ತಾಲೂಕು ಪಂಚಾಯತ್ ೧೭ ನೇ ಸಾಮಾನ್ಯ ಸಭೇ- ಗೆಜಟ್ ಹೊರಡಿಸಿದ್ರು ಪ್ರಮಾಣ ಪತ್ರ ನೀಡುತ್ತಿಲ್ಲ ಯಾಕೆ.?

ವಿಜಯಪುರ : ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ೧೭ ನೇ ತಾಲೂಕು ಪಂಚಾಯತ್ ಸಾಮನ್ಯ ಸಭೆಯಲ್ಲಿ, ಕೇಂದ್ರ ಹಾಗೂ ರಾಜ್ಯ ಸರಕಾರ ತಳವಾರ & ಪರಿವಾರ ಜಾತಿಗಳನ್ನು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆ ಮಾಡಿ, ಗೆಜಟ್ ಜೊತೆಗೆ ಸುತ್ತೊಲೆಗಳು ಹೊರಡಿಸಿದ್ರೂ ಇಂಡಿ ತಾಲ್ಲೂಕಿನಲ್ಲಿ ಕಂದಾಯ ಇಲಾಖೆಯವರು ಪ್ರಮಾಣ ಪತ್ರ ಕೊಡುತ್ತಿಲ್ಲ ಎಂದು ಧರಣಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಯಾವ ಕಾರಣಕ್ಕೆ ಇಂತಹ ಸ್ಥಿತಿ ನಿರ್ಮಾಣ ಮಾಡಿದ್ದಿರಿ ಎಂದು ತಾಲೂಕು ಪಂಚಾಯತ್ ಸದಸ್ಯ ಗಂಗಾಧರ ಬಿರಾದಾರ, ಸಿದ್ದಪ್ಪ ತಳವಾರ ಪ್ರಶ್ನೆ ಮಾಡಿದರು. ಈ ಸಂದರ್ಭದಲ್ಲಿ ತಹಶಿಲ್ದಾರ ಸಿ.ಎಸ್.ಕುಲಕರ್ಣಿ ಮಾತಾನಾಡಿ ಸುತ್ತೊಲೆಗಳಲ್ಲಿ ಗೊಂದಲ ಇರೊದ್ರಿಂದ ಕೇಂದ್ರ ಸರಕಾರಕ್ಕೆ ಸ್ವಷ್ಟಿಕರಣ ಕೊರಿ ಪತ್ರ ಬರೆಯಲಾಗಿದೆ. ಮರು ಉತ್ತರ ಬಂದ ತಕ್ಷಣ ಮುಂದಿನ ಕ್ರಮ ತೆಗೆದುಕೊಳ್ಳುತ್ತೆವೆ ಎಂದರು. ತಾಲೂಕು ಪಂಚಾಯತ್ ಸದಸ್ಯ ದಶರಥ ಬಾಣಿಕೊಲ ರಾಜ್ಯ ಸರಕಾರದಿಂದ ಕೇಂದ್ರ ಸರಕಾರಕ್ಕೆ,ಕೇಂದ್ರ ಸರಕಾರದಿಂದ ರಾಜ್ಯ ಸರಕಾರಕ್ಕೆ ಪ್ರಮಾಣ ಪತ್ರ ಕೊಡಲು ಆದೇಶವಾಗಿದೆ. ತಳವಾರ & ಪರಿವಾರ ಎಂಬ ಜಾತಿಯ ಪದಗಳು ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಂಡು ಖಾಯಿದೆಯಾಗಿ ಹೊರ ಹೊಮ್ಮಿದೆ. ಒಂದು ಖಾಯಿದೆಯನ್ನೇ ಪ್ರಶ್ನೆ ಮಾಡೊದು ಎಷ್ಟು ಸೂಕ್ತ ಎಂಬ ಪ್ರಶ್ನೆ ಮಾಡಿದರು. ಕೂಡಲೇ ಈ ಸಮುದಾಯಗಳಿಗೆ ಪ್ರಮಾಣ ಪತ್ರ ಕೊಡಬೇಕು ಎಂದರು.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ ಇಂಡಿ.

Please follow and like us:

Related posts

Leave a Comment