ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿ ಸರಳಾಚಾರಣೆ..!

ರಾಯಚೂರು: ರಾಯಚೂರು ಜಿಲ್ಲೆಯ ಕವಿತಾಳ ಪಟ್ಟಣದಸಂತೆ ಬಜಾರ್ ಹತ್ತಿರ ರಾಷ್ಟ್ರಪಿತ ಮಾಹಾತ್ಮ ಗಾಂಧಿಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಜಯಂತಿಯನ್ನು ಜಯಭಾರತ್ ಸಂಘಟನೆ ವತಿಯಿಂದ ಸರಳವಾಗಿ ಆಚರಿಸಲಾಯಿತು. ಈ ಕಾರ್ಯ ಕ್ರಮ ದಲ್ಲಿ ಮಾತನಾಡಿದ ಡಾ// ರಾಮಕೃಷ್ಣರವರು ಮಹಾತ್ಮಾ ಗಾಂಧೀಜಿಯವರು ಜೀವನದೂ ದ್ದಕ್ಕೂ ನಡೆದು ಬಂದ ಹಾದಿಯನ್ನು ಸ್ಮರಿಸಿದರು. ಇನ್ನೂರ್ವ ಹಿರಿಯರಾದ ಕೋಸ್ಗಿ ವಿಜಯ ಭಾಸ್ಕರ್ ರವರು ಈ ಸಂದರ್ಭದಲ್ಲಿ ಮಾತನಾಡಿ ಮಹಾತ್ಮ ಗಾಂಧಿಯವರ ಆದರ್ಶ್ ಪಾಲನೆ ಅವರ ಸರಳತೆ,ಬಗ್ಗೆ ಮೆಲಕು ಹಾಕುತ್ತ ಲಾಲ್ ಬಹದ್ದೂರ್ ಶಾಸ್ತ್ರಿ ಯವರು ಅತ್ಯಂತ ಸರಳ ಪ್ರಧಾನಿ ಅವರ ಕೂಡುಗೆಗಳು ದೇಶಕ್ಕೆ ಅಮೂಲ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಜಯಭಾರತ್ ಸಂಘಟನೆ ಅಧ್ಯಕ್ಷರಾದ ಜಹಾಂಗಿರವರು ಕೇವಲ ಮಹಾತ್ಮರ ಆದರ್ಶಗಳನ್ನು ದಿನಾಚರಣೆಯಲ್ಲಿ ಮಾತ್ರ ಸ್ಮರಿಸದೆ ಜೀವನದಲ್ಲಿ ಅವುಗಳನ್ನು ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಜಾವಿದ್ ಟೈಲೋರ್, ಯಾಸಿನ್, ಸಿದ್ದಾರ್ಥ, ಸುಗುರೇಶ್, ರಫಿ.ನಿಂಗಪ್ಪ ಬಡಿಗೇರ್,ಪಾಶ ಟೈಲೋರ್, ರಿಯಾಜ್ ಮುಲ್ಲಾ ಮಹಮದ್, ,ಹನುಮಂತ ದೇವರಾಜ್ ಇತರರು ಪಾಲ್ಗೊಂಡಿದ್ದರು.

ವರದಿ- ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ

Please follow and like us:

Related posts

Leave a Comment