ಉತ್ತರ ಪ್ರದೇಶದ ಮನಿಷ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲಲ್ಲಾ- ಚಂದ್ರು ಡಿವೈಎಫ್ಐ ..!

ರಾಯಚೂರು:ರಾಯಚೂರ ಜಿಲ್ಲೆಯ ಸಿರಿವಾರ ತಾಲ್ಲೂಕಿನಲ್ಲಿ ಅಂಬೇಡ್ಕರ್ ನಾಮ ಫಲಕದಿಂದ ವಾಲ್ಮೀಕಿ ವೃತ್ತದ ವರೆಗೆ ಮೇಣದ ಬತ್ತಿ ಹಿಡಿದು ಪಾದಯಾತ್ರೆ ಮಾಡುವ ಮೂಲಕ ಮನಿಷಾಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಡಿವೈಎಫ್ಐ ಮುಖಂಡರಾದ ಚಂದ್ರುರವರು ಉತ್ತರ ಪ್ರದೇಶದ ಮನಿಷ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ,ಸಾಕ್ಷಿ ನಾಶಕ್ಕಾಗಿ ಕಾಲು ಬೆನ್ನು ಮೂಳೆ ಮುರಿದು, ನಾಲಿಗೆಯನ್ನು ಕತ್ತರಿಸಿ ಘನ ಘೋರ ಕೃತ್ಯ ಎಸಗಿದ ಪಾಪಿಗಳಿಗೆ ಕಾನೂನು ತಕ್ಕ ಪಾಠ ಕಲಿಸಬೇಕು. ದೇಶದಲ್ಲಿ ಹೆಣ್ಣುಮಕ್ಕಳು,ವಿದ್ಯಾರ್ಥಿಗಳು,ಹಾಗೂ ಮಹಿಳೆಯರಿಗೆ ಸೂಕ್ತ ರಕ್ಷಣೆ ಒದಗಿಸಲು ಸರ್ಕಾರಗಳು ಮುಂದಾಗಬೇಕು ಅಲ್ಲಿಯವರೆಗೆ ಎಲ್ಲೆಡೆ ಹೋರಾಟಗಳು ಮುಂದುವರೆಯುತ್ತವೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಚಂದ್ರಶೇಖರ್ ಗೌಡವೆಂಕಟೇಶ್ ದೊರೆ ರಂಗನಾಥ್ ನಾಯಕ, ಅಪ್ಪಾಜಿ ನಾಯಕ,ಪಾಥ೯ಯಾದವ್,ಪ್ರವೀಣ್, ಸುದರ್ಶನ್ , ಕೆ.ರಾಘು, ಗುರುರಾಜ, ನಾಗರಾಜ ಗಿಂಡಿ ಇತರರು ಉಪಸ್ಥಿತರಿದ್ದರು.

ವರದಿ- ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಸಿರವಾರ

Please follow and like us:

Related posts

Leave a Comment