ಕರ್ತವ್ಯ ನೆಪದಲ್ಲಿ ಮಾನವೀಯತೆ ಮರೆತ್ರಾ ಅಧಿಕಾರಿಗಳ ವರ್ಗ..!

ಸಿಂಧನೂರು: ನಗರ ಸಭೆ ಪೋಲಿಸ್ ಇಲಾಖೆ ಜಂಟಿಯಾಗಿ ನಗರದ ವಾರ್ಡ್ ನಂ 31 ಏಳುರಾಗಿ (ಡಿ )ಕ್ಯಾಂಪ್ ನಲ್ಲಿ ಸರ್ಕಾರದಿಂದ ಕೊಡಲಾದ ನಿವೇಶನದಲ್ಲಿ ಅನರ್ಹ ಫಲಾನುಭವಿಗಳು ತೆರವು ಕಾರ್ಯಾಚರಣೆ ನಡೆಸಲು ಮುಂದಾದಾಗ ದೊಡ್ಡ ಪ್ರಮಾಣದಲ್ಲಿ ವಿರೋಧ ವ್ಯಕ್ತವಾಯಿತು. ನಿವಾಸಿಗಳು ಅರ್ಹ ಫಲಾನುಭವಿಗಳು ದಯವಿಟ್ಟು ತೆರವು ಮಾಡಬೇಡಿ. ಮತ್ತೊಮ್ಮೆ ಪರಿಶೀಲನೆ ನಡೆಸಿ ಎಂದು ಮನವಿ ಮಾಡಿದರು. ನಾವು 3 ತಿಂಗಳ ಮುಂಚಿತವಾಗಿ ನಿಮಗೆ ನೋಟಿಸ್ ಜಾರಿಗೆ ಮಾಡಿದರು ನೀವು ಖಾಲಿ ಮಾಡಿಲ್ಲ, ಕೋರ್ಟ್ ಆದೇಶ ನೀಡಿದ್ದು ಅದನ್ನು ನಾವು ಪಾಲನೆ ಮಾಡಲೇಬೇಕು ಇಲ್ಲದಿದ್ದರೆ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ನಗರ ಸಭೆ ಪೌರಾಯುಕ್ತ ಆರ್.ವಿರೂಪಾಕ್ಷಿ ಮೂರ್ತಿ ಹೇಳಿದರು. ತೆರವು ಕಾರ್ಯಚರಣೆ ಸ್ಥಳಕ್ಕೆ ಧಾವಿಸಿದ ಲಿಂಗಸೂಗುರ ಸಹಾಯಕ ಆಯುಕ್ತ ರಾಜಶೇಖರ್ ಡಂಬಳ, ಸಿಂಧನೂರು ಉಪಾ ವಿಭಾಗದ ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ, ನಗರ ಸಭೆ ಪೌರಾಯುಕ್ತ ಹಾಗೂ ಪ್ರಗತಿಪರ ಮುಖಂಡ ನಡುವೆ ಮಾತಿನ ಚಕಮಕಿ ನಡೆಯಿತು. ಪ್ರಗತಿಪರ ಮುಖಂಡ ಡಿ.ಹೆಚ್.ಪೂಜಾರ ಲಿಂಗಸೂಗುರ ಸಹಾಯಕ ಆಯುಕ್ತ ರಾಜಶೇಖರ್ ಡಂಬಳ ಬಳಿ ತೆರಳಿ ಇದನ್ನು ಮತ್ತೊಮ್ಮೆ ಕೂಲಂಕಷವಾಗಿ ಪರಿಶೀಲನೆ ನಡೆಸಿ ಅನರ್ಹ ಫಲಾನುಭವಿಗಳು ಕಂಡುಬಂದಲ್ಲಿ ತೆರವು ಮಾಡಿ. ಈ ಕೊರೋನ ಜೊತೆಗೆ ಮಳೆಗಾಲದಲ್ಲಿ ಈ ಬಡ ಕೂಲಿಕಾರರು, ಕಾರ್ಮಿಕ ಜನರನ್ನು ಹೊರಗಡೆ ಹಾಕಿದರೆ ಅವರು ಜೀವನ ಬದಿಗೆ ಬೀಳುತ್ತದೆ ಎಂದು ಮನವಿ ಮಾಡಿದರು. ನಗರ ಸಭೆ ಪೌರಾಯುಕ್ತ ಆರ್.ವಿರೂಪಾಕ್ಷಿ ಮೂರ್ತಿ ಡಿಎಸ್ ಪೂಜಾರ್ ನಡುವೆ ಕೆಲ ಸಮಯ ಮಾತಿನ ಚಕಮಕಿ ನಡೆಯಿತು. ನಿವೇಶನಗಳಿಂದ ಅನರ್ಹ ಫಲಾನುಭವಿಗಳ ತೆರವು ಕಾರ್ಯಚರಣೆಯಲ್ಲಿ ಕೆಲವು ದಿನಗಳಿಂದೇ ಹೆರಿಗೆಯಾದ ಮಹಿಳೆ ಜೊತೆಗೆ ಮಗುವನ್ನು ಹೊರಗಡೆ ಹಾಕುವ ಜೊತೆಗೆ ಅವರ ಸಾಮಾಗ್ರಿಗಳನ್ನು ಹೊರಗಡೆ ಹಾಕಲಾಯಿತು. ಲಿಂಗಸೂರು ಸಹಾಯಕ ಆಯುಕ್ತ ರಾಜಶೇಖರ್ ಡಂಬಳ ಮಾತನಾಡಿ ಸರ್ಕಾರದಿಂದ ಕೊಡಲಾದ ನಿವೇಶನವನ್ನು ಅನರ್ಹ ಫಲಾನುಭವಿಗಳ ನೀಡಲಾಗಿದೆ ಎಂದು ಲೋಕಾಯುಕ್ತ ಕೋರ್ಟ್ ಗೆ ದೂರು ನೀಡಿದ ಹಿನ್ನೆಲೆ ಲೋಕಾಯುಕ್ತ ಕೋರ್ಟ್ ಅನರ್ಹ ಫಲಾನುಭವಿಗಳನ್ನು ತೆರವು ಮಾಡಲು ಆದೇಶ ನೀಡಿದೆ. ಅದರ ಅನ್ವಯ ತೆರವು ಕಾರ್ಯಚರಣೆ ಮಾಡಲಾಯಿತು ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ತಹಶಿಲ್ದಾರ ಮಂಜುನಾಥ ಭೋಗಾವತಿ, ಸಿ.ಪಿ.ಐ.ಜಿ.ಚಂದ್ರಶೇಖರ, ಪಿಎಸ್ಐ ಗಳಾದ ವಿಜಯ ಕ್ರಿಷ್ಣ, ರಾಘವೇಂದ್ರ, ಶಂಭುಲಿಂಗಯ್ಯ ಹಿರೇಮಠ, ಹುಲುಗಪ್ಪ ರಾಠೋಡ್,ಸೇರಿದಂತೆ ನಗರ ಸಭೆ ಸಿಬ್ಬಂದಿ ಗಳು. ಪೋಲಿಸ್ ಸಿಬ್ಬಂದಿ ಗಳು ಈ ತೆರವು ಕಾರ್ಯಾಚರಣೆಯಲ್ಲಿ ಇದ್ದರು.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment