ಸಂಗೀತ ನಿರ್ದೇಶಕ ಕೆ. ಕಲ್ಯಾಣ್ ದಾಂಪತ್ಯ ಕಲಹ ಸುಖಾಂತ್ಯ..!

ಬೆಳಗಾವಿ: ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯ ಕಲಹ, ಕೊನೆಗೂ ಸುಖಾಂತ್ಯ ಕಂಡಿದೆ.ಕೆ.ಕಲ್ಯಾಣ್ ಪತ್ನಿ ಬೆಳಗಾವಿಯ ಕೌಟುಂಬಿಕ ಕೋರ್ಟ್ ನಲ್ಲಿ ಸಲ್ಲಿಸಿದ್ದಂತೆ ಡೈವೋರ್ಸ್ ಅರ್ಜಿಯನ್ನು ವಾಪಾಸ್ ಪಡೆಯುವಂತೆ ಮಾಡಿದಂತ ಕೆ ಕಲ್ಯಾಣ್ ಮನವಿಗೆ ಪತ್ನಿ ಅಶ್ವಿನಿ ಒಪ್ಪಿಗೆ ಸೂಚಿಸಿದ್ದಾರೆ.ಹೀಗಾಗಿ ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯ ಕಲಹ ಕೊನೆಗೂ ಸುಖಾಂತ್ಯ ಕಂಡಿದೆ. ಮಾಟ,ಮಂತ್ರದಿಂದಾಗಿ ಪ್ರೇಮಕವಿ ಕೆ.ಕಲ್ಯಾಣ್ ದಾಂಪತ್ಯದಲ್ಲಿ ಬಿರುಕು ಉಂಟಾಗಿತ್ತು.ಇದೇ ಕಾರಣದಿಂದಾಗಿ ಕೆ.ಕಲ್ಯಾಣ್ ಮಾಟ-ಮಂತ್ರ ಮಾಡಿಸಿದ್ದಾರೆ. ನನ್ನ ಪತ್ನಿಯ ಖಾತೆಯಿಂದ ಹಣ ತೆಗೆದಿದ್ದಾರೆ ಎಂಬುದಾಗಿ ಬೆಳಗಾವಿಯ ಮಾಳಮಾರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಈ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದಂತ ಪೊಲೀಸರು,ಶಿವಾನಂದ ಸಾಲಿ ಎಂಬುವರನ್ನು ಬಂಧಿಸಿದ್ದರು.ಈ ಬಳಿಕ ಕೆ.ಕಲ್ಯಾಣ್ ಪತ್ನಿ ಡೈವೋರ್ಸ್ ಕೋರಿ, ಬೆಳಗಾವಿ ಕೌಟುಂಬಿಕ ನ್ಯಾಯಾಲಯದಲ್ಲಿ ಜೂನ್.16ರಂದು ಅರ್ಜಿ ಸಲ್ಲಿಸಿದ್ದರು.ಇಂದು ಇಂತಹ ಅರ್ಜಿಯ ವಿಚಾರಣೆ ವೇಳೆ ಪತಿ-ಪತ್ನಿಯರನ್ನು ಕೌನ್ಸಿಲಿಂಗ್ ಒಳಪಡಿಸಿದ ವೇಳೆ, ಪ್ರೇಮಕವಿ ಕೆ.ಕಲ್ಯಾಣ್ ಅವರು ತಮ್ಮ ಪತ್ನಿ ಅಶ್ವಿನಿಯವರನ್ನು ಅರ್ಜಿ ವಾಪಾಸ್ ಪಡೆಯಲು ಮನವೊಲಿಸಿದರು. ಕೆ.ಕಲ್ಯಾಣ್ ಅವರ ಮಾತಿಗೆ ಒಪ್ಪಿದಂತ ಪತ್ನಿ ಅಶ್ವಿನಿ, ಡೈವೋರ್ಸ್ ಅರ್ಜಿಯನ್ನು ವಾಪಾಸ್ ಪಡೆಯುವಂತ ನಿರ್ಧಾರವನ್ನು ಕೈಗೊಂಡಿದ್ದಾರೆ ಎನ್ನಲಾಗಿದೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment