ಮಳೆಗಾಲದಲ್ಲಿ ಬಡವರ ವರವಾದ ಸೀತಾಫಲ- ಕೊಂಡುಕೊಳ್ಳಲು ಮುಗಿಬಿದ್ದ ಜನ..!

ಮುಳಬಾಗಿಲು: ಕೋಲಾರ ಜಿಲ್ಲೆಯ ಮುಳಬಾಗಿಲು, ಶ್ರೀನಿವಾಸಪುರ ತಾಲ್ಲೂಕಿನ ಪ್ರದೇಶದಲ್ಲಿ ಏಗ್ಗಿಲ್ಲದೆ ಗಿಡಗಳಲ್ಲಿ ಸೀತಾಫಲ ಹಣ್ಣು ಈ ವರ್ಷ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಮುಂಗಾರು ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಅರಣ್ಯ ಪ್ರದೇಶದಲ್ಲಿ ಸೀತಾಫಲ ಹಣ್ಣು ಹೆಚ್ಚಾಗಿ ಬೆಳೆದಿದೆ.ನೈಸರ್ಗಿಕವಾಗಿ ಬೆಳೆದಿರುವ ಹಣ್ಣು ನಗರದ ಮಾರುಕಟ್ಟೆಗಳಿಗೆ ಲಗ್ಗೆ ಇಟ್ಟಿದೆ. ಅವುಗಳನ್ನು ಕೊಂಡುಕೊಳ್ಳಲು ಜನರು ಬೆಳಿಗ್ಗೆಯಿಂದಲೇ ಮುಗಿದು ಬಿದ್ದಿದ್ದಾರೆ. ಕೋಲಾರ ಜಿಲ್ಲೆಯ ಮುಳಬಾಗಿಲು ಹಾಗೂ ಶ್ರೀನಿವಾಸಪುರ ತಾಲ್ಲೂಕಿನ ಹಲವು ಗಡಿ ಗ್ರಾಮಗಳಲ್ಲಿ ಸೀತಾಫಲ ಉತ್ತಮವಾಗಿ ಫಸಲು ಬಂದಿದೆ. ನಂಗಲಿ, ಬೈರಕೂರು, ವಡ್ಡಪಲ್ಲಿ,ಬೂರಿಂಗ್ ಕೊತ್ತಕೊಟಾ,ರಾಯಲ್ಪಾಡು,ಸೋಮಯಾಜಲಪಲ್ಲಿ,ಸೇರಿದಂತೆ ಹಲವು ಗ್ರಾಮಗಳು ಆಂಧ್ರಪ್ರದೇಶ ಮತ್ತು ಕರ್ನಾಟಕ ಗಡಿ ಪ್ರದೇಶದ ಗುಡ್ಡಗಾಡುಗಳಲ್ಲಿ ಹೆಚ್ಷಾಗಿ ಸೀತಾಫಲ ಸಿಗುತ್ತವೆ. ಗ್ರಾಮಗಳ ಬಡ ಜನರ ಜೀವನಾಡಿ,ಆರ್ಥಿಕ ವರಮಾನವಾಗಿದೆ. ಒಂದು ಸೀತಾ ಫಲ ಹಣ್ಣು ಹತ್ತರಿಂದ ಇಪ್ಪತ್ತು ರೂಗಳಿಗೆ ಮಾರಾಟ ಒಂದೊಂದು ಸೀತಾಫಲ ಹಣ್ಣಿನ ಗಾತ್ರದ ಮೇಲೆ ಬೆಲೆ ನಿಗದಿಯಾಗುತ್ತದೆ.ಈ ಹಣ್ಣುಗಳಿಗೆ ಯಾವುದೇ ರಾಸಾಯನಿಕ ಗೊಬ್ಬರ,ಕೀಟನಾಶಕಗಳ,ಬಳಕೆ ಮಾಡುವುದಿಲ್ಲ ಅಚ್ಚ ಹಸಿರಿನ ಬೆಟ್ಟದಲ್ಲಿ ಬೆಳೆಯುತ್ತದೆ. ಔಷಧಿ ಗುಣಹೊಂದಿರುವ ಹಣ್ಣು ಮಾನವನ ವಿವಿಧ ರೋಗಗಳಿಗೆ ರಾಮಬಾಣವಾಗಿದೆ. ಪರಿಣಾಮ ಗ್ರಾಮೀಣ ಜನತೆ ಬೆಳಿಗ್ಗೆ 6 ಗಂಟೆಯಿಂದಲೇ ಬುಟ್ಟಿಗಳಲ್ಲಿ ಹಣ್ಣುಗಳನ್ನು ತುಂಬಿಕೊಂಡು ನಗರದ ಹತ್ತಿಕುಣಿ ರಸ್ತೆ, ಹಳೆ ಬಸ್ ನಿಲ್ದಾಣ ಬಳಿ ಬುಟ್ಟಿಗಳಲ್ಲಿ ಮಾರಾಟಕ್ಕೆ ಸಾಲು ಸಾಲಾಗಿ ಕುಳಿತು ಒಂದು ಬುಟ್ಟಿ ಹಣ್ಣುಗಳಿಗೆ 150, ರೂ ರಿಂದ 300ರೂ ವರೆಗೆ ಮಾರಾಟ ಮಾಡುತ್ತಿದ್ದಾರೆ.

ವರದಿ-ವಿ.ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಮುಳಬಾಗಿಲು

Please follow and like us:

Related posts

Leave a Comment