ಅಂಬೇಡ್ಕರ್ ವೃತ್ತದಲ್ಲಿ ವಿವಿಧ ಸಂಘಟನೆಗಳ ಕಾರ್ಯಕರ್ತರಿಂದ ಪ್ರತಿಭಟನೆ..!

ಪಾವಗಡ: ಪಾವಗಡ ವಿವಿಧ ದಲಿತ ಅಹಿಂದ, ಅಲ್ಪಸಂಖ್ಯಾತರ ಸಂಘಗಳ ವತಿಯಿಂದ ಉತ್ತರ ಪ್ರದೇಶದಲ್ಲಿ ದಲಿತ ಹೆಣ್ಣುಮಗಳಾದ ಮನಿಷಾ ಎಂಬ ಯುವತಿಯ ಮೇಲೆ ಅತ್ಯಾಚಾರವೆಸಗಿ ನಾಲಿಗೆ ಕತ್ತರಿಸಿ ದುಷ್ಕೃತ್ಯ ಎಸಗಿದ ರಾಕ್ಷಸರುಗಳಿಗೆ ಶೀಘ್ರವಾಗಿ ಮರಣದಂಡನೆ ಶಿಕ್ಷೆಗೆ ಗುರಿ ಪಡಿಸಬೇಕೆಂದು ಆಗ್ರಹಿಸಿ ಪ್ರಮುಖ ಬೀದಿಯಲ್ಲಿ ಪ್ರತಿಭಟನೆಯನ್ನು ನಡೆಸಿದರು. ಇನ್ನೂ ಯುಪಿ ಪೋಲಿಸ್, ಸಿಎಂ ಯೋಗಿ ಆದಿತ್ಯನಾಥ್, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತಪಡಿಸಿದರು. ಪುರಸಭಾ ಸದಸ್ಯ ಬಾಲಸುಬ್ರಹ್ಮಣ್ಯಂ ಮಾತನಾಡಿ ಬಿಜೆಪಿ ನೇತೃತ್ವದ ಯುಪಿ ಸರ್ಕಾರವನ್ನು ವಜಾಗೊಳಿಸುವಂತೆ ಆಗ್ರಹಿಸಿ ಉತ್ತರಪ್ರದೇಶದ ಹತ್ರಾಸ್ ನಲ್ಲಿ ನಡೆದ ಘಟನೆ ಖಂಡಿಸಿ ತಕ್ಷಣವೇ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳಬೇಕು ಎಂದರು. ಈ ವೇಳೆ ಮುಸ್ಲಿಂ ಮುಖಂಡ ರಿಜ್ವಾನ್ ,ತಾಲ್ಲೂಕು ಪಂಚಾಯತ್ ಸದಸ್ಯ ರವಿಕುಮಾರ್ ಲೋಕೇಶ್ ಪಾಳೆಯಗಾರ, ಬಿಎಸ್ಪಿ ಮಂಜು, ಮಾನಂಶಶಿ. ಪುರಸಭಾ ಸದಸ್ಯ ವಿಜಯ್ ಕುಮಾರ್,ನಾಗರಾಜ್, ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.

ವರದಿ-ಇಮ್ರಾನ್ ಎಕ್ಸ್ ಪ್ರೆಸ್ ಟಿವಿ ಪಾವಗಡ

Please follow and like us:

Related posts

Leave a Comment