ಡ್ರಗ್ಸ್ ವಿಚಾರದಲ್ಲಿ ನಾನು ಅಪರಾಧಿಯಲ್ಲ- ವೀಡಿಯೋದಲ್ಲಿ ಗಳಗಳನೇ ಕಣ್ಣಿರಿಟ್ಟ ನಿರೂಪಕಿ..!

ಬೆಂಗಳೂರು : ಸ್ಯಾಂಡಲ್ವು್ಡ್ ಡ್ರಗ್ಸ್ ಪ್ರಕರಣ ಸಂಬಂಧ ಈಗಾಗಲೇ ಸಿಸಿಬಿ ವಿಚಾರಣೆ ಎದುರಿಸಿರುವ ನಿರೂಪಕಿ, ನಟಿ ಅನುಶ್ರೀ ಇಂದು ಕಣ್ಣೀರು ಹಾಕಿದ್ದಾರೆ.ಈ ಸಂಬಂಧ ವೀಡಿಯೋ ಮಾಡಿರುವ ಅವರು, ಈ ವೀಡಿಯೋವನ್ನು ನಾನು ನನ್ನನ್ನು ಸಮರ್ಥಿಸಿಕೊಳ್ಳಲು ಅಥವಾ ಕರುಣೆಗೋಸ್ಕರ ಮಾಡುತ್ತಿಲ್ಲ. ಎಲ್ಲರೂ ತಮ್ಮ ತಮ್ಮ ಅಭಿಪ್ರಾಯಗಳನ್ನು ಸುತ್ತಮುತ್ತ ಹೇಳುತ್ತಿದ್ದಾರೆ. ಈ ಅಭಿಪ್ರಾಯಗಳು ನನ್ನ ಬಗ್ಗೆ ಇರುವುದರಿಂದ ಈ ವೀಡಿಯೋ ಮಾಡುತ್ತಿದ್ದೇನೆ ಎಂದು ಹೇಳಿ ಗಳಗಳನೇ ಕಣ್ಣೀರಿಟ್ಟಿದ್ದಾರೆ. 2020ರ ಸೆಪ್ಟೆಂಬರ್ 24 ನನ್ನ ಜೀವನದ ಯಾವ ಘಟ್ಟದಲ್ಲೂ ನಾನು ಮತ್ತೆ ನೆನಪಿಸಿಕೊಳ್ಳೋದಕ್ಕೆ ಇಷ್ಟಪಡದಿರುವಂತಹ ದಿನ. 12 ವರ್ಷಗಳ ಹಿಂದೆ ನಾನು ಡ್ಯಾನ್ಸ್ ರಿಯಾಲಿಟಿ ಶೋ ಒಂದರಲ್ಲಿ ಗೆದ್ದಾಗ, ಆ ದಿನ ಭವಿಷ್ಯದಲ್ಲಿ ಮುಳ್ಳಾಗುತ್ತೆ ಅಂತ ಅಂದುಕೊಂಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ನೋಟಿಸ್ ಬಂದಿರುವುದು ನನಗೆ ಬೇಜಾರಾಗಿಲ್ಲ. ಸಿಸಿಬಿ ಕಚೇರಿಗೆ ಹೋದ ಮಾತ್ರಕ್ಕೆ ನಾನು ಅಪರಾಧಿ ಅಥವಾ ಆರೋಪಿ ಅಂತ ಆಗುವುದಿಲ್ಲ. ಆ ವಿಚಾರದಲ್ಲಿ ನನ್ನನ್ನು ಬಿಂಬಿಸಿದ ರೀತಿ ನನಗೆ ತುಂಬಾನೇ ನೋವು ಮಾಡಿತ್ತು. ನೋವು ತುಂಬಾ ಸಣ್ಣ ಪದ. ಕಳೆದ ಒಂದು ವಾರದಿಂದ ನಮ್ಮ ಮನೆಯವರ ನೆಮ್ಮದಿಯನ್ನು ಹಾಳು ಮಾಡಿತ್ತು. ಆದರು ಕೂಡ ಈ ಕಷ್ಟಕಾಲದಲ್ಲಿ ಏನೂ ಹೆಳದೆ, ಏನೂ ಕೇಳದೆ ಅನುಶ್ರೀ ನೀವೇನು ಅಂತ ನಮಗೆ ಚೆನ್ನಾಗಿ ಗೊತ್ತು. ನಿಮ್ಮ ಮೇಲೆ ನಮಗೆ ಅಪಾರವಾದ ನಂಬಿಕೆ ಇದೆ ಅಂತ ನನ್ನ ಜೊತೆ ನಿಂತಿರುವ ಎಲ್ಲಾ ಕನ್ನಡಿಗರಿಗೆ ತುಂಬು ಹೃದಯದ ಧನ್ಯವಾದಗಳು. ಇದನ್ನು ನಾನು ಯಾವತ್ತೂ ಮರೆಯಲ್ಲ ಎಂದು ಹೇಳಿದ್ದಾರೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment