ಫೈನ್ ಕಟ್ಟಿದ್ದೀನಿ ಇನ್ನೂ ಮಾಸ್ಕ್ ಹಾಕಲ್ಲ ಅಂತಾ ಮೆಜೆಸ್ಟಿಕ್ ನಲ್ಲಿ ವ್ಯಕ್ತಿಯೊಬ್ಬನ ರಂಪಾಟ..!

ಬೆಂಗಳೂರು: ಬೆಂಗಳೂರಿನಲ್ಲಿ ಮಾಸ್ಕ್ ಹಾಕದೇ ಓಡಾಡೋರಿಗೆ ಮಾರ್ಷಲ್ ಗಳು 1 ಸಾವಿರ ರೂಪಾಯಿ ದಂಡ ಹಾಕುತ್ತಿದ್ದಾರೆ. ಹಾಕಿದ್ರೂ ನನ್ನಿಷ್ಟ ಎಂಬಂತೆ ಜನ ಡೋಂಟ್ ಕೇರ್ ಅನ್ನೋ ಹಾಗೇ ಓಡಾಡುತ್ತಿದ್ದಾರೆ.ಇದೇ ರೀತಿ ನಾನು ಯಾವುದಕ್ಕೂ ಕೇರ್ ಮಾಡಲ್ಲ ಅಂತಾ ಅಂದುಕೊಂಡು ಮಾಸ್ಕ್ ಇಲ್ಲದೇ ಓಡಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಇವತ್ತು ಮೆಜೆಸ್ಟಿಕ್ ನಲ್ಲಿ ಮಾರ್ಷಲ್ ಫೈನ್ ಹಾಕಿದ್ರು. ಆಗದರೆ ದಂಡ ಕಟ್ಟಿದ ಮೇಲೆ ಆ ವ್ಯಕ್ತಿಯ ರಂಪಾಟ ನೋಡಿ ಮಾರ್ಷಲ್ ಗಳೇ ಸುಸ್ತಾಗಿ ಹೋಗಿದ್ದರು.ದಂಡ ಕಟ್ಟಿದ ಬಳಿಕ ವ್ಯಕ್ತಿ ನಾನು ದಂಡ ಕಟ್ಟಿದೀನಿ ಹಾಗಾಗಿ ಇನ್ನು 24 ಗಂಟೆಗಳ ಕಾಲ ನಾನು ಮಾಸ್ಕ್ ಹಾಕಲ್ಲ ಅಂತಾಪಟ್ಟು ಹಿಡಿದಿದ್ದಾನೆ. ಕೂಲಿ ಮಾಡಿ ದಿನಕ್ಕೆ 300 ರೂ ಸಂಪಾದನೆ ಮಾಡ್ತಿದ್ದೆ, ಇದೀಗ ಮಾಸ್ಕ್ ಇಲ್ಲ ಅಂತ ಸಾವಿರ ರೂ ದಂಡ ಕಟ್ಟಿಸಿ ಕೊಂಡಿದ್ದಾರೆ. ನಾನು ಕಟ್ಟಿರುವ ದಂಡದ ವ್ಯಾಲಿಡಿಟಿ 24 ಗಂಟೆ. ನಾಳೆ ಬೆಳಗ್ಗೆ 11 ಗಂಟೆ ವರೆಗೂ ಮಾಸ್ಕ್ ಧರಿಸಲ್ಲ ಅಂತ ಹೈಡ್ರಾಮಾ ಸೃಷ್ಟಿಸಿದ್ದಾನೆ.ವ್ಯಕ್ತಿಯ ರಂಪಾಟಕ್ಕೆ ಮಾರ್ಷಲ್ಸ್ ಗಳೇ ಸುಸ್ತಾಗಿದ್ದಾರೆ. ಮಾಸ್ಕ್ ಹಾಕಿದ್ರೆ ಉಸಿರಾಟ ಮಾಡೋಕೆ ಕಷ್ಟ ಆಗುತ್ತೆ, ಉಸಿರಾಟ ಇಲ್ಲಾಂದ್ರೆ ಸಾಯುತ್ತೀನಿ, ನಾನು ಬದುಕಬೇಕು ಅಂದ್ರೆ ಮಾಸ್ಕ್ ಹಾಕೋದಿಲ್ಲ ಅಂತ ಪಟ್ಟು ಹಿಡಿದಿದ್ದಾನೆ. ಸ್ವತಃ ಮಾರ್ಷಲ್ಸ್ ಮಾಸ್ಕ್ ಧರಿಸುವಂತೆ ಹೇಳಿದ್ರೂ ನೋ ನೋ ಮಾಸ್ಕ್ ಹಾಕಲ್ಲ ಅಂತ ಆತ ವಾದ ಮಾಡಿದ್ದಾನೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment