ಆತ್ಯಾಚಾರವನ್ನು ಖಂಡಿಸಿ ಮಡಿವಾಳ ಮಾಚಿದೇವ ಸಮಾಜದ ವತಿಯಿಂದ ಬೃಹತ್ ಪ್ರತಿಭಟನೆ …!

ಸಿಂಧನೂರು : ನಗರದ ಪ್ರವಾಸಿ ಮಂದಿರದಿಂದ ತಾಲ್ಲೂಕು ಮಡಿವಾಳ ಮಾಚಿದೇವ ಸಂಘ ಹಾಗೂ ಮಹಿಳಾ ಘಟಕ ವತಿಯಿಂದ ಉತ್ತರ ಪ್ರದೇಶದ ಹತ್ರಾಸ್ ಗ್ರಾಮದ ಮನಿಷ್ ಮೇಲೆ ನಡೆದ ಆತ್ಯಾಚಾರ ಪ್ರಕರಣವನ್ನು ಖಂಡಿಸಿ ತಹಶೀಲ್ದಾರರ ಕಚೇರಿಯವರೆಗೆ ಬೃಹತ್ ಪ್ರಮಾಣದ ಪ್ರತಿಭಟನೆ ಮೆರವಣಿಗೆ ನಡೆಸಲಾಯಿತು. ಈ ಮೆರವಣಿಗೆ ಉದ್ದಕ್ಕೂ ಕೇಂದ್ರ ಹಾಗೂ ಉತ್ತರ ಪ್ರದೇಶದ ಯೋಗಿನಾಥ್ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.ಪ್ರಗತಿಪರ ಮುಖಂಡ ಹಾಗೂ ಉಪನ್ಯಾಸಕ ಶಂಕರ್ ವಾಲೇಕಾರ್ ಮಾತನಾಡಿ ಉತ್ತರ ಪ್ರದೇಶದ ಹತ್ರಾಸ್ ಗ್ರಾಮದ 19 ವರ್ಷದ ಮನಿಷ್ ವಾಲ್ಮೀಕಿ ಮೇಲೆ ಠಾಕೂರ್ ಸಮುದಾಯದ ನಾಲ್ಕು ಯುವಕರು ಅತ್ಯಾಚಾರ ನಡೆಸಿ ನಾಲಿಗೆ ಕತ್ತರಿಸಿ, ಕುತ್ತಿಗೆ, ಬೆನ್ನು ಮೂಳೆ ಮುರಿದಿದ್ದು, ಸಾವು ಬದುಕಿನ ನಡುವೆ ಹೋರಾಟ ನಡೆಸಿ ಸಾವನ್ನಪ್ಪಿರುವಂತದ್ದು, ಇತ್ತ ಪೋಲಿಸರು ಕುಟುಂಬಕ್ಕೆ ಶವವನ್ನು ಕೊಡದೆ ಉತ್ತರ ಪ್ರದೇಶದ ಯೋಗಿನಾಥ ತನ್ನ ಆಡಳಿತವನ್ನು ದುರುಪಯೋಗ ಪಡಿಸಿಕೊಂಡು ಜಿಲ್ಲಾಧಿಕಾರಿ.ಪೊಲೀಸ್ ಇಲಾಖೆ ಮೂಲಕ ಶವವನ್ನು ನೊಂದ ಕುಟುಂಬಕ್ಕೆ ಕೊಡದೆ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಸುಟ್ಟ ಹಾಕಲಾಗಿದೆ. ಕತ್ತೆ, ಆನೆ, ಸತ್ತರೂ ಬೀದಿಗಿಳಿದು ಪ್ರತಿಭಟಿಸುವ ಶೋಭಾ,ಸ್ಮೃತಿ ಇರಾನಿ,ಸೇರಿದಂತೆ ಇತರೆ ಬಿಜೆಪಿ ಮಹಿಳಾ ಮುಖಂಡರುಗಳು ಯಾಕೆ ಮೌನ ವಹಿಸಿದ್ದೀರಿ ಎಂದು ಪ್ರಶ್ನಿಸಿದರು. ಇನ್ನೂ ಉಪನಾಯಕ ಶಂಕರ್ ಗುರಿಕಾರ್ ಮಾತನಾಡಿ ಸುಗ್ರೀವಾಜ್ಞೆಗಳ ಮೂಲಕ 19 ಕಾಯ್ದೆಗಳನ್ನು ತಿದ್ದುಪಡಿ ಮಾಡುವ ಕೆಂದ್ರ ಸರಕಾರ ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ವಿಧಿಸಲು ಯಾಕೆ ಕಾನೂನನ್ನು ತರಲು ಮುಂದಾಗುತ್ತಿಲ್ಲ.ಕೂಡಲೇ ಅತ್ಯಾಚಾರಿಗಳ ಮೇಲೆ ಉಗ್ರ ಕಠಿಣ ಶಿಕ್ಷೆ ವಿಧಿಸುವಂತೆ ಕಾನೂನನ್ನು ಜಾರಿಗೊಳಿಸಲು ಆಗ್ರಹಿಸಿ ತಹಶೀಲ್ದಾರರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಹಾದೇವಪ್ಪ ಮುಳ್ಳೂರು ಇಜೆ ,ರಾಮಣ್ಣ ಹಂಚಿನಾಳ,ದ್ಯಾಮಣ್ಣ ಮಾನವಿ, ನಾಗರಾಜ್ ಸಾಲಗುಂದ, ರಾಜಪ್ಪ ಬಾದರ್ಲಿ, ಹುಲುಗಪ್ಪ ಬಾದರ್ಲಿ, ಮುದಿಯಪ್ಪ ಕಟ್ಟಿಮನಿ, ನಾಗರಾಜ ಸಿಂಗಾಪುರ್,ಬಸವರಾಜ್ ಕುರುಕುಂದಾ, ರಂಗನಾಥ್ ,ಯಲ್ಲಪ್ಪ ಅರಳಹಳ್ಳಿ, ವಿಜಯ ಕುಮಾರ, ವೀರೇಶ್ ಜಾಲಿಹಾಳ, ಕೃಷ್ಣ ಸಿಂಗಾಪುರ, ಹನುಮೇಶ್, ದೇವೇಂದ್ರಪ್ಪ ಪುಲದಿನ್ನಿ, ಹುಲಿಗಮ್ಮ ಕಟ್ಟಿಮನಿ,ಸುಮಂಗಲಾ,ಶಿಲ್ಪಾ ಸಿದ್ದಾಪುರ, ಸೇರಿದಂತೆ ಬಸವರಾಜ ಬಾದರ್ಲಿ ಭಾಗವಹಿಸಿದ್ದರು.

ವರದಿ : ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment