ದಾಖಲೆ ಇಲ್ಲದೇ ವಾಹನಗಳು ರೋಡ್ ಗೆ ಎಂಟ್ರಿ, ಪೋಲಿಸರಿಂದ ಬಿತ್ತು ದಂಡ-ವಾಹನ ಸವಾರರಿಗೆ ಶಾಕ್..!

ಅರಕಲಗೂಡು: ರಾಜ್ಯ ಸರ್ಕಾರ ಹಾಗೂ ಜಿಲ್ಲಾವರಿಷ್ಠಾಧಿಕಾರಿ, ಪೋಲಿಸ್ ಇಲಾಖೆ ಇವರ ಆದೇಶದ ಮೇರೆಗೆ ಪಟ್ಟಣದ ರಸ್ತೆಯಲ್ಲಿ ಸಂಚಾರದಲ್ಲಿ ತೊಡಗಿದ ವಾಹನಗಳ ದಾಖಲೆಗಳನ್ನು ತಪಾಸಣೆ ಮಾಡಿ ಸರಿಯಾದ ದಾಖಲೆ ಇಲ್ಲದ ವಾಹನಗಳಿಗೆ ಪೋಲಿಸ್ ಇಲಾಖೆ ವತಿಯಿಂದ ದಂಡಾ ವಿಧಿಸಲಾಯಿತು. ಪಟ್ಟಣದಲ್ಲಿ ಇಂದು ಬೆಳಗ್ಗೆ ತಾಲ್ಲೂಕು ಕಛೇರಿ ಸಮೀಪದ ಹೆಚ್ ಕೆ ನಂಜೇಗೌಡ ವೃತ್ತ ಬಳಿ ಸಬ್ ಇನ್ಸ್ ಪೆಕ್ಟರ್ ಸುರೇಶ್ ನೇತೃತ್ವದಲ್ಲಿ ಸಂಚಾರಿ ವಾಹನಗಳ ದಾಖಲೆ ಪರಿಶೀಲನೆ ಹಾಗೂ ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದ ನಾಗರೀಕರನ್ನು ತಪಾಸಣೆ ಕಾರ್ಯ ಕೈಗೊಂಡ ಪೋಲಿಸ್ ಇಲಾಖೆ ದ್ವಿಚಕ್ರ ವಾಹನ ದಾಖಲೆಗಳು RTO ಇಲಾಖೆ ನಿಯಮ ಅನುಸಾರವಾಗಿ ಸರಿ ಇಲ್ಲದ ವಾಹನಗಳಿಗೆ ತಲಾ 500 ರೂಪಾಯಿಗಳನ್ನು ವಿಧಿಸಿ ಸುಮಾರು 13 ಸಾವಿರದ೧೦೦ ರೂಗಳನ್ನು ಸಂಗ್ರಹಿಸಲಾಗಿದೆ ಎಂದು ಇಲಾಖೆ ಮೂಲಗಳಿಂದ ತಿಳಿದುಬಂದಿದೆ. ವಾಹನ ಸಂಚಾರರು ಕೋವಿಡ್-19 ಅವಾಂತರದಲ್ಲಿ ಜನಸಾಮಾನ್ಯರಿಗೆ ಜೀವನ ನಿರ್ವಹಿಸುವುದೇ ಕಷ್ಟಕರವಾಗಿರುವ ಸಮಯದಲ್ಲಿ ಸಂಚಾರಿ ವಾಹನಗಳ ದಾಖಲೆ ಸರಿಯಲ್ಲ ಎಂದು ದಂಡ ವಿಧಿಸುತ್ತಿರುವುದು ಸರ್ಕಾರದ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ವರದಿ-ಸಂತೋಷ್ ಎಕ್ಸ್ ಪ್ರೆಸ್ ಟಿವಿ ಅರಕಲಗೂಡು

Please follow and like us:

Related posts

Leave a Comment