ಪೊಲೀಸ್ ಇಲಾಖೆಯ ವೈಫಲ್ಯ ಹಾಗೂ ದುರಾಡಳಿತ ಖಂಡಿಸಿ ಪ್ರತಿಭಟನೆ…!

ಸಿಂಧನೂರು: ತಾಲೂಕಿನಲ್ಲಿ ನಡೆದಿರುವ ಅಕ್ರಮ ಚಟುವಟಿಕೆಗಳಾದ ಇಸ್ಪಾಟ್ ಹಸಿ ಗಾಂಜಾ ಮರಳು ದಂಡೆಗೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ ಪ್ರತಿಭಟನೆ ಮೆರವಣಿಗೆಯನ್ನು ಮಾಜಿ ಶಾಸಕ ನಿವಾಸದಿಂದ ತಹಶಿಲ್ದಾರ ಕಚೇರಿ ವರೆಗೆ ಮಾಡಿದರು ಮೆರವಣಿಗೆ ಉದ್ದಕ್ಕೂ ಪೊಲೀಸ್ ಇಲಾಖೆಯ ವೈಫಲ್ಯದ ವಿರುದ್ಧ ಹಾಗೂ ಶಾಸಕರ ದುರಾಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿದರೂ ಇನ್ನೂ ಜಿ.ಪಂ ಸದಸ್ಯ ಬಸವರಾಜ ಹಿರೇಗೌಡ ಮಾತನಾಡಿ ತಾಲ್ಲೂಕಿನಲ್ಲಿ ನಡೆದಿರುವ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಪೊಲೀಸ್ ಇಲಾಖೆ ಸಂಪೂರ್ಣ ವಿಫಲವಾಗಿದೆ .ಶಾಸಕ ವೆಂಕಟರಾವ್ ನಾಡಗೌಡ ಅವರ ಕುಮ್ಮಕ್ಕಿನಿಂದ ಪೊಲೀಸರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ಇಲ್ಲಸಲ್ಲದ ಕೇಸುಗಳನ್ನು ದಾಖಲೆ ಮಾಡುತ್ತಿದ್ದ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕಾರಣ ಪೊಲೀಸ್ ಇಲಾಖೆ ಅಧಿಕಾರಿಗಳು ತಪ್ಪಿತಸ್ಥರ ಮೇಲೆ ಮಾತ್ರ ಕ್ರಮ ಕೈಗೊಳ್ಳಲು ಮುಂದಾಗಬೇಕು ಎಂದು ಆಗ್ರಹಿಸಿದರು.ನಂತರ ತಹಶೀಲ್ದಾರ್ ಮಂಜುನಾಥ್ ಭೋಗಾವತಿ ಮೂಲಕ ಪೊಲೀಸ್ ಮಹಾನಿರ್ದೇಶಕರಿಗೆ ಮನೆ ಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಪಂಪನಗೌಡ ಬಾದರ್ಲಿ,ಬಾಬುಗೌಡ ಬಾದರ್ಲಿ,ಖಾಜಾ ಮಾಲಿಕ್, ಅನಿಲ್ ಕುಮಾರ್, ಕರುಣಾ, ವಾಗೇಶ್, ಶ್ರೀನಿವಾಸ ರೆಡ್ಡಿ ಬಸವರಾಜ ,ಸಲೀಮ್, ಮಂಜುನಾಥ್, ಶರಣಬಸವ, ಬಸಮ್ಮ, ಶರಣಮ್ಮ, ಸೇರಿದಂತೆ ನೂರಾರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು .

ವರದಿ- ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment