ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಬೇಕು – ಬಸವರಾಜ ಸಿನ್ನೂರ.

ಶಹಾಪುರ : ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಓದಿ ಸಾಧನೆ ಮಾಡಿ ಉತ್ತಮ ಬದುಕು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಬಸವರಾಜ ಸಿನ್ನೂರು ಹೇಳಿದರು. ನಗರದ ಶ್ರೀ ಗುರು ಸಿದ್ಧಾರೂಢ ದಿಗ್ಗಿ ಪದವಿ ಮಹಾವಿದ್ಯಾಲಯದ ಬಿ.ಎ. ಹಾಗೂ ಬಿ.ಕಾಂ.ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿರುವ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವಿಸುವುದರ ಮೂಲಕ ಉತ್ತಮ ಸಂಸ್ಕಾರವನ್ನು ಪಡೆಯಬೇಕು ಎಂದು ಸಂಸ್ಥೆಯ ಅಧ್ಯಕ್ಷರಾದ ಮಹೇಂದ್ರ ಕುಮಾರ್ ದಿಗ್ಗಿ ಹೇಳಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ತಾವು ಕಾಲೇಜಿನಲ್ಲಿ ಕಳೆದ ದಿನಮಾನಗಳು ಗುರುಗಳೊಂದಿಗೆ ಹೊಂದಿರುವ ಬಾಂಧವ್ಯವನ್ನು ಸವಿಸ್ತಾರವಾಗಿ ಹಂಚಿಕೊಂಡು ಭಾವುಕರಾದರು. ಕಾಲೇಜಿನ ಪ್ರಾಂಶುಪಾಲರಾದ ಎಂ.ಎಂ.ಪರಮೇಶ್ವರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ವೇದಿಕೆಯ ಮೇಲೆ ಮುಖ್ಯ ಅತಿಥಿಗಳಾಗಿ ಅಮರೇಶ್ ದಿಗ್ಗಿ,ಮೌನೇಶ್ ಶಹಾಪುರ, ಹನುಮಂತ್ ಜಮಾದಾರ್,ರಾಜೇಂದ್ರ ಕುಮಾರ್ ಬಾಸುತ್ಕರ್,ಹಾಗೂ ಇತರರು ಉಪಸ್ಥಿತರಿದ್ದರು ಈ ಕಾರ್ಯಕ್ರಮವನ್ನು ಚಂದ್ರಶೇಖರ್ ನಾಗಶೆಟ್ಟಿ ನಿರೂಪಿಸಿದರು,ಆದಪ್ಪ ಹೊಸಮನಿ ಪ್ರಾರ್ಥಿಸಿದರು ನೀಲಗಂಗಾ ಸ್ವಾಗತಿಸಿದರು ಷಣ್ಮುಖಪ್ಪ ವಂದಿಸಿದರು.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment