ಅವಳು ಡಿ.ಕೆ ರವಿ ಹೆಂಡತಿ ಅನ್ನೋ ಯೋಗ್ಯತೆ ಅವತ್ತೇ ಕಳೆದುಕೊಂಡ್ಲು : ಗೌರಮ್ಮ

ತುಮಕೂರು : ಆರ್.ಆರ್ ನಗರ ಉಪಚುನಾವಣೆಯಲ್ಲಿ ದಿವಂಗತ ಡಿ.ಕೆ ರವಿ ಕುಸುಮಾ ಸ್ಪರ್ಧೆ ಮಾಡುತ್ತಿದ್ದಾರೆ ಎನ್ನಲಾಗಿದ್ದು, ಇದೀಗ ಡಿ.ಕೆ ರವಿ ಕುಟುಂಬದಿಂದಲೇ ಭಾರಿ ವಿರೋಧ ವ್ಯಕ್ತವಾಗಿದೆ. ನನ್ನ ಮಗನ ಜೊತೆ ಅವಳು ಹೋಗಿಬಿಟ್ಲು ಅಂತ ತಿಳಿದುಕೊಂಡಿದ್ದೇನೆ. ನನ್ನ ಮಗನ ದುಡ್ಡಲ್ಲಿ ಒಂದು ರುಪಾಯಿ ನಮ್ಮ ಕಷ್ಟಕ್ಕೆ ಕೊಡಲಿಲ್ಲ, ನನ್ನ ಮಗನ ಹೆಸರು ಹೇಳಿಕೊಂಡು ಯಾಕೆ ಅವಳು ಚುನಾವಣೆಗೆ ನಿಂತುಕೊಳ್ಳಬೇಕು ಎಂದು ತಾಯಿ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೊಡ್ಡಕೊಪ್ಪಲಿನಲ್ಲಿ ಮಾತನಾಡಿದ ಅವರು ಮಣ್ಣಲ್ಲಿ ಬಿಸಾಕು ಹೋದೋಳು ಇವತ್ತಿನವರೆಗೂ ಬಂದಿಲ್ಲ, ಡಿ.ಕೆ ರವಿ ಅನ್ನೋ ಯೋಗ್ಯತೆ 6 ವರ್ಷದ ಕೆಳಗೆ ಕಳೆದುಕೊಂಡಿದ್ದಾಳೆ ಎಂದು ವಾಗ್ದಾಳಿ ನಡೆಸಿದ್ದಾರೆ. ಇನ್ನು ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ರು, ನನ್ನ ಮಗನ ಹೆಸರು ಹಾಗು ಫೋಟೊ ಹಾಕಬಾರದು ಎಂದು ತಾಕೀತು ಮಾಡಿದ್ದಾರೆ. ಫೋಟೊ ಬಳಸಿದ್ರೆ, ನಾನೇ ಹುಡುಗರನ್ನ ಕರೆದುಕೊಂಡು ಹೋಗಿ ಬೆಂಕಿ ಹಚ್ಚಿಸುತ್ತೇನೆ. ನಾನು ಕಷ್ಟಪಟ್ಟು ಓದ್ಸಿದ್ರೆ, ನನ್ನ ಮಗನ ದುಡೆಲ್ಲಾ ನುಂಗಿ ನೀರು ಕುಡಿದ್ಲು ಅಂತ ಡಿ.ಕೆ ರವಿ ತಾಯಿ ಗೌರಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ-ಸುಪ್ರಿಯಾ ಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment