ಉತ್ತರ ಪ್ರದೇಶಲ್ಲಿ ನಡೆದ ಮನಿಷಾಳ ಅತ್ಯಾಚಾರ, ಕೊಲೆ ಖಂಡಿಸಿ, ಎಸ್ಎಫ್ಐ, ಡಿವೈಎಫ್ಐ ನಿಂದ ಪ್ರತಿಭಟನೆ…!

ಕವಿತಾಳ್: ವೀಕ್ಷಕರೆ ದೇಶದಾದ್ಯಂತ ವಿದ್ಯಾರ್ಥಿ ನಿಯರ ಮತ್ತು ಮಹಿಳೆಯರ ಮೇಲೆ ಅತ್ಯಾಚಾರ, ದೌರ್ಜನ್ಯ, ದಬ್ಬಾಳಿಕೆ ಹಾಗೂ ಕ್ರೌರ್ಯದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ,ಅದನ್ನು ನಿಯಂತ್ರಣ, ಮಾಡಲು ಕೇಂದ್ರ ಹಾಗೂ ರಾಜ್ಯ ಸರ್ಕಾರ ಹಾಗೂ ಸಂಬಂದಿಸಿದ, ಇಲಾಖೆಗಳು ಸಂಪೂರ್ಣವಾಗಿ ವಿಫಲವಾಗಿದೆ. ಉತ್ತರ ಪ್ರದೇಶದ ರಾಜ್ಯದಲ್ಲಿ ಮನಿಷಾ ಎಂಬ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಿ ನಾಲಿಗೆಯನ್ನು ಕತ್ತರಿಸಿ ಬೆನ್ನು ಮೂಳೆ ಮುರಿದು ಕೊಲೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಎಸ್ಎಫ್ಐ ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್ ಮನಿಷಾಳ ಸಾವು ಅತ್ಯಂತ ದುರಂತ ಮತ್ತು ಖಂಡನೀಯ .ಕೂಡಲೇ ಪ್ರಕರಣವನ್ನು ಕುರಿತಂತೆ ಸಮಗ್ರವಾಗಿ ತನಿಖೆಯನ್ನು ನಡೆಸಿ ಆರೋಪಿಗಳಿಗೆ ಸೂಕ್ತ ಶಿಕ್ಷೆಯನ್ನು ಒದಗಿಸಬೇಕು ಹಾಗೂ ಜಸ್ಟಿಸ್ ವರ್ಮಾ ಸಮಿತಿಯ ಶಿಫಾರಸ್ಸುಗಳನ್ನು ಜಾರಿಗೆ ತಂದು ಇಡೀ ದೇಶಾದ್ಯಂತ ವಿದ್ಯಾರ್ಥಿನಿಯರ, ಮತ್ತು ಮಹಿಳೆಯರ ರಕ್ಷಣೆಯನ್ನು ಒದಗಿಸಲು ಮುಂದಾಗಬೇಕೆಂದು SFI ಮತ್ತು DYFI ಸಂಘಟನೆಗಳು ಒತ್ತಾಯಿಸುವ ಮೂಲಕ ಗ್ರಾಮ ಲೆಕ್ಕಾಧಿಕಾರಿಗಳ ಮೂಲಕ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ S F I ಜಿಲ್ಲಾ ಕಾರ್ಯದರ್ಶಿ ಲಿಂಗರಾಜ ಕಂದಗಲ್, D Y F I, ಅಧ್ಯಕ್ಷ ಮಹಮದ್ ರಫಿ ಬೋದಾಲ್, ವೆಂಕಟೇಶ್, ನಾಗಮೋಹನ್ ಸಿಂಗ್, ರೈತ ಹೋರಾಟಗಾರ ಮಹಿಬೂಬ್, ಮಲ್ಲಿಕಾರ್ಜುನ ಉಪಸ್ಥಿತರಿದ್ದರು.

ವರದಿ-ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿ ವಿ ಸಿರವಾರ.

Please follow and like us:

Related posts

Leave a Comment