ತಮ್ಮ ಮುದ್ದು ಕಂದಮ್ಮನಿಗೆ ಕನ್ನಡ ಎಂದು ಹೆಸರಿಟ್ಟ ದಂಪತಿ..!

ಉಡುಪಿ: ಬೆಂಗಳೂರಿನ ಕನ್ನಡಾಭಿಮಾನಿ ಉದ್ಯಮಿಯೊಬ್ಬರು ತಮ್ಮ ಮುದ್ದು ಕಂದಮ್ಮಳಿಗೆ ಕನ್ನಡ ಎಂದು ಹೆಸರಿಡುವ ಮೂಲಕ ಕನ್ನಡ ಪ್ರೇಮ ಮೆರೆದಿದ್ದಾರೆ. ಇದೀಗ ದಂಪತಿಯ ಕನ್ನಡ ಪ್ರೇಮ ಎಲ್ಲೆಡೆ ವೈರಲ್ ಆಗಿದೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನೆಂಪುವಿನ ಪ್ರತಾಪ್ ಶೆಟ್ಟಿ ಹಾಗೂ ಪತ್ನಿ ಪ್ರತಿಮಾ ಶೆಟ್ಟಿ ದಂಪತಿ ಅಪ್ಪಟ ಕನ್ನಡ ಅಭಿಮಾನಿಯಾಗಿದ್ದು,ತಮ್ಮ ಮುದ್ದು ಮಗಳಿಗೆ ಕನ್ನಡ ಎಂದು ಹೆಸರಿಟ್ಟಿದ್ದಾರೆ. ಪ್ರತಾಪ್ ಶೆಟ್ಟಿ ಅವರು ಮಗುವಿಗೆ ಹೆಸರಿಡಬೇಕು ಅಂದುಕೊಂಡಾಗ ಥಟ್ಟನೆ ಹೊಳೆದಿದ್ದು ಕನ್ನಡ. ಹೀಗಾಗಿ ಪ್ರತಾಪ್ ಶೆಟ್ಟಿ ಅವರು ತಮ್ಮ ಮಗಳಿಗೆ ಕನ್ನಡ ಎಂದು ಹೆಸರಿಟ್ಟಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment