ಇದ್ಯಾವುದೋ ಕೇಸರು ಗದ್ದೆಯಲ್ಲ ,ಇನ್ಯಾವುದೋ ಕುಗ್ರಾಮವು ಅಲ್ಲ- ನಗರಸಭೆಗೆ ಸೇರಿದ ಮುಖ್ಯರಸ್ತೆಯ ಪರೀಸ್ಥಿತಿ..!

ನಂಜನಗೂಡು: ಇದ್ಯಾವುದೋ ಕಾಡಂಚಿನ ಅಥವಾ ಕುಗ್ರಾಮವೊ ಎಂದು ತಿಳಿಯಬೇಡಿ,ಇದು ನಂಜನಗೂಡಿನ ಶಾಸಕ ಹರ್ಷವರ್ಧನ್ ಅವರು ಪ್ರತಿನಿಧಿಸುವ ನಂಜನಗೂಡು ನಗರಸಭೆಗೆ ಸೇರಿದ ಮುಖ್ಯರಸ್ತೆ, ನಂಜನಗೂಡಿನ ಪ್ರತಿಷ್ಠಿತ ಶಾಲೆ ಸಿಟಿಜನ್ ಶಾಲಾ ಹಿಂಭಾಗವಿರುವ ರಸ್ತೆ ಹಳ್ಳಕೊಳ್ಳಗಳಿಂದ ಕೂಡಿ ಕೆಸರುಗದ್ದೆಯಂತಾಗಿದೆ. ಸೂಕ್ತವಾದ ಚರಂಡಿ ವ್ಯವಸ್ಥೆ ಇಲ್ಲದೇ ಚರಂಡಿ ನೀರು ಮತ್ತು ಮಳೆ ನೀರು ನಿಂತು ಗಬ್ಬೆದ್ದು ನಾರುತ್ತಿದೆ.ಇಲ್ಲಿ ಹತ್ತಾರು ಪ್ರತಿಷ್ಠಿತ ಬಡಾವಣೆಗಳು ಸೇರಿದಂತೆ ಹುಲ್ಲಹಳ್ಳಿ ರಸ್ತೆಯಿಂದ ದೇವಿರಮನಹಳ್ಳಿ ರಸ್ತೆಗೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಇದಾಗಿದೆ ಆದರೂ ಇಲ್ಲಿನ ಅಧಿಕಾರಿಗಳು ಮಾತ್ರ ರಸ್ತೆ ಕಾಮಗಾರಿ ನಡೆಸದೇ ತಮಗೇನು ಸಂಬಂಧವೇ ಇಲ್ಲದಂತೆ ವರ್ತಿಸುತ್ತಿದ್ದಾರೆ. ಕೆಸರುಮಯವಾಗಿರುವ ಈ ರಸ್ತೆಯಲ್ಲಿ ಸಾರ್ವಜಜನಿಕರು ಸಂಚರಿಸಲು ಹರಸಾಹಸ ಪಡುವಂತಾಗಿದೆ.ಇನ್ನೂ ಇಲ್ಲಿ ಪ್ರಭಾವಿಗಳಿಂದ ರಸ್ತೆ ಒತ್ತುವರಿಯಾಗಿದ್ದರೂ ಕೂಡ ಅಧಿಕಾರಿಗಳು ಮಾತ್ರ ಕಂಡು ಕಾಣದಂತೆ ವರ್ತಿಸುತ್ತಿದ್ದಾರೆ. ನಂಜನಗೂಡಿನ ನಾಗರೀಕರು ಕಳೆದ ಎರಡು ವರ್ಷಗಳಿಂದ ಇದೇ ರೀತಿ ತೊಂದರೆ ಅನುಭವಿಸುತ್ತಿದ್ದು, ರಸ್ತೆಯಲ್ಲಿ ತಿರುಗಾಡಲು ಸಾಧ್ಯವಿಲ್ಲದೆ ರಸ್ತೆ ಬದಲಿಸಿ ಓಡಾಡುವ ಪರಿಸ್ಥೀತಿ ಇಲ್ಲಿಯಾ ಜನರದ್ದಾಗಿದೆ.ಇಷ್ಟೆಲ್ಲಾ ಸಮಸ್ಯೆಯಿದ್ದರೂ ಇಲ್ಲಿನ ಅಧಿಕಾರಿಗಳೂ ಮಾತ್ರ ಇದ್ಯಾವುದಕ್ಕೂ ಕ್ಯಾರೆ ಅನ್ನುತ್ತಿಲ್ಲಾ ಇನ್ಮುಂದೆಯಾದ್ರೂ ಸಂಬಂಧಪಟ್ಟ ಜನಪ್ರತಿನಿಧಿಗಳು ಅಧಿಕಾರಿಗಳ ಕಿವಿ ಹಿಂಡಿ ರಸ್ತೆ ಅಭಿವೃದ್ಧಿ ಪಡಿಸಲು ಮುಂದಾಗುವರೇ ಎಂದು ಕಾದುನೋಡಬೇಕಿದೆ.

ವರದಿ-ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Please follow and like us:

Related posts

Leave a Comment