ಉದ್ಘಾಟಸಿ ಮಾತನಾಡಿದರು.ಮಹಾನಾಯಕ ಧಾರಾವಾಹಿ ಬಹಳ ಅತ್ಯದ್ಭುತವಾಗಿ ಮೂಡಿ ಬರುತ್ತಿದ್ದು ಎಲ್ಲರೂ ನೋಡಲೇಬೇಕಾದ ಮಹಾನಾಯಕ ಚಿತ್ರ ಇದಾಗಿದೆ ಎಂದು ಹೇಳಿದರು. ತುಳಿತಕ್ಕೊಳಗಾದ ಬಡವರ ದೀನ ದಲಿತರ ಶೋಷಿತರ ಅಂದಿನ ಬದುಕಿನ ಕುರಿತು ಎಳೆ ಎಳೆಯಾಗಿ ಬಿಚ್ಚಿಡುವುದರ ಜೊತೆಗೆ ನಾಡಿಗೆ ಉತ್ತಮ ಸಂದೇಶ ಸಾರುವ ಈ ಧಾರಾವಾಹಿ ಪ್ರಸಾರ ವಾಗುತ್ತಿರುವುದು ನಿಜಕ್ಕೂ ಸಂತೋಷದ ಸಂಗತಿ ಆದ್ದರಿಂದ ಜೀ ಟಿವಿ ಕನ್ನಡ ಬಳಗದವರಿಗೆ ಕೃತಜ್ಞತೆಗಳು ಹೇಳಬೇಕಾಗುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಶಿವಕುಮಾರ ತಳವಾರ,ಶಿವಪುತ್ರ ಜವಳಿ, ನಿಜಗುಣ ದೋರನಹಳ್ಳಿ,ರಾಜು ಅಣಬಿ,ಧರ್ಮಣ್ಣ ಪೂಜಾರಿ, ತಿಪ್ಪಣ್ಣ ಲಂಡನ್ಕರ್,ಹೊನ್ನಪ್ಪ ದಳಪತಿ, ಶರಣು ಉಳ್ಳೆಸುಗೂರ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment