ಉದ್ಘಾಟನೆಗೊಂಡ ಕೆಲವೇ ಗಂಟೆಗಳಲ್ಲಿ ಅಟಲ್ ಸುರಂಗದಲ್ಲಿ ಮೂರು ಅಪಘಾತ..!

ಹಿಮಾಚಲಪ್ರದೇಶ: ಕಳೆದ ಶನಿವಾರವಷ್ಟೇ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟನೆ ಮಾಡಿದ್ದರು.ಲೋಕಾರ್ಪಣೆಗೊಳಿಸಿ ಕೇವಲ 72 ಗಂಟೆಗಳಲ್ಲಿ ಈ ಸುರಂಗ ಮಾರ್ಗದಲ್ಲಿ ಮೂರು ಅಪಘಾತ ಸಂಭವಿಸಿದೆ.ಸುರಂಗ ಉದ್ಘಾಟನೆಯಾದಗಿನಿಂದ ಇಲ್ಲಿ ವೇಗದ ಹಾಗೂ ನಿರ್ಲಕ್ಷ್ಯದ ಚಾಲನೆ, ಪ್ರವಾಸಿಗರಿಂದ ಅನುಚಿತ ವರ್ತನೆ, ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳು ವರದಿಯಾಗುತ್ತಲೇ ಇವೆ.ಅಲ್ಲದೆ,ವಾಹನ ಚಲಾಯಿಸುತ್ತಲೇ ಅನೇಕರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಅಪಾಯವನ್ನು ಆಹ್ವಾನಿಸುತ್ತಿದ್ದಾರೆ ಎಂದು ಗಡಿ ರಸ್ತೆ ಸಂಸ್ಥೆ ಅಧಿಕಾರಿಗಳು ತಿಳಿಸಿದ್ದಾರೆ.ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 3 ರಂದು 9.02 ಕಿ.ಮೀ ಉದ್ದದ ಸುರಂಗ ಮಾರ್ಗವನ್ನು ಉದ್ಘಾಟಿಸಿದ್ದರು. ಸುರಂಗ ಮಾರ್ಗದಲ್ಲಿ ಗರಿಷ್ಠ ವೇಗದ ಮಿತಿಯನ್ನು 80 ಕಿ.ಮೀ ನಿಗದಿಪಡಿಸಲಾಗಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರಸ್ ಟಿವಿ ಬೆಂಗಳೂರು

Please follow and like us:

Related posts

Leave a Comment