ಕಷ್ಟದಲ್ಲಿ ನೀನು ನನ್ನ ಜೊತೆ ನಿಂತಂತೆ ನಾನು ನಿನ್ನ ಜೊತೆ ನಿಲ್ಲುವೆ : ಮೇಘನಾ ರಾಜ್

ಬೆಂಗಳೂರು : ಕಷ್ಟದಲ್ಲಿ ನೀನು ನನ್ನ ಜೊತೆ ಇದ್ದಂತೆ ನಾನು ಎಂದಿಗೂ ನಿನ್ನ ಜೊತೆಯಲ್ಲೇ ನಿಲ್ಲುವೆ ಎಂದು ನಟಿ ಮೇಘನಾ ರಾಜ್, ಮೈದುನಾ ಧ್ರವ ಸರ್ಜಾಗೆ ಹುಟ್ಟುಹಬ್ಬದ ಶುಭಾಷಯ ಕೋರಿದ್ದಾರೆ. ನಿನ್ನೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ, ಅಣ್ಣನಿಲ್ಲದೇ ತಮ್ಮ 32ನೇ ಹುಟ್ಟುಹಬ್ಬ ಆಚರಣೆ ಮಾಡಿಕೊಂಡಿದ್ದಾರೆ. ಪ್ರೀತಿಯ ಮೈದುನಗೆ ವಿಷ್ ಮಾಡಿದ ಅತ್ತಿಗೆ ಮೇಘನಾ, ನಿನ್ನ ಅಣ್ಣ ಚಿರುವಿನ ಹಾಗೆ ನೀನು ಸದಾ ನಗುತ್ತಿರು ಎಂದು ಆರ್ಶೀವಾದ ಮಾಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಫೋಟೊ ಹಂಚಿಕೊಂಡಿರುವ ಮೇಘನಾ, ‘ ನನ್ನ ಕಷ್ಟ ಕಾಲದಲ್ಲಿ ನೀನು ಹೇಗೆ ನನ್ನ ಜೊತೆಯಲ್ಲಿ ಗಟ್ಟಿಯಾಗಿ ನಿಂತಿದ್ದೆ, ಹಾಗೆಯೇ ನಾನು ಕೂಡ ಶಾಶ್ವತವಾಗಿ ನಿನ್ನ ಪಕ್ಕ ನಿಲ್ಲುತ್ತೇನೆ.ಪ್ರಾಮಿಸ್ ಬರ್ತಡೇ ಬಾಯ್.ಸದಾ ನೀನು ಖುಷಿಯಾಗಿರು ಎಂದು ಆಶೀಸುತ್ತೇನೆ. ನಮ್ಮ ಚಿರು ನಕ್ಕಂತೆ ನೀನು ನಗುತ್ತಿರು.ಹ್ಯಾಪಿಸ್ಟ್ ಬರ್ತ್ಡೇ ಬಿಲ್’ ಎಂದು ಭಾವನಾತ್ಮಕವಾಗಿ ಬರೆದುಕೊಂಡಿದ್ದಾರೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment