ಅತ್ತೆ ಮಾತಿಗೆ ತಿರುಗೇಟು ಕೊಟ್ಟ ಡಿ.ಕೆ.ರವಿ ಪತ್ನಿ ಕುಸುಮಾ..!

ಬೆಂಗಳೂರು: ಮೊನ್ನೆಯಷ್ಟೇ ಡಿ ಕೆ ರವಿ ತಾಯಿ ಗೌರಮ್ಮ ,ಸೊಸೆ ಕುಸುಮಾ ಅವರಿಗೆ ನನ್ನ ಮಗನ ಹೆಸರು ಬಳಸಿಕೊಂಡು ಚುನಾವಣೆಗೆ ನಿಂತರೆ ಹುಷಾರ್ ಅಂತಾ ಎಚ್ಚರಿಕೆಯನ್ನು ಕೊಟ್ಟಿದ್ದರು.ಅದರ ಬೆನ್ನಲ್ಲೇ ಅತ್ತೆಯ ಹೇಳಿಕೆಗೆ ಇದೀಗ ಡಿ ಕೆ ರವಿ ಪತ್ನಿ ಕುಸುಮಾ ಅವರು ತಿರುಗೇಟು ಕೊಟ್ಟಿದ್ದಾರೆ.ನಾನು ಹನುಮಂತರಾಯಪ್ಪನ ಮಗಳ ಜೊತೆಗೆ,ಡಿಕೆ ರವಿ ಪತ್ನಿ ಕೂಡ ಹೌದು ಎಂಬುದಾಗಿ ಅತ್ತೆಯ ಮಾತಿಗೆ, ಸೊಸೆ ಕುಸುಮಾ ಅಚ್ಚರಿಯ ಹೇಳಿಕೆ ನೀಡಿದ್ದಾರೆ.ಈ ಕುರಿತಂತೆ ರಾಜರಾಜೇಶ್ವರಿ ನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಯಾದ ನಂತ್ರ ಕುಸುಮಾ ಅವರು ಸುದ್ದಿಗಾರರಿಗೆ ಮೊದಲಿಗೆ ಪ್ರತಿಕ್ರಿಯಿಸಿದ್ದು, ನಾನು ಯಾವುದೇ ಹೇಳಿಕೆಗಳಿಗೂ ತಲೆ ಕೆಡಿಸಿಕೊಳ್ಳುವುದಿಲ್ಲ.ನನಗೆ ನನ್ನ ಕ್ಷೇತ್ರದ ಅಭಿವೃದ್ಧಿ ಮುಖ್ಯ. ರಾಜರಾಜೇಶ್ವರಿ ಕ್ಷೇತ್ರದಲ್ಲಿ ಕೆಲಸ ಮಾಡದೇ ನಕಲಿ ಬಿಲ್ ಮಾಡಿದ್ದಾರೆ.ಚುನಾವಣೆಯ ಪ್ರಚಾರದಲ್ಲಿ ಜನರಿಗೆ ಈ ಬಗ್ಗೆ ಮನವರಿಕೆ ಮಾಡುತ್ತಾ ಮತ ಯಾಚಿಸುವುದಾಗಿ ಹೇಳಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment