ಹರಪನಹಳ್ಳಿ ಜಿಲ್ಲಾ ಘೋಷಣೆಗೆ ಒತ್ತಾಯಿಸಿ ರಸ್ತೆ ತಡೆ ಚಳುವಳಿ..!

ಬಳ್ಳಾರಿ: ಹರಪನಹಳ್ಳಿ ಜಿಲ್ಲಾ ಹೋರಾಟ ಸಮಿತಿಯ ನೇತೃತ್ವದಲ್ಲಿ ಇಂದು ಹರಪನಹಳ್ಳಿ ಪ್ರವಾಸಿ ಮಂದಿರ ವೃತ್ತದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲದವರೆಗೆ ರಾಜ್ಯ ಹೆದ್ದಾರಿ ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡಿದರು. ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯಗಳಿಗೆ ಪ್ರಥಮ ಆದ್ಯತೆ ಅನ್ವಯ ಹರಪನಹಳ್ಳಿ ನೂತನ ಜಿಲ್ಲೆಯಾಗಿ ಘೋಷಣೆಯಗಬೇಕು. ಎಂದು ಒತ್ತಾಹಿಸಿದರು. ಬಳ್ಳಾರಿಯಿಂದ ಹರಪನಹಳ್ಳಿ ದೂರವಾಗಲಿದ್ದು 25-30, ಕಿ.ಮಿ. ವ್ಯಾಪ್ತಿಯೊಳಗಿನ ಹಡಗಲಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಕೂಡ್ಲಿಗಿ, ತಾಲೂಕು ಒಳಗೊಂಡ ಹರಪನಹಳ್ಳಿನ್ನು ನೂತನ ಜಿಲ್ಲೆಯನ್ನಾಗಿ ಘೋಷಣೆ ಮಾಡುವಂತೆ ಪ್ರತಿಭಟನಾ ನಿರತರು ಆಗ್ರಹಿಸಿದರು.ಮುಖ್ಯಮಂತ್ರಿಗಳಾದ ಶ್ರೀ ಬಿಎಸ್ ಯಡಿಯೂರಪ್ಪ ರವರಿಗೆ ಶಿರಸ್ತೇದಾರರಾದ ವಿರುಪಾಕ್ಷ ಶೆಟ್ಟಿ ಅವರ ಮುಖಾಂತರ ಮನವಿ ಪತ್ರ ನೀಡಿದರು. ಈ ಸಂದರ್ಭದಲ್ಲಿ ಹೊಸಳ್ಳಿ ಮಲ್ಲೇಶ್, ಹೆಚ್. ವೆಂಕಟೇಶ್, ಡಿ.ಎಸ್.ಎಸ್ ಮುಖಂಡರಾದ ಮೈಲಪ್ಪ, ಓ.ಮಹಾಂತೇಶ್, ಅಂಬೇಡ್ಕರ್ ತಾಲೂಕ ಅಧ್ಯಕ್ಷರಾದ ನಿಚ್ಚವನ ಹಳ್ಳಿ ಭೀಮಪ್ಪ,ಕಾಲದವರೆಗೆ ರಸ್ತೆತಡೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ವರದಿ-ಮೆಹಬೂಬ್ ಸಾಬ್ ಎಕ್ಸ್ ಪ್ರೆಸ್ ಟಿವಿ ಬಳ್ಳಾರಿ

Please follow and like us:

Related posts

Leave a Comment