ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮನೆ ಕಳೆದುಕೊಂಡ ಬಡ ವೃದ್ಧೆ..!

ಶಹಾಪುರ : ಮೊನ್ನೆ ಸುರಿದ ಧಾರಕಾರ ಮಹಾಮಳೆಗೆ ಮನೆಯೊಂದು ಸಂಪೂರ್ಣ ಕುಸಿದು ಬಿದ್ದು 1 ಚೀಲ ಜೋಳ 25 ಕೆ.ಜಿ.ಅಕ್ಕಿ,ಹಾಗೂ ದಿನಬಳಕೆ ವಸ್ತುಗಳು ಮಣ್ಣು ಪಾಲಾಗಿರುವ ಘಟನೆ ತಾಲೂಕಿನ ಸಗರ ಗ್ರಾಮದಲ್ಲಿ ಜರುಗಿದೆ. ಗ್ರಾಮದ ಮಲ್ಲಮ್ಮ ಮಹಾಂತಪ್ಪ ಜಗಲಿ ಎಂಬುವವರು ಮನೆ ಕಳೆದುಕೊಂಡ ಬಡ ಕುಟುಂಬದ ಮಹಿಳೆಯಾಗಿದ್ದಾರೆ. ಕೂಲಿನಾಲಿ ಮಾಡಿ ಬದುಕುವ ಮಹಿಳೆಗೆ ಈಗಾ ಸೂರು ಇಲ್ಲದಂತಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಮನೆ ಕಳೆದುಕೊಂಡ ಮಹಿಳೆಗೆ ವಾಸಿಸುವುದಕ್ಕೆ ಸೂರು ಕಲ್ಪಿಸಿ ಕೊಡಬೇಕೆಂದು ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. ಕಳೆದ ಹದಿನೈದು ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಗರ ಗ್ರಾಮದಲ್ಲಿ ಹಲವಾರು ಬಡವರ ಮನೆಗಳು ಬಿದ್ದಿವೆ ಆದ್ದರಿಂದ ಅವರ ಬದುಕು ಬಹಳ ದುಸ್ತರವಾಗಿದೆ. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಗ್ರಾಮ ಲೇಖಪಾಲಕರು ಸೇರಿಕೊಂಡು ಕೂಡಲೇ ಸರ್ವೆ ಮಾಡಿ ತಾಲ್ಲೂಕು ಆಡಳಿತಕ್ಕೆ ವರದಿ ಸಲ್ಲಿಸಿ ಮನೆ ಕಳೆದುಕೊಂಡವರಿಗೆ ಸೂರು ಕಲ್ಪಿಸಿ ಕೊಡಬೇಕು ಇಲ್ಲದಿದ್ದರೆ ಉಗ್ರವಾದ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ರೈತ ಸಂಘದ ಮುಖಂಡರಾದ ಮಹೇಶಗೌಡ ಸುಬೇದಾರ ಅವರು ತಿಳಿಸಿದ್ದಾರೆ.

ವರದಿ- ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment