ಬಾದಾಮಿಯ ಎಸ್ ಎಫ್ ಹೊಸಗೌಡ್ರ ವರ್ಲ್ಡ್ ಸ್ಕೂಲ್ ನಲ್ಲಿ ಗಾಂಧಿಜಯಂತಿ ಆಚರಣೆ..!

ಬಾಗಲಕೋಟೆ: ಬಾದಾಮಿಯ ಎಸ್ ಎಫ್ ಹೊಸಗೌಡ್ರ ವರ್ಲ್ಡ್ ಸ್ಕೂಲ್ ನಲ್ಲಿ ರಾಷ್ಟಪಿತ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹ್ದೂರ ಶಾಸ್ತ್ರಿ ಅವರ ಜನ್ಮದಿನ ಆಚರಣೆ ಮಾಡಿದರು. ಹಾಗೂ ಸ್ವಾತಂತ್ರ್ಯ ಹೋರಾಟಗಾರರ ಜನ್ಮದಿನದ ಅಂಗವಾಗಿ ಕೋರೋನಾ ಸೊಂಕು ನಿರ್ವಹಣೆ ಜಾಗೃತಿ ಅಭಿಯಾನವನ್ನು ಸಂಸ್ಥೆಯ ಅಧ್ಯಕ್ಷ ಮಹೇಶ ಹೋಸಗೌಡ್ರ ಹಮ್ಮಿಕೊಂಡದ್ದರು.ಬಾದಾಮಿ ನಗರದ ಎಸ್ ಎಫ್ ಹೊಸಗೌಡ್ರ ಕಾಲೋನಿಯಲ್ಲಿರುವ ಎಸ್ ಎಫ್ ಹೊಸಗೌಡ್ರ ವರ್ಲ್ಡ್ ಸ್ಕೂಲ್‌ನಲ್ಲಿ ರಾಷ್ಟ್ರ ಪ್ರೇಮಿಗಳು, ಸ್ವಾತಂತ್ರ್ಯ ಹೋರಾಟಗಾರ ಗಾಂಧೀಜಿ ಮತ್ತು ಲಾಲ್‌ಬಹ್ದೂರ ಶಾಸ್ತ್ರಿ ಅವರ ಭಾವಚಿತ್ರಕ್ಕೆ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಹೇಶ ಎಸ್ ಹೊ‌ಸಗೌಡ್ರ ಪುಷ್ಪಾರ್ಚನೆ ಮಾಡುವ ಮೂಲಕ ರಾಷ್ಟ್ರ ಪ್ರೇಮಿಗಳಿಗೆ ನಮನ ಸಲ್ಲಿಸಿದರು. ರಾಷ್ಟಪಿತ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್‌ಬಹ್ದೂರ ಶಾಸ್ತ್ರಿ ಅವರ ಜನ್ಮದಿನ ಆಚರಣೆ ಅಂಗವಾಗಿ ನಗರದಲ್ಲಿ ಸಂಚರಿಸಿ ನಗರದ ನಿವಾಸಿಗಳಿಗೆ ಮಹಾ ಮಾರಿ ಕೋರೋನಾ ಸೊಂಕಿನ ಕುರಿತು ಜಾಗ್ರತೆ ಮಾಡಿಸಿ ಮಾಸ್ಕ್ ಹಾಗೂ ಸ್ಯಾನಿಟರಿ ಫ್ಯಾಕ್ ನೀಡಿ ಸೊಂಕು ನಿರ್ವಹಣೆ ಕುರಿತು ಜನರಲ್ಲಿ ಜಾಗೃತಿ ಮೂಡಿಸಿದರು.ಇನ್ನು ಇದೆ ವೇಳೆ ಹಲವು ಜನರಿಗೆ ಸನ್ಮಾನವನ್ನೂ ಕೂಡ ಮಾಡಲಾಯಿತು. ಪತ್ರಕರ್ತರ ಸಾಹಿತಿ ಸಿ ಎಂ ಜೋಶಿ ಅವರು ಬರೆದ ಭಾರತೀಯ ಸಾಮಾಜಿಕ ಚಿಂತನೆಯ ಪುಸ್ತಕವನ್ನು ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶಂಕ್ರಪ್ಪ ಕೆಳಗಿನಮನಿ ಖಾಸಗಿ ವಾಹಿನಿಯ ಮುಖ್ಯಸ್ಥ ಚಂದ್ರಶೇಖರ್ ಪಮ್ಮಾರ ಸಾಹಿತಿಗಳ ಸಿ ಎಂ ಜೋಶಿ ಶಿವಾನಂದ ಯಾದವಾಡ ಮಾರುತಿ ಹೊಸಗೌಡ್ರ, ಎಸ್ ಜಿ ದೇಸಾಯಿ, ಪುರಸಭೆ ಸದಸ್ಯೆ ಯಮುನಾ, ಹೊಸಗೌಡ್ರ ಗೌರಮ್ಮ, ಬೇಲೂರಪ್ಪನವರ ಚೆನ್ನಮ್ಮ, ಹೊಸಗೌಡ್ರ ಪ್ರಕಾಶ್, ಪೂಜಾರ ಫಕ್ಕಿರಪ್ಪ, ಇನ್ನೂ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ವರದಿ-ಶ್ರೀಧರ ಚಂದರಗಿ ಎಕ್ಸ್ ಪ್ರೆಸ್ ಟಿವಿ ಬಾಗಲಕೋಟೆ

Please follow and like us:

Related posts

Leave a Comment