ಜನ ವಿರೋಧಿ ಕಾಯ್ದೆ ವಿರೋಧಿಸಿ ಬೃಹತ್ ಪ್ರತಿಭಟನೆ..!

ಸಿಂಧನೂರು: ನಗರದ ಎಪಿಎಂಸಿ ಯಲ್ಲಿ ಇವರು ಗಣೇಶ ದೇವಸ್ಥಾನದಿಂದ ತಹಶಿಲ್ದಾರ ಕಚೇರಿವರೆಗೆ ಯುವ ಕಾಂಗ್ರೆಸ್ ಪಕ್ಷದ ವತಿಯಿಂದ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆ ಮೆರವಣಿಗೆಯನ್ನು ರಾಜ್ಯ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಸವನಗೌಡ ಬಾದರ್ಲಿ ನೇತೃತ್ವದಲ್ಲಿ ಮಾಡಲಾಯಿತು. ಈ ಪ್ರತಿಭಟನೆ ಮೆರವಣಿಗೆ ಉದ್ದಕ್ಕೂ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ತಹಶಿಲ್ದಾರ ಕಚೇರಿ ಮುಂದೆ ಬೃಹತ್ ಪ್ರಮಾಣದಲ್ಲಿ ಸಮಾವೇಶ ನಡೆಸಿದರು. ಈ ಪ್ರತಿಭಟನಾಕಾರರನ್ನು ಉದ್ದೇಶಿಸಿ ಕೆಪಿಸಿಸಿ ಕಾರ್ಯದರ್ಶಿ ಕೆ.ಕರಿಯಪ್ಪ ಮಾತನಾಡಿ ಕೇಂದ್ರ ಗ್ರಾಮದಲ್ಲಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಂತರ ರಾಜ್ಯ ಯುವ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಬಸವನಗೌಡ ಬಾದರ್ಲಿ ಮಾತನಾಡಿ ಮುಖ್ಯಮಂತ್ರಿ ಯಡಿಯೂರಪ್ಪ ಒಬ್ಬ ಡೊಂಗಿ. ರೈತ ಹೆಸರಿನಲ್ಲಿ. ರೈತ ಶಾಲ್ ಕದ್ದು ಪ್ರಮಾಣ ವಚನ ಸ್ವೀಕರಿಸಿ ರೈತ ವಿರೋಧಿ ಕಾಯ್ದೆ ಗಳನ್ನು ಜಾರಿಗೆ ಮಾಡುತ್ತಿದ್ದಾರೆ. ಮೋದಿ ಜನ ಪರ ಕಾಯ್ದೆ ಗಳನ್ನು ಜಾರಿಗೆ ಮಾಡದೆ ಕೇವಲ ಆದನಿ. ಅಂಬಾನಿ ಪರವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ಕೂಡಲೇ ಜನ ವಿರೋಧಿ ಕಾಯ್ದೆ ಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ನಂತರ ತಹಶಿಲ್ದಾರ ಮಂಜುನಾಥ ಭೋಗಾವತಿ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂಧರ್ಭದಲ್ಲಿ ಖಾಜಾ ಹುಸೇನ್ ರೌಡಕುಂದ, ವೆಂಕಟೇಶ, ನಾಗರಾಜ ಬಾದರ್ಲಿ, ದೌಲಸಾಭ್ ದೌಡಮನಿ.ಪ್ರಭು ದೇವರಗುಡಿ.ನಾಗರಾಜ, ಹನುಮೇಶ್ ಬಾಗೋಡಿ ಸೇರಿದಂತೆ ಅನೇಕರು ಭಾಗವಹಿಸಿದರು.

ವರದಿ-ಸೈಯದ್ ಬಂದೇನವಾಜ್ ಎಕ್ಸ್ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment