ಸರ್ಕಾರಿ ಶಾಲೆಯಲ್ಲಿ ಕಳ್ಳರ ಕೈಚಳಕ- 2.5 ಲಕ್ಷ ಬೆಲೆಬಾಳುವ ವಸ್ತುಗಳು ಕಳವು..!

ನಂಜನಗೂಡು: ಸರ್ಕಾರಿ ಶಾಲೆಗೆ ಖತರ್ನಾಕ್ ಖದೀಮರು ಕನ್ನ ಹಾಕಿದ್ದು,ಶಾಲೆ ಬೀಗ ಹೊಡೆದು ಕಂಪ್ಯೂಟರ್ ಗಳನ್ನು ಹೊತ್ತೊಯ್ದೀರುವ ಘಟನೆ ನಂಜನಗೂಡು ತಾಲೂಕಿನ ಹೆಡತಲೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.ಸುಮಾರು 2.50 ಲಕ್ಷ ಬೆಲೆಬಾಳುವ 21 ಕಂಪ್ಯೂಟರ್ ಹಾಗೂ ಪರಿಕರಗಳು ಕಳ್ಳತನವಾಗಿದ್ದು, ಸ್ಥಳಕ್ಕೆ ಸ್ಥಳೀಯ ಪೋಲಿಸರು ಡಾಗ್ ಸ್ಕ್ವಾಡ್ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರೀಶಿಲನೆ ನಡೆಸುತ್ತಿದ್ದಾರೆ.ಇನ್ನೂ ಕವಲಂದೆ ಸ್ಥಳೀಯ ಪೋಲಿಸರು ಪ್ರಕರಣ ದಾಖಲಿಸಿಕೊಂಡಿದ್ದು ಕಳ್ಳರಿಗಾಗಿ ಶೋಧಕಾರ್ಯ ನಡೆಸುತ್ತಿದ್ದಾರೆ.

ವರದಿ- ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Please follow and like us:

Related posts

Leave a Comment