ಹಾಥ್ರಸ್ ನ ಅತ್ಯಾಚಾರ ಪ್ರಕರಣ ಖಂಡಿಸಿ ಬೃಹತ್ ಪ್ರತಿಭಟನೆ..!

ನಂಜನಗೂಡು: ನಂಜನಗೂಡಿನ ಮಿನಿವಿಧಾನಸೌಧದ ಕಚೇರಿ ಮುಂಭಾಗದಲ್ಲಿ ನಾಯಕ ಸಮುದಾಯ, ರೈತ ಸಂಘ, ಮತ್ತು ದಲಿತ ಸಂಘಟನೆಗಳ ಒಕ್ಕೂಟದಿಂದ ಉತ್ತರ ಪ್ರದೇಶದ ಹಾಥ್ರಸ್ ನ ಅತ್ಯಾಚಾರ ಪ್ರಕರಣ ಖಂಡಿಸಿ ಬೃಹತ್ ಪ್ರತಿಭಟನೆಯನ್ನು ಮಾಡಲಾಯಿತು. ಉತ್ತರಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶವನ್ನು ವ್ಯಕ್ತಪಡಿಸಲಾಯಿತು. ಉತ್ತರಪ್ರದೇಶದ ಈ ಪ್ರಕರಣದಿಂದ ಇಡೀ ದೇಶವೇ ತಲೆತಗ್ಗಿಸುವಂತಾಗಿದೆ ಮನಿಷಾ ವಾಲ್ಮೀಕಿ ಹಾಗೂ ವಿಮಲ ವಿಕ್ರಂ ಅತ್ಯಾಚಾರದಲ್ಲಿ ಭಾಗಿಯಾಗಿರುವ ಕಾಮುಕರನ್ನು ಗಲ್ಲಿಗೇರಿಸಬೇಕು ನಿರ್ಭಯಳ ಪ್ರಕರಣದಂತೆ ಮನಿಷಾ ವಾಲ್ಮೀಕಿ ಮತ್ತು ವಿಮಲ ವಿಕ್ರಂ ಕುಟುಂಬಕ್ಕೆ ಸೂಕ್ತ ಪರಿಹಾರ ದೊರಕಿಸಿ ಕೊಡಬೇಕು ,ಉತ್ತರಪ್ರದೇಶದಲ್ಲಿ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು,ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕೆಂದು ಸರ್ಕಾರಕ್ಕೆ ಆಗ್ರಹಿಸುವ ಮೂಲಕ ಪ್ರತಿಭಟನೆಯನ್ನು ನಡೆಸಲಾಯಿತು.ಇನ್ನೂ ಉತ್ತರಪ್ರದೇಶದ ಮುಖ್ಯಮಂತ್ರಿಯ ಬೇಜವಾಬ್ದಾರಿ ಕಾರ್ಯ ವೈಖರಿಯಿಂದ ಇಂತಹ ಘನಗೋರ ಘಟನೆಗಳು ಮತ್ತೆ ಮತ್ತೆ ಮರುಕಳಿಸುತ್ತಿದೆ ಆದ್ದರಿಂದ ಸರ್ಕಾರ ಆರೋಪಿಗಳ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ರಾಜ್ಯಪಾಲರಿಗೆ ನಂಜನಗೂಡಿನ ತಹಸೀಲ್ದಾರ್ ಮೂಲಕ ಮನವಿ ಪತ್ರವನ್ನು ಸಲ್ಲಿಸಲಾಯಿತು. ಇನ್ನೂ ಪ್ರತಿಭಟನೆಯಲ್ಲಿ ನಾಯಕ ಸಮುದಾಯದ ತಾಲೂಕು ಅಧ್ಯಕ್ಷ ಬಂಗಾರ ಶೆಟ್ಟಿ, ರೈತ ಸಂಘದ ಜಿಲ್ಲಾಧ್ಯಕ್ಷ ವಿದ್ಯಾಸಾಗರ್, ದಲಿತ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಮಲ್ಲಹಳ್ಳಿ ನಾರಾಯಣ, ಚುಂಚನಹಳ್ಳಿ ಮಲ್ಲೇಶ್ ನಗರ್ಲೆ, ವಿಜಯಕುಮಾರ್, ಶಂಕರಪುರ, ಸುರೇಶ್, ಮಂಜು ಸೇರಿದಂತೆ ನೂರಾರು ಪ್ರತಿಭಟನೆಕಾರರು ಸ್ಥಳದಲ್ಲಿ ಹಾಜರಿದ್ದರು.

ವರದಿ- ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Please follow and like us:

Related posts

Leave a Comment