ತಾಲ್ಲೂಕು ಸರಕಾರಿ ನೌಕರರ ಸಂಘದ ನೂತನ ಅಧ್ಯಕ್ಷ ಶಂಕರ್ ಗೌಡ್ ಪಾಟೀಲ್ ಗೆ ಸನ್ಮಾನ..!

ವಿಜಯಪುರ: ನಿಂಬೆ ನಾಡಿನ ಇಂಡಿ ಪಟ್ಟಣದ ತಾಲೂಕು ಸರಕಾರಿ ನೌಕರ ಸಂಘದ ನೂತನ ಅಧ್ಯಕ್ಷರಾಗಿ ಅಯ್ಕೆಯಾದ ಶಂಕರಗೌಡ ಪಾಟೀಲ್ ರಿಗೆ ತಳವಾರ ಪರಿವಾರ ಸಮಾಜ ಸೇವಾ ಸಂಘದಿಂದ ಸನ್ಮಾನ ಸಮಾರಂಭ ನೆರೆವೆರಿಯಿತು.ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ತಳವಾರ ಪರಿವಾರ ಸಮುದಾಯ ಭವನದಲ್ಲಿ ವಿಶೇಷವಾಗಿ ಸಾಧನೆ ಗೈದಂತಹ ಎಸ್ ಎಸ್ ಎಲ್ ಸಿ ಪರೀಕ್ಷೇಯಲ್ಲಿ ೬೦೭ ಅಂಕ ಪಡೆದ ಚಂದನ ವಾಲಿಕಾರ,ತಾಲೂಕು ಅದರ್ಶ ಶಿಕ್ಷಕ ಭೀಮಾಶಂಕರ ತಳವಾರ ಹಾಗೂ ತಾಲೂಕು ಸರಕಾರಿ ನೌಕರ ಸಂಘದ ನೂತನ ಅದ್ಯಕ್ಷರಾದ ಶಂಕರಗೌಡ ಪಾಟೀಲ್ ರಿಗೆ ಸನ್ಮಾನ ಮಾಡಿದರು.ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷ ದರ್ಮರಾಜ ವಾಲಿಕಾರ ಮಾತಾನಾಡಿ ಸುಮಾರು ವರ್ಷಗಳಿಂದ ನಮ್ಮ ಸಮುದಾಯ ಬೇರೆ ಬೇರೆ ರೀತಿಯಲ್ಲಿ ಶೋಷಣೆಗೆ ಒಳಪಟ್ಟಿದೆ. ನಮ್ಮ ಸಮುದಾಯಕ್ಕೆ ಸರಕಾರದದಿಂದ ಸಿಗಬೇಕಾಗದ ಸವಲತ್ತುಗಳು ಕಾಣದ ಶಕ್ತಿಯಿಂದ ವಂಚಿತಗೊಂಡಿವೆ. ಇನ್ಮುಂದೆ ಇಂತಹ ಸಾಧಕರ ಶಕ್ತಿಯಿಂದ ಸಮುದಾಯಕ್ಕೆ ಶಕ್ತಿ ಬರುತ್ತದೆ.ಇಂತಹ ಸಾಧಕರು ನಮ್ಮ ಸಮುದಾಯಕ್ಕೆ ಮಾದರಿ ಎಂದು ಹೇಳಿದರು.ಈ ಸಂದರ್ಭದಲ್ಲಿ ತಾಲೂಕು ಸರಕಾರಿ ನೌಕರ ಸಂಘದ ನೂತನ ಅಧ್ಯಕ್ಷ ಶಂಕರಗೌಡ ಪಾಟೀಲ್ ಮಾತಾನಾಡಿ ಸಾಧನೆಗೆ ಜಾತಿ,ಧರ್ಮ ಅವಶ್ಯಕತೆ ಇಲ್ಲ. ಸತತ ಪ್ರಯತ್ನ ಅವಶ್ಯಕತೆ ಇದೆ ನಮ್ಮ ಸಮುದಾಯದಲ್ಲಿ ಶೈಕ್ಷಣಿಕ, ಅರ್ಥಿಕ,ರಾಜಕೀಯ, ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದೆವೆ.ನಮ್ಮ ದುರ್ಬಲತೆಗೆ ನಾವೇ ಕಾರಣ ನಾವು ಎಲ್ಲಿಯವರೆಗೆ ಶಿಕ್ಷಣವಂತರಾಗೊದಿಲ್ಲ ಎಲ್ಲಿಯವರೆಗೆ ನಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದಿಲ್ಲವೊ ಅಲ್ಲಿಯವರೆಗೆ ನಾವು ಎಲ್ಲವನ್ನೂ ಕಳೆದುಕೊಂಡಂತೆ ಮೊದಲು ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಹೇಳಿದರು. ಅನಿಲ ಜಮಾದಾರ,ಹುಚ್ಚಪ್ಪ ತಳವಾರ,ಡಾ.ಎಸ್.ಎಮ್.ಕೊಳಿ, ಎಸ್.ಜೆ.ವಾಲಿಕಾರ,ವಿಶ್ವನಾಥ ಕೌಲಗಿ,ಡಾ.ಸುರೇಶ ವಿಜಯಪುರ,ಶಂಕರ್ ಜಮಾದಾರ. ಶ್ರೀನಿವಾಸ ತಳವಾರ, ಚಂದ್ರಮ ತಳವಾರ ಚಿದಾನಂದ ವಾಲಿಕಾರ,ಶಿವಶಂಕರ ಕೊಳಿ,,ಜೆಟ್ಟಪ್ಪ ತಳವಾರ, ಯಶವಂತ ಬಿರಾದಾರ, ಮಪರಮೇಶ್ವರ ವಾಲಿಕಾರ, ಅಂಬಿರಿಷ್ ಕೊರಳ್ಳಿ ಉಪಸ್ಥೀತರಿದ್ದರು.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ

Please follow and like us:

Related posts

Leave a Comment