ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಹೊಸಹಳ್ಳಿ ಕ್ಷೇತ್ರದ ಪುಟ್ಟಸ್ವಾಮಿ ಆಯ್ಕೆ..!

ಮಳವಳ್ಳಿ: ಮಳವಳ್ಳಿ ತಾಲ್ಲೂಕು ಪಂಚಾಯಿತಿ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷ ಹೊಸಹಳ್ಳಿ ಕ್ಷೇತ್ರದ ಪುಟ್ಟಸ್ವಾಮಿ ಅವರು 13-12 ಮತಪಡೆದು ಆಯ್ಕೆಯಾಗುವ ಮೂಲಕ ಜೆಡಿಎಸ್ ನಡೆಸಿದ ತಂತ್ರಗಾರಿಕೆಯನ್ನು ಕಾಂಗ್ರೆಸ್ ಪಕ್ಷ ವಿಫಲಗೊಳಿಸಲು ಯಶ್ವಸಿಯಾಯಿತು. ಪಕ್ಷದ ಆತಂರಿಕ ಒಪ್ಪಂದಂತೆ ಅಧ್ಯಕ್ಷರಾಗಿದ್ದ ಸುಂದರೇಶ್ ಅವರ ರಾಜೀನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನಕ್ಕೆ ಇಂದು ಚುನಾವಣೆ ನಿಗದಿಯಾಗಿತ್ತು. ಒಟ್ಟು 25 ಸದಸ್ಯ ಬಲದ ತಾಲ್ಲೂಕು ಪಂಚಾಯತಿಯಲ್ಲಿ ಕಾಂಗ್ರೆಸ್ 14 ಮತ್ತು ಜೆಡಿಎಸ್ 11 ಸದಸ್ಯರು ಆಯ್ಕೆಯಾಗಿದ್ದರು. ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಿಂದ ಹೊಸಹಳ್ಳಿ ಕ್ಷೇತ್ರದ ಪುಟ್ಟಸ್ವಾಮಿ ಮತ್ತು ಜೆಡಿಎಸ್ ಪಕ್ಷದ ಕಲ್ಕುಣಿ ಕ್ಷೇತ್ರದ ಸೋಮಶೇಖರ್ ಅಲಿಯಾಸ್ ನಟೇಶ್ ಅವರು ನಾಮಪತ್ರ ಸಲ್ಲಿಸಿ ಅಂತಿಮವಾಗಿ ಕಣದಲ್ಲಿದ್ದರು. ಕೈ ಎತ್ತುವ ಮೂಲಕ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಲ್ಲಿ ಪುಟ್ಟಸ್ವಾಮಿ 13 ಮತ ಪಡೆದು ಅಧ್ಯಕ್ಷರಾಗಿ ಆಯ್ಕೆಯಾದರು. 12 ಮತ ಪಡೆದ ಜೆಡಿಎಸ್ ನ ಸೋಮಶೇಖರ್ ಒಂದು ಮತದಿಂದ ಪರಾಭವಗೊಂಡರು. ಜೆಡಿಎಸ್ ತಂತ್ರಗಾರಿಕೆ ರೂಪಿಸಿ ಕಾಂಗ್ರೆಸ್ ಪಕ್ಷದ ಸದಸ್ಯರಾದ ದೊಡ್ಡಯ್ಯ. ಶಂಕರ್ ಅವರ ಬೆಂಬಲ ಪಡೆದಿತು.ಜೆಡಿಎಸ್ ತಂತ್ರ ಅರಿತಿದ್ದ ಕಾಂಗ್ರೆಸ್ ತಳಗವಾದಿ ಕ್ಷೇತ್ರದ ಜೆಡಿಎಸ್ ಪಕ್ಷದ ಸದಸ್ಯೆ ಶಿಲ್ಪಾ ಮಹೇಶ್ ಅವರನ್ನು ಸೆಳೆದು ತಾಲ್ಲೂಕು ಪಂಚಾಯಿತಿಯಲ್ಲಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶ್ವಸಿಯಾಯಿತು.ಜೆಡಿಎಸ್ ನ ವರು ಕಾಂಗ್ರೆಸ್ ನ ಇಬ್ಬರು ಸದಸ್ಯರನ್ನು ಸೆಳೆದರೂ, ಜೆಡಿಎಸ್ ನ ಒಬ್ಬ ಸದಸ್ಯೆ ಕಾಂಗ್ರೆಸ್ ಬೆಂಬಲಿಸಿದ ಹಿನ್ನಲೆಯಲ್ಲಿ ಜೆಡಿಎಸ್ ಅಧಿಕಾರ ಹಿಡಿಯುವಲ್ಲಿ ಮುಗ್ಗರಿಸಿ ಮುಖಭಂಗ ಅನುಭವಿಸಿದೆ. ಉಪವಿಭಾಗಾಧಿಕಾರಿ ಸೂರಜ್ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ನೂತನ ಅಧ್ಯಕ್ಷರಾಗಿ ಪುಟ್ಟಸ್ವಾಮಿ ಆಯ್ಕೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು.ಹನುಮಂತು ಅವರು ತಳಗವಾದಿಯಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸೋತ ಮನೆಯಲ್ಲಿದ್ದರು. ಅವರನ್ನು ಪಕ್ಷಕ್ಕೆ ಕರೆತಂದ ನಮ್ಮ ನಾಯಕರಾದ ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಜಿಲ್ಲಾ ಪಂಚಾಯಿತಿಗೆ ಕಾಂಗ್ರೆಸ್ ಟಿಕೆಟ್ ನೀಡಿ ಗೆಲ್ಲಿಸಿ ಜಿಲ್ಲಾ ಪಂಚಾಯಿತಿ ವಿರೋಧ ಪಕ್ಷದ ನಾಯಕರನ್ನಾಗಿ ಮಾಡಿದ್ದಕ್ಕೆ ಸ್ವಲ್ಪನಾದರೂ ನಿಷ್ಠೆ ಬೇಡವೇ ಎಂದು ವಾಗ್ದಾಳಿ ನಡೆಸಿದರು. ತಾ.ಪಂ.ಸದಸ್ಯ ದೊಡ್ಡಯ್ಯ 30 ತಿಂಗಳು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಅಧಿಕಾರ ಪಡೆದು ಮೋಸ ಮಾಡಿದ್ದಾರೆ. ಇಂತಹ ಪಕ್ಷ ದ್ರೋಹಿಗಳಿಗೆ ಮುಂದಿನ ದಿನಗಳಲ್ಲಿ ಮತದಾರರು ತಕ್ಕಪಾಠ ಕಲಿಸಬೇಕು. ನಮ್ಮ ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರನ್ನು ಮಾಜಿ ಸಚಿವ ಪಿ.ಎಂ.ನರೇಂದ್ರಸ್ವಾಮಿ ಅವರು ಗುರುತಿಸಿ ಅಧಿಕಾರ ನೀಡುತ್ತಿದ್ದಾರೆ ಎಂದು ತಿಳಿಸಿದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment