ಆಕಸ್ಮಿಕ ಬೆಂಕಿಗೆ 2 ಲಕ್ಷ ರೂಪಾಯಿ ದುಡ್ಡು ಹಾಗೂ ಗುಡಿಸಲು ಭಸ್ಮ..!

ರಾಯಾಚೂರು: ಗುಡಿಸಲಿಗೆ ಆಕಸ್ಮಿಕ ಬೆಂಕಿ ತಗುಲಿ ಗುಡಿಸಲಿನಲ್ಲಿದ್ದ 2 ಲಕ್ಷ ರೂ.ಹಾಗೂ 30 ಗ್ರಾಂ. ಚಿನ್ನ ಬೆಂಕಿಗೆ ಆಹುತಿಯಾದ ಘಟನೆ ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಯರಗೋಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಬಸಪ್ಪ ಹಾಲಭಾವಿ ಎಂಬುವರ ಗುಡಿಸಲಿಗೆ ಬೆಂಕಿ ಹತ್ತಿ 500,2000 ಮುಖ ಬೆಲೆಯ ಸುಮಾರು 2 ಲಕ್ಷ ರೂಪಾಯಿ ನೋಟುಗಳು ಮತ್ತು 30 ಗ್ರಾಂ.ಚಿನ್ನ, ರೇಷನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಗುಡಿಸಲಿನಲ್ಲಿರುವ ಧವಸ-ಧಾನ್ಯಗಳು ಬೆಂಕಿಗೆ ಕೆನ್ನಾಲಿಗೆಗೆ ಆಹುತಿಯಾಗಿವೆ. ಇನ್ನು ಲಿಂಗಸೂಗೂರು ಅಗ್ನಿ ಶಾಮಕ ಸಿಬ್ಬಂದಿಯವರು ಸ್ಥಳಕ್ಕೆ ತೆರಳಿ ಬೆಂಕಿ ನಂದಿಸಿದ್ದಾರೆ.

ವರದಿ- ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment