ಪೊಲೀಸ್ ಸಿಬ್ಬಂದಿಗಳಿಗೆ ಉಚಿತವಾಗಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳ ವಿತರಣೆ..!

ತಿಪಟೂರು: ಪ್ರತಿಯೊಬ್ಬರು ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಂಡು ಮಾಸ್ಕ್ ಧರಿಸಿ ಅಂತರವನ್ನು ಕಾಯುಕೊಳ್ಳುವುದೇ ಸದ್ಯಕ್ಕೆ ಕೊರೊನಾ ಇರುವಂತಹ ತಾತ್ಕಾಲಿಕ ಪರಿಹಾರ ಎಂದು ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ಎಚ್.ಜಿ.ರಾಮಚಂದ್ರ ತಿಳಿಸಿದರು.ನಗರದ ಪೊಲೀಸ್ ಉಪಧೀಕ್ಷಕರ ಕಚೇರಿಯ ಆವರಣದಲ್ಲಿ ತಾಲ್ಲೂಕು ಔಷಧಿ ವ್ಯಾಪಾರಿಗಳ ಸಂಘ ಹಾಗೂ ಕೊಮೆಡ್ ಕೆಮಿಕಲ್ಸ್ ವತಿಯಿಂದ ಪೊಲೀಸ್ ಸಿಬ್ಬಂದಿಗಳಿಗೆ ಉಚಿತವಾಗಿ ರೋಗ ನಿರೋಧಕ ಶಕ್ತಿ ವೃದ್ಧಿಸುವ ಔಷಧಿಗಳನ್ನು ವಿತರಣೆ ಮಾಡಿದರು.ವಿಶ್ವದಾದ್ಯಂತ ಕೋವಿಡ್ ರೋಗಕ್ಕೆ ಅನೇಕ ದೇಶಗಳು ಔಷಧಿಯನ್ನು ಕಂಡು ಹಿಡಿಯಲು ಪ್ರಯತ್ನ ನಡೆಸುತ್ತಿದ್ದು ಇನ್ನೂ ಕಂಡು ಹಿಡಿಯಲು ಸಾಧ್ಯವಾಗಿಲ್ಲ.ಸದ್ಯಕ್ಕೆ ಕೊರೊನಾದಿಂದ ಮುಕ್ತರಾಗಿರಲು ಶುಚಿಯಾದ ಆಹಾರ,ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಹಾರ ಪದಾರ್ಥಗಳನ್ನು ಬಳಸಬೇಕು.ಅಲ್ಲದೇ ಸುರಕ್ಷಿತವಾಗಿ ಮಾಸ್ಕ್ ಧರಿಸಿ ಅಂತರವನ್ನು ಕಾಯ್ದುಕೊಳ್ಳುಬೇಕಿದ್ದು ಜೊತೆಗೆ ಪ್ರತಿಯೊಬ್ಬರು ಸರ್ಕಾರ ಕಾನೂನು, ಮಾರ್ಗದರ್ಶನಗಳನ್ನು ಪಾಲಿಸಬೇಕೆಂದು ಸಾರ್ವಜನಿಕರಲ್ಲಿ ವಿನಂತಿಸಿದರು.ಡಿವೈಎಸ್‌ಪಿ ಚಂದನ್ ಕುಮಾರ್ ಮಾತನಾಡಿ ತಾಲ್ಲೂಕಿನ ಔಷಧಿ ವ್ಯಾಪಾರಿಗಳು ಕೊರೊನಾ ಪ್ರಾರಂಭದಿAದಲೂ ಸಾಮಾಜಿಕವಾಗಿ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದಾರೆ.ಅಲ್ಲದೇ ಕೊರೊನಾಗೆ ಭಯಪಡದೇ ಸಾರ್ವಜನಿಕವಾಗಿ ಪ್ರತಿಯೊಬ್ಬರಲ್ಲಿ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿರುವುದು ಶ್ಲಾಘನೀಯ ಕಾರ್ಯ ಎಂದರು.ಈ ಸಂದರ್ಭದಲ್ಲಿ ನಗರಠಾಣೆಯ ಇನ್ಸ್ಪೆಕ್ಟರ್ ಶಿವಕುಮಾರ್, ಔಷಧಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳಾದ ಸಿದ್ದೇಶ್, ಮಲ್ಲಿಕಾರ್ಜುನ್, ಚಂದ್ರಮೌಳಿ, ಶಶಿಧರ್, ಯೂನಸ್, ರಘು, ಪವನ್ ಇದ್ದರು.

ವರದಿ-ಸಿದ್ದೇಶ್ವರ ಸಿಎನ್ ಎಕ್ಸ್ ಪ್ರೆಸ್ ಟಿವಿ ತಿಪಟೂರು.

Please follow and like us:

Related posts

Leave a Comment