ಆಕ್ರಮವಾಗಿ ಬೆಳೆದಿದ್ದ 149 ಗಾಂಜಾ ಗಿಡಗಳು ವಶಕ್ಕೆ ಪಡೆದ ಪೋಲಿಸರು..!

ಕೋಲಾರ: ಅಬಕಾರಿ ಜಂಟಿ ಆಯುಕ್ತರು ಬೆಂಗಳೂರು ದಕ್ಷಿಣ ವಿಭಾಗದ ಶ್ರೀ ಎಫ್. ಹೆಚ್ ಛಲವಾದಿರವರ ನಿರ್ದೇಶನ ಮತ್ತು ಮಾರ್ಗ ದರ್ಶನದಲ್ಲಿ ಕೆಜಿಎಫ್ ನಗರದ ಮಾರಿಕುಪ್ಪಂ ಪೋಲೀಸ್ ವ್ಯಾಪ್ತಿಯ ಕೃಷ್ಣಗಿರಿ ಲೈನ್ ನ ಜೋಸೆಫ್ ರವರಿಗೆ ಸೇರಿದ ಖಾಲಿ ನಿವೇಶನದಲ್ಲಿ ಆಕ್ರಮವಾಗಿ ಬೆಳೆದಿರುವ ಒಟ್ಟು 149 ಗಾಂಜಾ ಗಿಡಗಳನ್ನು ವಶಪಡಿಸಿಕೊಂಡು ಸುಮಾರು ನಾಲ್ಕು ಲಕ್ಷ ರೂಪಾಯಿ ಬೆಲೆಬಾಳುತ್ತದೆ ಎಂದು ಅಂದಾಜು ಪಡಿಸಲಾಗಿದೆ. ಇನ್ನೂ ಆರೋಪಿಗಳು ತಲೆ ಮರೆಸಿಕೊಂಡಿದ್ದು, ಆರೋಪಿಗಳಾದ ಫಲ್ ರಾಜ್ , ಜೋಸೆಫ್, ಮತ್ತು ಪುಷ್ಪರಾಣಿ ರವರ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ. ಈ ಧಾಳಿಯಲ್ಲಿ ಕೆ.ಜಿಎಫ್ ತಹಸಿಲ್ದಾರರಾದ ರಮೇಶ್ ರವರು ,ಕೆ. ಜಿ.ಎಫ್ ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರಾದ ಎ.ಪಿ ನರಸಿಂಹಮೂರ್ತಿ ರವರು ಬಂಗಾರಪೇಟೆ ವಲಯದ ಅಬಕಾರಿ ನಿರೀಕ್ಷಕರಾದ ಸುಮ.ಎಂ.ಆರ್ ಕೆಜಿಎಫ್ ನ ನಿರೀಕ್ಷಕರಾದ ತಿಮ್ಮಾರೆಡ್ಡಿಯವರು ಜಿಲ್ಲಾ ಇಐಬಿಯ ನಿರೀಕ್ಷಕರಾದ ಕೆ.ಸಿ.ರಾಮು ರವರು ಉಪ ನಿರೀಕ್ಷಕರಾದ ಶಿವಶಂಕರ್, ವೇಣುಗೋಪಾಲ್ ಸಿಬ್ಬಂದಿಯಾದ ಮಂಜುನಾಥ, ಹನುಮಂತ ವಾಗ್ಮೋರೆ, ಅಂಬಾಸಾ ಪವಾರ, ಲಕ್ಷ್ಮಣ ಮಾದಾರ, ನವೀನ್ , ನರಸಿಂಹ ಮೂರ್ತಿ ವಾಹನ ಚಾಲಕರಾದ ಸುಬ್ರಮಣಿ, ಅಶೋಕ್, ಲೋಕೇಶ್ ದಾಳಿ ಸಮಯದಲ್ಲಿದ್ದರು.

ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು

Please follow and like us:

Related posts

Leave a Comment