ಸೂಕ್ತ ಚಿಕಿತ್ಸೆ ನೀಡದ ಆಸ್ಪತ್ರೆ ವಿರುದ್ದ ಸಾರ್ವಜನಿಕರ ಪ್ರತಿಭಟನೆ..!

ಆನೇಕಲ್: ಜಿಗಣಿಯಲ್ಲಿರುವ ಸುಹಾಸ್ ಆಸ್ಪತ್ರೆಗೆ ಎರಡು ದಿನದ ಹಿಂದೆ ಹೃದಯಾಘಾತದಿಂದ ಮಂಜುನಾಥ್ ಎಂಬಾತ ಆಸ್ಪತ್ರೆಗೆ ದಾಖಲಾಗಿದ್ದರು ಆದ್ರೆ ಸೂಕ್ತ ಚಿಕಿತ್ಸೆ ಸಿಗದೇ ಮಂಜುನಾಥ್ ಮೃತಪಟ್ಟಿದ್ದಾರೆ. ಆಸ್ಪತ್ರೆಯ ಈ ಬೇಜವಾಬ್ದಾರಿತನಕ್ಕೆ ಮೃತನ ಸಂಬಂಧಿಕರು ಹಾಗೂ ಸ್ಥಳೀಯರು ಆಸ್ಪತ್ರೆಯ ಮುಖ್ಯಸ್ಥ ಜಗದೀಶ್ ವಿರುದ್ದ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಕೂಡ ಆಸ್ಪತ್ರೆಯಲ್ಲಿ ಇದೇ ರೀತಿ ಹಲವು ಅನಾಹುತಗಳು ಸಂಭವಿಸಿವೆ. ಈ ಆಸ್ಪತ್ರೆ ರೋಗಿಗಳಿಗೆ ಕಂಟಕ ಪ್ರಾಯವಾಗಿರುವ ಆಸ್ಪತ್ರೆಯಾಗಿದೆ. ಕೊವಿಡ್ ಸಮಯದಲ್ಲಿ ರೋಗಿಗಳಿಗೆ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ಸೂಕ್ತ ಚಿಕಿತ್ಸೆ ನೀಡುತ್ತಿರಲಿಲ್ಲಾ ,ಇಂತಹ ಆಸ್ಪತ್ರೆ ಹಾಗೂ ವೈಧ್ಯರು ಇದ್ದರೇನು ಇಲ್ಲದಿದ್ದರೇನೂ ಇಂತಹ ಆಸ್ಪತ್ರೆಯಿಂದ ಅದೇಷ್ಟೋ ಮಂದಿ ತಮ್ಮ ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ ಹಾಗಾಗಿ ಆಸ್ಪತ್ರೆಯನ್ನು ಮುಚ್ಚಬೇಕು ಎಂದು ಸ್ಥಳೀಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಗಣಿ ಪೋಲಿಸರು ಭೇಟಿ ನೀಡಿ ಪ್ರತಿಭಟನೆ ಮಾಡುತ್ತಿದ್ದ ಜನರನ್ನು ಸ್ಥಳೀಯರನ್ನು ಸಮಾಧಾನ ಪಡಿಸಲು ಮುಂದಾದರು..

ವರದಿ-ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್

Please follow and like us:

Related posts

Leave a Comment