ಪಿರಿಯಾಪಟ್ಟಣದಲ್ಲಿ ಇಂದಿನಿಂದ ತಂಬಾಕು ಹರಾಜು ಪ್ರಕ್ರಿಯೆ ಪ್ರಾರಂಭ..!

ಪಿರಿಯಾಪಟ್ಟಣ: ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಕಗ್ಗುಂಡಿಯ ತಂಬಾಕು ಹರಾಜು ಮಾರುಕಟ್ಟೆಯ ಆವರಣದ ಫ್ಲಾಟ್ ಫಾರಂ ಸಂಖ್ಯೆ 5 ರಲ್ಲಿ ಪ್ರಾರಂಭವಾದ ತಂಬಾಕು ಹರಾಜು ಪ್ರಕ್ರಿಯೆಗೆ ಮೈಸೂರು ಕೊಡಗು ಲೋಕಸಭಾ ಸಂಸದ ಪ್ರತಾಪ್ ಸಿಂಹ ಪೂಜೆ ಸಲ್ಲಿಸಿ ಚಾಲನೆ ನೀಡಿದರು. ನಂತರ ಮಾತನಾಡಿ ಈ ದಿನ ಹರಾಜು ಪ್ರಕ್ರಿಯೆಯಲ್ಲಿ ಉತ್ತಮ ದರ್ಜೆ ತಂಬಾಕಿಗೆ ಕೆ ಜಿ ಗೆ 175 ರೂ ನೀಡಿದ್ದು ಮುಂಬರುವ ದಿನಗಳಲ್ಲಿ ಸರಾಸರಿ ಕೊಡಿಸುವ ಸಲುವಾಗಿ ತಂಬಾಕು ಖರೀದಿಸುವ ಕಂಪೆನಿಗಳ ಜೊತೆ ಮಾತುಕತೆ ಮೂಲಕ ಚರ್ಚಿಸಿ ಉತ್ತಮ ಬೆಲೆ ಕೊಡಿಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು. ತಂಬಾಕು ಮಂಡಳಿ ಸಿಬ್ಬಂದಿಗಳು ಹಾಗೂ ರೈತ ಬೆಳೆಗಾರರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಿಳಿಸಿದರು ಈ ಸಂದರ್ಭದಲ್ಲಿ ತಂಬಾಕು ಮಂಡಳಿ ಪ್ರಾದೇಶಿಕ ವ್ಯವಸ್ಥಾಪಕ ಮಾರಣ್ಣ ಮಾತನಾಡಿ ಪ್ರಾರಂಭದ ದಿನದಲ್ಲಿ ಉತ್ತಮ ಬೆಲೆ ನಿಗದಿಯಾಗಿದ್ದು ಮುಂದೆಯೂ ಹೆಚ್ಚಿನ ಬೆಲೆಗೆ ಖರೀದಿಸುವಂತೆ ತಿಳಿಸಿದರು .ರೈತರು ತಂಬಾಕುನು ಪ್ರತ್ಯೇಕ ವಿಂಗಡನೆ ಮಾಡಿ ಹದಗೊಳಿಸಿ ತರಬೇಕು ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಾಜಿ ಶಾಸಕ ಹೆಚ್.ಸಿ ಬಸವರಾಜ್, ಕರ್ನಾಟಕ ಒಳಚರಂಡಿ ಮಂಡಳಿಯ ನಿರ್ದೇಶಕ ಆರ್ ಟಿ ಸತೀಶ್,ಜೆಡಿಎಸ್ ಯುವ ಮುಖಂಡ ಪಿ ಎಂ ಪ್ರಸನ್ನ , ಹರಾಜು ಅಧೀಕ್ಷಕರಾದ ಬ್ರಿಜೇಶ್, ಮತ್ತು ಮಂಜುನಾಥ್ ‘ತಾಲೂಕು ಭಾಜಪ ಅಧ್ಯಕ್ಷ ಡಾ॥ಪ್ರಕಾಶ್ ಬಾಬುರಾವ್ ,ರೈತ ಮುಖಂಡರಾದ ಲೋಕೇಶ್ ರಾಜ್ ಅರಸ್ ವಕೀಲ ಜವರೇಗೌಡ, ತಂಬಾಕು ಬೆಳೆಗಾರರು ಹಾಜರಿದ್ದರು .

ವರದಿ- ಮಾಗಳಿ ರಾಮೇಗೌಡ ವರದಿಗಾರರು ಪಿರಿಯಾಪಟ್ಟಣ

Please follow and like us:

Related posts

Leave a Comment