ಸರಳವಾಗಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 151ನೇ ಗಾಂಧಿ ಜಯಂತಿ ಆಚರಣೆ..!

ಸಿಂಧನೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮಹಾನ್ ಚೇತನ ಇಂದಿಗೂ ಮಾದರಿ ನಾಯಕರಾಗಿದ್ದಾರೆ ಎಂದು ತಾಲೂಕು ದಂಡಧಿಕಾರಿ ಮಂಜುನಾಥ ಭೋಗಾವತಿ ಹೇಳಿದರು. ನಗರದ ತಹಶಿಲ್ದಾರ ಕಚೇರಿಯಲ್ಲಿ ತಾಲೂಕು ಆಡಳಿತದ ವತಿಯಿಂದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರು 151 ನೇ ಜಯಂತಿಯನ್ನು ಆಚರಣೆ ಮಾಡಲಾಯಿತು. ಗಾಂಧೀಜಿಯವರು ಕುರಿತು ಮಾತನಾಡಿದ ಅವರು ಸ್ವಾತಂತ್ರ್ಯ ದೊರಕಿಸಲು ತಮ್ಮ ಜೀವನವನ್ನು ಮುಡಿಪಾಗಿಟ್ಟು ಶ್ರಮಿಸಿದರು. ಅಹಿಂಸೆಯ ಅಸ್ತ್ರ ಹಿಡಿದು ರಾಷ್ಟ್ರವನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಪ್ರೇರೇಪಿಸಿ ಯಶಸ್ವಿಯಾದ ಬಳಿಕವೂ ತಮ್ಮ ಸರಳ ಬದುಕನ್ನು ಮುಂದುವರೆಸಿದರು. ಹಿಂದಿನ ಯುವ ಜನತೆ ಅವರ ನಡೆದುಕೊಂಡು ಬಂದ ಹಾದಿಯಲ್ಲಿ ಸಾಗಲು ಮನವಿ ಮಾಡಿದರು.ಈ ಸಂಧರ್ಭದಲ್ಲಿ ನಗರ ಸಭೆ ಪೌರಾಯುಕ್ತ ಆರ್. ವಿರೂಪಾಕ್ಷಿ ಮೂರ್ತಿ, ನಗರ ಯೋಜನೆ ಪ್ರಾಧಿಕಾರದ ಅಧ್ಯಕ್ಷ ಅಮರೇಗೌಡ ವಿರುಪಾಪುರ್.ಜೆಡಿಎಸ್ ಪಕ್ಷದ ಮುಖಂಡ ಅಭಿಷೇಕ್ ನಾಡಗೌಡ, ನಗರಸಭೆ ಸದಸ್ಯರಾದ ಜೀಲಾನಿಪಾಷ, ನಿರುಪಾದಿ, ಮಧರ್ಮಗೌಡ ಮಲ್ಕಪುರ, ನಗರ ಸಭೆ ನಾಮನಿರ್ದೇಶನ ಸದಸ್ಯ ಪ್ರಶಾಂತ ಕಿಲ್ಲೇದ್, ಕಂದಾಯ ಇಲಾಖೆ ಸಿಬ್ಬಂದಿಗಳು ಭಾಗವಹಿಸಿದರು.

ವರದಿ : ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment