ಬುದ್ದಿ ಹೇಳುವ ಉಪನ್ಯಾಸಕರಿಗೆ ಗಾಂಧಿಜೀ, ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಎಂದರೆ ತಾತ್ಸಾರವೇ!!!

ತಿಪಟೂರು : ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಭವ್ಯಭಾರತದ ಕನಸು ಇನ್ನೂ ನನಸಾಗದರಿರುವುದು ವಿಷಾದಕರ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಗಾಂಧೀ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೋ ಚಿಕ್ಕಹೆಗ್ಗಡೆ ವಿಷಾದಿಸಿದರು. ಮಹಾತ್ಮ ಗಾಂಧಿಜಿ ಮತ್ತು ಲಾಲ್‌ಬಹದ್ದೂರ್ ಶಾಸ್ತಿç ಜಯಂತಿಗೆ ಕೊರೊನಾ ನಡುವೆ ಇದ್ದದ್ದರಿಂದ ಸಾಮಾಜಿಕ ಅಂತವವನ್ನು ಕಾಪಾಡವುದಕ್ಕಾಗಿ ಪ್ರಾಂಶುಪಾಲರಾದಿಯಾಗಿ ಹೆಚ್ಚಿನ ಉಪನ್ಯಾಸಕರು ಹಾಜರಾಗದೇ ಇರುವುದು ಮಹನೀಯರಿಗೆ ಮಾಡಿದ ಅವಮಾನವೋ ಇಲ್ಲ ಇದಕ್ಕೆ ಹೋಗದೆ ಇದ್ದರು ಯಾರು ಕೇಳುವುದಿಲ್ಲವೆಂಬ ಬೇಜವಾಬ್ದಾರಿಯಲ್ಲದೇ ಬೇರೆ ಕಾರಣವೇ ಇಲ್ಲ. ಇದರ ಬಗ್ಗೆ ಉನ್ನತ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳುವರೇ ಕಾಯ್ದು ನೋಡಬೇಕಾಗಿದೆ. ಉಪನ್ಯಾಸಕರುಗಳು ಸರಿಯಾದ ಸಮಯಕ್ಕೆ ಹಾಜರಾಗದೇ ಇರುವುದು ಮತ್ತು ಬಾರದೇ ಇರುವುದು ಅಕ್ಷಮ್ಯ ಅಪರಾದ ಮಹನೀಯರ ದಿನಚಾರಣೆಗಳೆಂದರೆ ಒಂದುತರಹ ರಜೆಎಂದು ಕೊಂಡಿದ್ದಾರೆ, ಉಪನ್ಯಾಸಕರುಗಳೇ ಈ ರೀತಿ ಮಾಡಿದರೆ ಮಕ್ಕಳಿಗೆ ಮತ್ತು ಜನರಿಗೆ ಏನು ತಿಳಿಸುತ್ತಾರೆ ಎಂದು ರಾಜು ಸಿಂಡಿಕೆಟ್ ಸದಸ್ಯ, ತುಮಕೂರು ವಿ.ವಿ.ವಿಷಾದ ವ್ಯಕ್ತಪಡಿಸಿದರು.

ವರದಿ- ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Please follow and like us:

Related posts

Leave a Comment