ಉತ್ತರಪ್ರದೇಶದ ಮನಿಷ ಅತ್ಯಾಚಾರ ಖಂಡಿಸಿ ವಿವಿಧ ಪ್ರಗತಿಪರ ಸಂಘಟನೆಗಳಿಂದ ಪ್ರತಿಭಟನೆ..!

ರಾಯಚೂರು: ರಾಯಚೂರು ಜಿಲ್ಲೆಯ ಮಸ್ಕಿ ತಾಲ್ಲೂಕಿನ ಹಾಲಾಪೂರ ಗ್ರಾಮದಲ್ಲಿ ಇಂದು ವಾಲ್ಮೀಕಿ ಯುವಕ ಸಂಘ ಹಾಗೂ ವಿವಿಧ ಪ್ರಗತಿಪರ ಸಂಘಟನೆಗಳಿಂದ ಉತ್ತರ ಪ್ರದೇಶದ ಮನಿಷಾ ಅತ್ಯಾಚಾರ ಖಂಡಿಸಿ ಬೃಹತ್ ಪ್ರತಿಭಟನೆ ಮಾಡಲಾಯಿತು. ಕರಿಯಪ್ಪ ತಾತನ ದೇವಸ್ತಾನದಿಂದ ನಾಡ ಕಛೇರಿಯವರೆಗೆ ಸಾಗಿದ ಪ್ರತಿಭಟನಕಾರರು ಈ ಸಂದರ್ಭದಲ್ಲಿ ಮಾತನಾಡಿದ ಪೂಜ್ಯರಾದ ಆತ್ಮನಂದ ಸ್ವಾಮಿಗಳು ಉತ್ತರಪ್ರದೇಶದ ಹತ್ರಾಸ್ನ ಮನಿಷಾ ಆತ್ಯಾಚಾರ ಘಟನೆಯು ತೀರಾ ಖಂಡನೀಯ,ಇಡಿ ದೇಶವೆ ತಲೆತಗ್ಗಿಸುಂತವಹ ಕೃತ್ಯವಾಗಿದೆ ,ಅಲ್ಲಿಯ ಮುಖ್ಯಮಂತ್ರಿ ಮತ್ತು ಪೊಲಿಸ್ ವ್ಯವಸ್ಥೆ ದಲಿತರ ಮೇಲೆ ಮಾಡಿರುವ ಅವಮಾನ ಇದಕ್ಕೆ ಅಲ್ಲಿಯ ಸರಕಾರವೆ ನೇರ ಹೊಣಿಯಾಗಿದೆ ಅದಕ್ಕಾಗಿ ತಪ್ಪಿತಸ್ಥರನ್ನ ಗಲ್ಲಿಗೆ ಏರಿಸಬೇಕೆಂದು ಆಗ್ರಹಿಸಿದರು. ನಂತರ ಮಾತನಾಡಿದ ಬಾಲಾಸ್ವಾಮಿ ಜಿನ್ನಾಪೂರ ಉತ್ತರಪ್ರದೇಶದ ಮುಖ್ಯ ಮಂತ್ರಿಗಳು ಅತ್ಯಾಚಾರ ಘಟನೆಯನ್ನು ಸಂಪೂರ್ಣ ವಾಗಿ ಪರಿಹರಿಸುವ ಕೆಲಸ ಮಾಡಿಲ್ಲ,ಅಲ್ಲಿಯ ಪೋಲಿಸ್ ರು ರಕ್ಷಣೆ ಮಾಡುವುದು ಬಿಟ್ಟು ಸರಕಾರದ ಏಜೆಂಟ್ ರಂತೆ ಕೆಲಸ ಮಾಡುತ್ತಿದ್ದಾರೆ,ಕೇಂದ್ರ ಸರಕಾರ ಸಹ ಈ ವಿಷಯದಲ್ಲಿ ಎಡವಿದ್ದು ,ಅದಕ್ಕೆ ನೊಂದ ಕುಟುಂಬಕ್ಕೆ ಸಾಂತ್ವನ ಹೇಳದ ಹೇಡಿ ಸರಕಾರವಾಗಿದೆ ಎಂದು ಹೇಳಿದರು. ನಂತರ ಮಾತನಾಡಿದ ರಂಗಪ್ಪ ನಾಯಕ ಬೂಪಲದೊಡ್ಡಿ ಒಬ್ಬ ದಲಿತ ಮಹಿಳೆ ಮೇಲೆ ನಡೆದ ಅತ್ಯಾಚಾರವು ದೇಶಕ್ಕೆ ಗೊತ್ತಿದ್ದರೂ, ಅಲ್ಲಿಯ ಸರಕಾರ ಅದನ್ನ ಬೇರೆ ರೀತಿಯಲ್ಲಿ ಹೇಳುತ್ತಿದ್ದಾರೆ,ಅಂದರೆ ಸತ್ಯವನ್ನು ಮುಚ್ಚಿ ಹಾಕುವ ಕೆಲಸ ಉತ್ತರಪ್ರದೇಶದ ಭಂಡ ಸರಕಾರ ಮಾಡುತ್ತಿದೆ ಅದಕ್ಕೆ ಅಲ್ಲಿಯ ಮುಖ್ಯ ಮಂತ್ರಿಗಳಿಗೆ ನಾಚಿಕೆ ಬರಬೇಕು ಎಂದೂ ಹೇಳಿದರು. ನಂತರ ನಾಡ ಕಚೇರಿಯ ಪ್ರಭಾರಿ ಕಂದಾಯ ನಿರೀಕ್ಷರಾದ ಗಂಗಪ್ಪ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು,ಪ್ರತಿಭಟನೆಯಲ್ಲಿ ಅಂಬಣ್ಣ ನಾಯಕ ದನಮರಡಿ,ಕರಿಯಪ್ಪ ಎಚ್ ಕೆ,ಕನಕರಡ್ಡಿ ನಾಯಕ,ಬಸವರಾಜ ನಾಯಕ ತುಗ್ಗಲದಿನ್ನಿ ಅದ್ಯಕ್ಷರು ತಾ.ವಾ.ಸಂಘ, ಶೇಖರಯ್ಯಸ್ವಾಮಿ, ಬಸವರಾಜ ಪೊ.ಪಾ ,ನಾಗೇಶ ನಾಯಕ, ಲಕ್ಷ್ಮಣ ನಾಯಕ, ಉಪಸ್ಥಿತರಿದ್ದರು.

ವರದಿ-ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ಮಸ್ಕಿ

Please follow and like us:

Related posts

Leave a Comment